ETV Bharat / business

ಜೂ.1ರಿಂದ ಚಿನ್ನಕ್ಕೆ ಹಾಲ್ಮಾರ್ಕ್​ ಕಡ್ಡಾಯ: ಆಭರಣ ಖರೀದಿಯಲ್ಲಿ ತಿಳಿಯಬೇಕಾದ ಮಾಹಿತಿ ಇದು - ಆಭರಣ ವ್ಯಾಪಾರಿಗಳ ಮಾರುಕಟ್ಟೆ

ಚಿನ್ನದ ಆಭರಣಗಳು 14, 18, 22 ಕ್ಯಾರೆಟ್ ಹಾಲ್ಮಾರ್ಕ್​ ಇದ್ದರೆ ಮಾತ್ರ ಮಾರಾಟ ಮಾಡಬಹುದು. ಆಭರಣ ಕಂಪನಿಗಳಲ್ಲಿ ಈಗಾಗಲೇ ಹಳೆಯ ಸ್ಟಾಕ್ ಇರುವುದರಿಂದ ಗಡುವನ್ನು ವಿಸ್ತರಿಸುವಂತೆ ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (ಐಬಿಜೆಎ) ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಸರ್ಕಾರ ಕೋರಿದ್ದಾರೆ.

hallmarked
hallmarked
author img

By

Published : Apr 16, 2021, 3:48 PM IST

ನವದೆಹಲಿ: ದೇಶಾದ್ಯಂತ ಜೂನ್ 1ರಿಂದ ಆಭರಣ ವರ್ತಕರು ಹಾಲ್ಮಾರ್ಕ್ ಚಿನ್ನಾಭರಣಗಳನ್ನು ಮಾತ್ರ ಮಾರಾಟ ಮಾಡುವುದು ಕಡ್ಡಾಯವಾಗಲಿದೆ.

ಸರ್ಕಾರವು ಈ ಮೊದಲು 2020ರ ಜನವರಿ 15ರಿಂದ ಹಾಲ್ ‌ಮಾರ್ಕಿಂಗ್ ಕಡ್ಡಾಯಗೊಳಿಸಿತ್ತು. ಆದರೆ, ಕೋವಿಡ್ -19 ಕಾರಣದಿಂದಾಗಿ ಆ ಗಡುವು ವಿಸ್ತರಿಸಿ, 2021ರ ಜೂನ್ 1ರಿಂದ ಚಿನ್ನದ ಹಾಲ್ಮಾರ್ಕಿಂಗ್ ಈಗ ಕಡ್ಡಾಯವಾಗಲಿದೆ.

ಹೊಸ ನಿಯಮಗಳ ಪ್ರಕಾರ, ಚಿನ್ನದ ಆಭರಣಗಳು 14, 18, 22 ಕ್ಯಾರೆಟ್ ಹಾಲ್ಮಾರ್ಕ್​ ಇದ್ದರೆ ಮಾತ್ರ ಮಾರಾಟ ಮಾಡಬಹುದು. ಆಭರಣ ಕಂಪನಿಗಳಲ್ಲಿ ಈಗಾಗಲೇ ಹಳೆಯ ಸ್ಟಾಕ್ ಇರುವುದರಿಂದ ಗಡುವನ್ನು ವಿಸ್ತರಿಸುವಂತೆ ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (ಐಬಿಜೆಎ) ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಸರ್ಕಾರವನ್ನು ಕೋರಿದ್ದಾರೆ.

ಚಿನ್ನಾಭರಣ ಖರೀದಿಸುವಾಗ ಪರಿಗಣಿಸಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ. ಸರ್ಕಾರವು ಗಡುವು ವಿಸ್ತರಿಸುತ್ತದೆಯೇ ಎಂದು ನೋಡಬೇಕಾಗಿದೆ. ನೀವು ಚಿನ್ನದ ಆಭರಣ ಖರೀದಿಸಲು ಬಯಸಿದರೆ, ಹಾಲ್ಮಾರ್ಕ್ ಹೊಂದಿರುವ ವಸ್ತುಗಳನ್ನು ಖರೀದಿಸುವುದು ಉತ್ತಮ. ಆಭರಣ ಮಾರಾಟ ಮಾಡುವ ಕಂಪನಿಯು ತಮ್ಮ ಆಭರಣ ಅಥವಾ ಕಲಾಕೃತಿಗಳನ್ನು ಹಾಲ್ಮಾರ್ಕ್ ಮಾಡುವ ಮೊದಲು ಬಿಐಎಸ್​ನಿಂದ ಪರವಾನಗಿ ಪಡೆಯಬೇಕು.

ಚಿನ್ನದ ಶುದ್ಧತೆಯನ್ನು ಕ್ಯಾರೆಟ್‌ಗಳಲ್ಲಿ ಅಳೆಯಲಾಗುತ್ತದೆ. 24 ಕ್ಯಾರೆಟ್ ಚಿನ್ನವನ್ನು ಶುದ್ಧ ಎಂದು ಪರಿಗಣಿಸಲಾಗಿದ್ದರೂ, ಇದು ತುಂಬಾ ಮೃದುವಾಗಿರುತ್ತದೆ. ಇದು ಆಭರಣ ತಯಾರಿಕೆಯಲ್ಲಿ ಬಳಸಲಾಗುವುದಿಲ್ಲ. ಆಭರಣ ತಯಾರಿಕೆಗೆ ಸೂಕ್ತವಾಗಿ ಜ್ಯುವೆಲ್ಲರಿ ಹಾಲ್ಮಾರ್ಕಿಂಗ್ ಅನ್ನು 14, 18, 22 ಕ್ಯಾರೆಟ್‌ಗಳಲ್ಲಿ ಮಾಡಲಾಗುತ್ತದೆ.

14 ಕ್ಯಾರೆಟ್ 58.5 ಪ್ರತಿಶತ ಶುದ್ಧತೆಯನ್ನು ಪ್ರತಿನಿಧಿಸುತ್ತದೆ (ಹಾಲ್ಮಾರ್ಕ್ 14ಕೆ 585 ಸೂಚಿಸುತ್ತದೆ) ಮತ್ತು 18ಕೆ ಎಂದರೆ 75 ಪ್ರತಿಶತ ಶುದ್ಧತೆ (ಹಾಲ್ಮಾರ್ಕ್ 18ಕೆ 750), 22ಕೆ 91.6 ಪ್ರತಿಶತ ಶುದ್ಧತೆ (ಹಾಲ್ಮಾರ್ಕ್ 22ಕೆ 91.6). ಆಭರಣ- ಕ್ಯಾರೆಟ್ ಶುದ್ಧತೆ, ಹಾಲ್ಮಾರ್ಕಿಂಗ್ ಸೆಂಟರ್ ಗುರುತು, ಆಭರಣ ಗುರುತಿನ ಸಂಖ್ಯೆ. ಈ ಮೂರನ್ನು ಪರಿಶೀಲಿಸಬೇಕು. ಹಾಲ್ಮಾರ್ಕ್ ಮಾಡಿದ ಚಿನ್ನದ ಬೆಲೆ ನೀವು ಆಭರಣಗಳನ್ನು ಖರೀದಿಸಿದ ದಿನದಂದು ಅಂದಾಜು ಮಾಡಲು ನೆರವಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.