ಸ್ಯಾನ್ ಫ್ರಾನ್ಸಿಸ್ಕೋ: ಕೋವಿಡ್ ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ 2 ವರ್ಷಗಳ ಬಳಿಕ ತನ್ನ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ರದ್ದು ಮಾಡಿ ಕಚೇರಿಗೆ ಕರಿಸಿಕೊಳ್ಳಲು ಆ್ಯಪಲ್ ಕಂಪನಿ ಮುಂದಾಗಿದೆ.
ಏಪ್ರಿಲ್ 11 ರಿಂದ ಎಲ್ಲ ಸಿಬ್ಬಂದಿ ಕಚೇರಿಗೆ ಬರುವಂತೆ ಆ್ಯಪಲ್ ಕಂಪನಿ ತಿಳಿಸಿರುವುದಾಗಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಈ ಸಂಸ್ಥೆ ಹೆಚ್ಚಿನ ಕಾರ್ಪೊರೇಟ್ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿತ್ತು.
ಕ್ಯಾಲಿಫೋರ್ನಿಯಾ ಸೇರಿದಂತೆ ಅಮೆರಿಕದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಇದೀಗ ಸಿಬ್ಬಂದಿ ಕಚೇರಿಗಳಿಗೆ ಮತ್ತೆ ತೆರಳುವಂತೆ ಸೂಚಿಸಿದೆ. ಗೂಗಲ್ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ರದ್ದು ಮಾಡಿ ಏಪ್ರಿಲ್ 4 ರಿಂದ ಕಚೇರಿಗೆ ಬರುವಂತೆ ಸೂಚಿಸಿತ್ತು. ಇದೀಗ ಆ್ಯಪಲ್ ಸಂಸ್ಥೆ ಕೂಡ ಜಾಗತಿಕವಾಗಿ ರಿಟರ್ನ್-ಟು-ಆಫೀಸ್ ಯೋಜನೆ ಜಾರಿ ಮಾಡಿದೆ.
ಇದನ್ನೂ ಓದಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ: ಎಲ್‌ಐಸಿ ಐಪಿಒ ಮುಂದೂಡಿಕೆ ಸಾಧ್ಯತೆ