ನವದೆಹಲಿ: ಅಭಿವೃದ್ಧಿ ಹೊಂದುತ್ತಿರುವ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಕೋವಿಡ್ 19 ಲಸಿಕೆ ಪೂರೈಸುತ್ತಿರುವ ಭಾರತಕ್ಕೆ ಆಫ್ರಿಕನ್, ಕೆರಿಬಿಯನ್ ಮತ್ತು ಪೆಸಿಫಿಕ್ ರಾಷ್ಟ್ರಗಳ ಗುಂಪು ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಕ್ಯಾರಿಕೊಮ್ ರಾಷ್ಟ್ರಗಳ ಪರವಾಗಿ ಸೇಂಟ್ ಲೂಸಿಯಾ ಕೃತಜ್ಞತೆ ಸಲ್ಲಿಸಿದ್ದು, ಭಾರತವು ದಕ್ಷಿಣ ಆಫ್ರಿಕಾದವರಿಗೆ ಲಸಿಕೆ ಸರಬರಾಜು ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.
ಕ್ಯಾರಿಕೊಮ್ ಕೆರಿಬಿಯನ್ ರಾಷ್ಟ್ರಗಳು ಗುಂಪಾಗಿದ್ದು ಆಂಟಿಗುವಾ, ಬಾರ್ಬುಡಾ, ಬಹಾಮಾಸ್, ಬೆಲೀಜ್, ಗಯಾನಾ, ಜಮೈಕಾ, ಹೈಟಿ ಮತ್ತು ಸೇಂಟ್ ಲೂಸಿಯಾ ಸೇರಿವೆ.
ಸಾಂಕ್ರಾಮಿಕ ಸಮಯದಲ್ಲಿ ಅವರ ಔದಾರ್ಯ ಮತ್ತು ಐಕ್ಯತೆಗಾಗಿ ಭಾರತ ಸರ್ಕಾರಕ್ಕೆ ದಕ್ಷಿಣ ಆಫ್ರಿಕಾ ಹಾಗೂ ಆಫ್ರಿಕನ್ ಒಕ್ಕೂಟದಿಂದ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿಯವರ ಔದಾರ್ಯತೆಯಿಂದಾಗಿ ಭಾರತ ಸರ್ಕಾರ ಬಾರ್ಬಡೋಸ್ ಮತ್ತು ಡೊಮಿನಿಕಾಗೆ 1,70,000 ಲಸಿಕೆಗಳನ್ನು ದ್ವಿಪಕ್ಷೀಯ ವ್ಯವಸ್ಥೆಗಳ ಮೂಲಕ ದಾನ ಮಾಡಿದೆ ಎಂದು ಸೇಂಟ್ ಲೂಸಿಯಾ ಹೇಳಿದೆ.
ಇದನ್ನೂ ಓದಿ: ಆಟೋರಿಕ್ಷಾದಲ್ಲಿ ತಯಾರಾದ ಚಿಕ್ಕ ಮನೆ; ಉದ್ಯಮಿ ಆನಂದ್ ಮಹೀಂದ್ರಾ ಏನಂದ್ರು ಗೊತ್ತಾ?
ಜಮೈಕಾ, ಎಸಿಪಿ (ಆಫ್ರಿಕನ್, ಕೆರಿಬಿಯನ್ ಮತ್ತು ಪೆಸಿಫಿಕ್) ರಾಷ್ಟ್ರಗಳಿಗೆ ಗುಂಪಿನ ಪರವಾಗಿ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ (ಎಲ್‌ಡಿಸಿ) ಲಸಿಕೆ ಸರಬರಾಜನ್ನು ತಲುಪಿಸುವಲ್ಲಿ ಭಾರತದ ಪ್ರಯತ್ನಗಳಿಗೆ ಧನ್ಯವಾದಗಳನ್ನು ಅರ್ಪಿಸಿತು.
ಈ ಬಿಕ್ಕಟ್ಟಿನಲ್ಲಿ ಲಸಿಕೆ ರಾಷ್ಟ್ರೀಯತೆಗೆ ಯಾವುದೇ ಸ್ಥಾನವಿಲ್ಲ. ಎಲ್ಲಾ ಸದಸ್ಯ ರಾಷ್ಟ್ರಗಳು ವೈರಸ್ಗೆ ತುತ್ತಾಗಿವೆ. ಯಾವುದೇ ಸದಸ್ಯರು ವೈರಸ್ ಪ್ರಭಾವದಿಂದ ಹೊರತಾಗಿಲ್ಲ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಎಲ್‌ಡಿಸಿಗಳಿಗೆ ಲಸಿಕೆಗಳನ್ನು ತಲುಪಿಸಲು ವ್ಯವಸ್ಥೆ ಮಾಡಿದ ಭಾರತ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳ ಪ್ರಯತ್ನಗಳನ್ನು ಗೌರವಿಸುತ್ತೇವೆ ಎಂದು ಜಮೈಕಾ ಹೇಳಿದೆ.