ETV Bharat / business

3 ತಿಂಗಳ ಗರಿಷ್ಠ ಮಟ್ಟಕ್ಕೆ ಸಗಟು ಹಣದುಬ್ಬರ... ಇಂಧನ, ಆಹಾರ ಪದಾರ್ಥ ದುಬಾರಿ..!

ಆಹಾರ ಪದಾರ್ಥಗಳ ಹಣದುಬ್ಬರವು ಮಾರ್ಚ್​ನಲ್ಲಿ ಶೇ 5.68 ರಷ್ಟು ಆಗಿತ್ತು. ಫೆಬ್ರವರಿ ತಿಂಗಳಲ್ಲಿ ಶೇ 4.28ರಷ್ಟು ಇತ್ತು ತರಕಾರಿಗಳ ಬೆಲೆ ಏರಿಕೆಯು ಫೆಬ್ರವರಿಯಲ್ಲಿ ಶೇ 6.84ರಷ್ಟು ಇದದ್ದು, ಮಾರ್ಚ್​ನಲ್ಲಿ ಶೇ 28.13ಕ್ಕೆ ತಲುಪಿದೆ.

author img

By

Published : Apr 16, 2019, 9:18 AM IST

ಸಂಗ್ರಹ ಚಿತ್ರ

ನವದೆಹಲಿ: ಮಾರ್ಚ್​ ತಿಂಗಳಲ್ಲಿನ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಆಧರಿಸಿದ ಹಣದುಬ್ಬರು ಶೇ 3.18ಕ್ಕೆ ಏರಿಕೆ ಆಗಿದ್ದು, ಏಪ್ರಿಲ್​​ನಲ್ಲಿ ಶೇ 2.76ರಷ್ಟು ಇದ್ದಿತ್ತು.

ಆಹಾರ ಪದಾರ್ಥ ಶೇ 5.41 ಹಾಗೂ ಇಂಧನ ಶೇ 2.23ರಷ್ಟು ದುಬಾರಿ ಆಗಿದ್ದರಿಂದ ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ಏರಿಕೆಯಾಗಿದೆ. ಆಹಾರ ಪದಾರ್ಥಗಳ ಬೆಲೆ ಗಗನಮುಖಿಯಾದ ಪರಿಣಾಮ ದೇಶದಲ್ಲಿ 'ಗ್ರಾಹಕರ ಬೆಲೆ ಸೂಚ್ಯಂಕ' (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಮಾರ್ಚ್​ ತಿಂಗಳಲ್ಲಿ ಶೇ 2.86ಕ್ಕೆ ಏರಿಕೆಯಾಗಿದೆ.

ಇದರ ಜೊತೆಗೆ ಫೆಬ್ರವರಿ ತಿಂಗಳಲ್ಲಿ ಕೊನೆಗೊಂಡ ಕೈಗಾರಿಕಾ ಉತ್ಪಾದನಾ ಹೆಚ್ಚಳದ ಪ್ರಮಾಣವು 20 ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಉತ್ಪಾದನೆಯು ಕೇವಲ ಶೇ 0.1ರಷ್ಟು ಬೆಳವಣಿಗೆ ಕಂಡಿದೆ.

2018ರ ಡಿಸೆಂಬರ್​ನಲ್ಲಿ ಡಬ್ಲ್ಯೂಪಿಐ ಶೇ 3.4ರಷ್ಟು ಇದ್ದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 2.74ರಷ್ಟು ಇತ್ತು. 2019ರ ಜನವರಿ ಮತ್ತು ಫೆಬ್ರವರಿಯಲ್ಲಿ ಕ್ರಮವಾಗಿ ಶೇ 2.76, ಶೇ 2.93 ರಷ್ಟು ದಾಖಲಾಗಿದೆ ಎಂದು ಸರ್ಕಾರದ ಅಂಕಿ - ಅಂಶಗಳಲ್ಲಿ ತಿಳಿದುಬಂದಿದೆ.

ಆಹಾರ ಪದಾರ್ಥಗಳ ಹಣದುಬ್ಬರವು ಮಾರ್ಚ್​ನಲ್ಲಿ ಶೇ 5.68 ರಷ್ಟು ಆಗಿತ್ತು. ಫೆಬ್ರವರಿ ತಿಂಗಳಲ್ಲಿ ಶೇ 4.28ರಷ್ಟು ಇತ್ತು ತರಕಾರಿಗಳ ಬೆಲೆ ಏರಿಕೆಯು ಫೆಬ್ರವರಿಯಲ್ಲಿ ಶೇ 6.84ರಷ್ಟು ಇದದ್ದು, ಮಾರ್ಚ್​ನಲ್ಲಿ ಶೇ 28.13ಕ್ಕೆ ತಲುಪಿದೆ. ಆಲೂಗಡೆ ದರ ಏರಿಕೆ ಮಾತ್ರ ಹಿಂದಿನ ತಿಂಗಳ ಶೇ 23.40ರ ಬದಲಿಗೆ ಶೇ 1.30ರಷ್ಟು ಇಳಿಕೆ ಆಗಿದೆ. ಬೇಳೆಕಾಳು ಹಾಗೂ ಗೋಧಿ ದರ ಏರಿಕೆಯೂ ಕ್ರಮವಾಗಿ ಶೇ 10.63 ಮತ್ತು ಶೇ 10.03ರಷ್ಟು ಕಡಿಮೆಯಾಗಿದೆ. ಮೊಟ್ಟೆ, ಮಾಂಸ ಮತ್ತು ಮೀನುಗಳ ಹಣದುಬ್ಬರವು ಶೇ 5.86ರಷ್ಟು ತಗ್ಗಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.