ನವದೆಹಲಿ: ಅಮೆಜಾನ್ ಕಂಪನಿಯ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಕಂಪನಿಯು ಗ್ರಾಹಕರಿಗೆ ಹಲವಾರು ಆಫರ್ಗಳನ್ನು ನೀಡಿದೆ. ಅಮೆಜಾನ್ ಕಂಪನಿಯು ಅಮೆರಿಕ ಬಿಟ್ಟರೆ ಭಾರತದಲ್ಲಿಯೇ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ.
ಅಮೆಜಾನ್ ವಾರ್ಷಿಕೋತ್ಸವದ ಆಫರ್ ಸೆಪ್ಟೆಂಬರ್ 24 ರಿಂದ 29ರ ವರೆಗೆ ಲಭ್ಯ ಇರಲಿದೆ. ಒಂದೂವರೆ ಸಾವಿರ ರೂಪಾಯಿಗಿಂತ ಹೆಚ್ಚಿನ ದರದ ವಸ್ತುಗಳನ್ನು ಖರೀದಿ ಮಾಡಿದರೆ, ಶೇಕಡಾ 20 ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದು. ಲ್ಯಾಪ್‌ಟಾಪ್‌ಗಳು, ಪ್ರಿಂಟರ್‌ಗಳು, ಟೆಲಿವಿಷನ್‌ಗಳು, ಆಫೀಸ್ ಫರ್ನಿಚರ್, ಪೀಠೋಪಕರಣ, ಕಿಚನ್ ಐಟಮ್ಸ್ ಸೇರಿ ವಿವಿಧ ಬಗೆಯ ವಸ್ತುಗಳು ಲಭ್ಯವಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರಿಗೆ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ಸೇರಿ ಅಗತ್ಯ ವಸ್ತುಗಳನ್ನು ತ್ವರಿತ ಗತಿಯಲ್ಲಿ ಪೂರೈಸಲಿದೆ.
ನಾಲ್ಕು ವರ್ಷದ ವಾರ್ಷಿಕೋತ್ಸವದ ಕುರಿತು ಮಾತನಾಡಿರುವ ಅಮೆಜಾನ್ ಬ್ಯುಸಿನೆಸ್ನ ನಿರ್ದೇಶಕ ಸುಚಿತ್ ಸುಭಾಸ್, ನಾವು ಭಾರತದಲ್ಲಿ ನಾಲ್ಕು ವರ್ಷಗಳ ಮೈಲಿಗಲ್ಲನ್ನು ಪೂರೈಸಿದ್ದೇವೆ. ನಮ್ಮ ಗ್ರಾಹಕರು ಮತ್ತು MSME ಮಾರಾಟ ಪಾಲುದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದ ಮಾರುಕಟ್ಟೆಯು ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದೆ. ನಮ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಕೆಲವು ಆಫರ್ಗಳನ್ನು ನೀಡುವ ಮೂಲಕ ನಮ್ಮ ಗ್ರಾಹಕರೊಂದಿಗೆ ಸಂಭ್ರಮಾಚರಣೆ ಮಾಡಲು ಬಯಸುತ್ತೇವೆ ಎಂದಿದ್ದಾರೆ.
ಗ್ರಾಹಕರಿಗೆ ಅಮೆಜಾನ್ ನೀಡಿರುವ ಕೆಲ ಬಿಗ್ ಆಫರ್ಗಳು ಇಂತಿವೆ.
- ಲ್ಯಾಪ್ಟಾಪ್ಗಳಿಗೆ ಶೇಕಡಾ 30 ರಷ್ಟು ರಿಯಾಯಿತಿ
- ಕಿಚನ್ ಮತ್ತು ಆಫೀಸ್ ಫರ್ನಿಚರ್ಗಳ ಮೇಲೆ ಶೇಕಡಾ 70 ರಷ್ಟು ರಿಯಾಯಿತಿ
- ಪ್ರಿಂಟರ್‌ಗಳು ಮತ್ತು ಇಂಕ್‌ಗಳ ಮೇಲೆ ಶೇ30ರ ವರೆಗೆ ರಿಯಾಯಿತಿ
- ಗಿಫ್ಟ್ಗಳ ಬೆಲೆ 199 ರಿಂದ ಪ್ರಾರಂಭವಾಗುತ್ತದೆ
- ವಾರ್ಷಿಕೋತ್ಸವ ಮಾರಾಟದ ಎಲ್ಲಾ ಕೊಡುಗೆಗಳನ್ನು Amazon.in ನಲ್ಲಿ ಪರಿಶೀಲಿಸಿ.
ಅಮೆಜಾನ್ ಬ್ಯುಸಿನೆಸ್ ಒಂದು ವ್ಯಾಪಾರ ಸ್ನೇಹಿ ಮಾರುಕಟ್ಟೆಯಾಗಿದೆ. ವಿವಿಧ MSME ಮತ್ತು ಐಟಿ ಸೇವೆಗಳು, ಆರೋಗ್ಯ ರಕ್ಷಣೆ, ಉತ್ಪಾದನೆ, ಶಿಕ್ಷಣ, ಎನ್‌ಜಿಒ, ಸ್ಟಾರ್ಟ್ಅಪ್‌ಗಳು ಮತ್ತು ದೊಡ್ಡ ಸಂಸ್ಥೆಗಳ ವ್ಯಾಪಾರ ಸಂಗ್ರಹಣೆ ಅಗತ್ಯಗಳನ್ನು ಪೂರೈಸಲಾಗುತ್ತದೆ. ಪಾರದರ್ಶಕ ಶಾಪಿಂಗ್ಗಾಗಿ ಅಮೆಜಾನ್ ಅನ್ನು ಸ್ಥಾಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, https://business.amazon.in ಗೆ ಭೇಟಿ ನೀಡಿ