ETV Bharat / business

GDP ವೃದ್ಧಿ ಅಂದಾಜು ಶೇ 8.3ಕ್ಕೆ ಇಳಿಕೆ: ಆದ್ರೂ 80 ವರ್ಷಗಳ ಆರ್ಥಿಕ ಹಿಂಜರಿತದಲ್ಲಿ ವೇಗದ ಬೆಳವಣಿಗೆ - 2022ರಲ್ಲಿ ಆರ್ಥಿಕತೆ ಶೇ 8.3ರಷ್ಟು ವೃದ್ಧಿ

ವಾಷಿಂಗ್ಟನ್ ಮೂಲದ ಜಾಗತಿಕ ಸಾಲದಾತ ವಿಶ್ವ ಬ್ಯಾಂಕ್, ತನ್ನ ಇತ್ತೀಚಿನ ಗ್ಲೋಬಲ್ ಎಕನಾಮಿಕ್ ಪ್ರಾಸ್ಪೆಕ್ಟಸ್​ನಲ್ಲಿ ಭಾರತದಲ್ಲಿನ ಅಗಾಧವಾದ ಎರಡನೇ ಕೋವಿಡ್​ -19 ಅಲೆಯು 2020-21ರ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಕಂಡುಬರುವ ಚಟುವಟಿಕೆಯಲ್ಲಿ ನಿರೀಕ್ಷೆಗಿಂತ ತೀಕ್ಷ್ಣವಾದ ಮರುಕಳಿಕೆ ದುರ್ಬಲಗೊಳಿಸುತ್ತಿದೆ. ವಿಶೇಷವಾಗಿ ಸೇವೆಗಳ ಮೇಲೆ ಬೀರಿದೆ ಎಂದಿದೆ.

growth
growth
author img

By

Published : Jun 9, 2021, 9:35 AM IST

ವಾಷಿಂಗ್ಟನ್: ವಿಶ್ವಬ್ಯಾಂಕ್ ಭಾರತೀಯ ಆರ್ಥಿಕತೆಯ 2021-22ರ ಜಿಡಿಪಿ ಬೆಳವಣಿಗೆಯ ಅಂದಾಜನ್ನು ತಗ್ಗಿಸಿದೆ.

ಏಪ್ರಿಲ್‌ನಲ್ಲಿ ಅಂದಾಜು ಮಾಡಿದ್ದ ಶೇ 10.1ರಿಂದ ಶೇ 8.3ಕ್ಕೆ ಇಳಿಸಿದೆ. 2022-23ರ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 2022ರಿಂದ ಮಾರ್ಚ್ 2023ರವರೆಗೆ) ಶೇ 7.5ರಷ್ಟು ಆರ್ಥಿಕ ಬೆಳವಣಿಗೆ ಇರಲಿದೆ ಎಂದು ನಿರೀಕ್ಷಿಸಿದೆ.

ವಾಷಿಂಗ್ಟನ್ ಮೂಲದ ಜಾಗತಿಕ ಸಾಲದಾತ, ತನ್ನ ಇತ್ತೀಚಿನ ಗ್ಲೋಬಲ್ ಎಕನಾಮಿಕ್ ಪ್ರಾಸ್ಪೆಕ್ಟಸ್​ನಲ್ಲಿ, ಭಾರತದಲ್ಲಿ ಅಗಾಧವಾದ ಎರಡನೇ ಕೋವಿಡ್​ -19 ಅಲೆಯು 2020-21ರ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಕಂಡುಬರುವ ಚಟುವಟಿಕೆಯಲ್ಲಿ ನಿರೀಕ್ಷೆಗಿಂತ ತೀಕ್ಷ್ಣವಾದ ಮರುಕಳಿಕೆ ದುರ್ಬಲಗೊಳಿಸುತ್ತಿದೆ. ವಿಶೇಷವಾಗಿ ಸೇವೆಗಳ ಮೇಲೆ ಬೀರಿದೆ ಎಂದಿದೆ.

ಸಾಂಕ್ರಾಮಿಕ ರೋಗದ ಪ್ರಾರಂಭದಿಂದೀಚೆಗೆ ಯಾವುದೇ ದೇಶದ ಅತಿದೊಡ್ಡ ಚೇತರಿಕೆಗೆ ಅಡ್ಡಿಯಾಗುತ್ತಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ಯೋಜಿತ ಬೆಳವಣಿಗೆಯು 2021ರ ಮಾರ್ಚ್ 31 (2021ರ ಹಣಕಾಸು ವರ್ಷ)ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಮೈನಸ್​ ಶೇ 7.3ರಷ್ಟು ಮತ್ತು 2019-20ರಲ್ಲಿ ಶೇ 4ರಷ್ಟು ಬೆಳವಣಿಗೆ ಆಗಿತ್ತು. ಈ ವರ್ಷದ ಏಪ್ರಿಲ್​ನಲ್ಲಿ ವಿಶ್ವ ಬ್ಯಾಂಕ್ ಭಾರತೀಯ ಜಿಡಿಪಿ 2022ರ ಹಣಕಾಸು ವರ್ಷದಲ್ಲಿ ಶೇ 10.1ರಷ್ಟು ಬೆಳವಣಿಗೆ ಮುನ್ಸೂಚನೆ ನೀಡಿತ್ತು. ಇದು ಜನವರಿಯಲ್ಲಿ ನಿರೀಕ್ಷಿಸಿದ್ದ ಶೇ 5.4ಕ್ಕಿಂತ ಹೆಚ್ಚಾಗಿದೆ. ಆದರೆ ಈಗ ಅಂದಾಜನ್ನು ಕಡಿತಗೊಳಿಸಿದೆ.

ಇದನ್ನೂ ಓದಿ: ಎಲ್ಲರಿಗೂ ಉಚಿತ ವ್ಯಾಕ್ಸಿನ್, ಪಡಿತರ ವಿತರಣೆ: ಕೇಂದ್ರ ಸರ್ಕಾರಕ್ಕಾಗುವ ಹೊರೆ ಎಷ್ಟು ಗೊತ್ತಾ?

2023-24ರಲ್ಲಿ ಭಾರತದ ಜಿಡಿಪಿ ಶೇ 6.5ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಬಹುಪಕ್ಷೀಯ ಸಾಲ ಸಂಸ್ಥೆ ತಿಳಿಸಿದೆ. 2021ರಲ್ಲಿ ಜಾಗತಿಕ ಆರ್ಥಿಕತೆಯು ಶೇ 5.6ರಷ್ಟು ವಿಸ್ತರಿಸಲು ಸಿದ್ಧವಾಗಿದೆ ಎಂದು ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.

ಇದು 80 ವರ್ಷಗಳಲ್ಲಿ ಆರ್ಥಿಕ ಹಿಂಜರಿತದ ನಂತರದ ವೇಗವಾಗಿದೆ. ಭಾರತಕ್ಕೆ ಸಂಬಂಧಿಸಿದಂತೆ 2021ರ ಏಪ್ರಿಲ್​ನಿಂದ ಪ್ರಾರಂಭವಾಗುವ 2021/22 ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ 8.3ರಷ್ಟು ವಿಸ್ತರಿಸುವ ನಿರೀಕ್ಷೆಯಿದೆ ಎಂದಿದೆ.

ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿ ಮತ್ತು ಆರೋಗ್ಯಕ್ಕಾಗಿ ಹೆಚ್ಚಿನ ಖರ್ಚು ಮತ್ತು ಸೇವೆಗಳು ಹಾಗೂ ಉತ್ಪಾದನೆಯಲ್ಲಿ ನಿರೀಕ್ಷೆಗಿಂತ ಬಲವಾದ ಚೇತರಿಕೆ ಸೇರಿದಂತೆ ವಿತ್ತೀಯ ನೀತಿ ಬೆಂಬಲದಿಂದ ಚಟುವಟಿಕೆಯು ಪ್ರಯೋಜನ ಪಡೆಯಲಿವೆ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.