ETV Bharat / business

1.74 ಲಕ್ಷ ಕೋಟಿ ರೂ. ಸಾಲ ಉದ್ದೇಶಪೂರ್ವಕ ವಂಚನೆ: ಈ ವಂಚಕ ತಿಮಿಂಗಿಲುಗಳಾರು ಗೊತ್ತಾ? - ವಾಣಿಜ್ಯ ಸುದ್ದಿ

ಅಗ್ರ 33 ಖಾತೆಗಳಲ್ಲಿ (500 ಕೋಟಿ ರೂ. ಮತ್ತು ಅದಕ್ಕೂ ಮೇಲೆ) ಒಟ್ಟು 32,737 ಕೋಟಿ ರೂ.ಯಷ್ಟಿದೆ. ಪ್ರಮುಖ ಸುಸ್ತಿದಾರರಲ್ಲಿ ಗೀತಾಂಜಲಿ ಜೆಮ್ಸ್, ಎಬಿಜಿ ಶಿಪ್‌ಯಾರ್ಡ್, ಆರ್‌ಇಐ ಆಗ್ರೋ, ರುಚಿ ಸೋಯಾ ಇಂಡಸ್ಟ್ರೀಸ್, ಗಿಲಿ ಇಂಡಿಯಾ, ವಿನ್ಸಮ್ ಡೈಮಂಡ್ಸ್ ಮತ್ತು ಜ್ಯುವೆಲ್ಲರಿ, ಕುಡೋಸ್ ಕೆಮಿ, ನಕ್ಷತ್ರ ಬ್ರಾಂಡ್ಸ್ ಮತ್ತು ಕೋಸ್ಟಲ್ ಪ್ರಾಜೆಕ್ಟ್​ ಸಹ ಸೇರಿವೆ.

wilful defaulters owe
ಸಾಲ ಉದ್ದೇಶ ಪೂರ್ವಕ ವಂಚನೆ
author img

By

Published : Jul 20, 2020, 5:07 PM IST

ನವದೆಹಲಿ: ಬ್ಯಾಂಕ್​ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಮರುಪಾವತಿಸದ ಉದ್ದೇಶಪೂರ್ವಕ ಸುಸ್ತಿದಾರರ ಖಾತೆಗಳ ಸಂಖ್ಯೆ ಹಾಗೂ ಸಾಲ ವಂಚನೆಯ ಮೊತ್ತದ ದತ್ತಾಂಶವನ್ನು ಅಖಿಲ ಭಾರತ ಬ್ಯಾಂಕ್​ ಉದ್ಯೋಗಿಗಳ ಸಂಘಟನೆ (ಎಐಬಿಇಎ) ಬಿಡುಗಡೆ ಮಾಡಿದೆ.

1.47 ಲಕ್ಷ ಕೋಟಿ ರೂ. ಸಾಲ ಪಡೆದಿರುವ 2,426 ಸುಸ್ತಿದಾರರ ಪಟ್ಟಿಯನ್ನು ಅಖಿಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘಟನೆ ಬಿಡುಗಡೆ ಮಾಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ 4,644 ಕೋಟಿ ರೂ. ಸಾಲ ವಂಚನೆಯ ಮೂಲಕ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಅಗ್ರ ಸ್ಥಾನದಲ್ಲಿದ್ದಾರೆ. ಗೀತಾಂಜಲಿ ಸಮೂಹದ ಭಾಗವಾದ ಗಿಲಿ ಇಂಡಿಯಾ ಮತ್ತು ನಕ್ಷತ್ರ ಬ್ರಾಂಡ್ಸ್, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಿಗೆ ತಲಾ 1,447 ಕೋಟಿ ರೂ. ಮತ್ತು 1,109 ಕೋಟಿ ರೂ. ಸಾಲ ವಂಚನೆ ಎಸಗಿವೆ.

ಸೆಪ್ಟಂಬರ್ 30ರ ವೆಳೆಗೆ ಸೆಂಟ್ರಲ್ ರೆಪೊಸಿಟರಿ ಆಫ್ ಇನ್ಫಾರ್ಮೇಷನ್ ಆನ್ ಲಾರ್ಜ್ ಕ್ರೆಡಿಟ್ಸ್ (ಸಿಆರ್‍ಎಲ್‍ಸಿ) ನೀಡಿದ ವರದಿಯನ್ನು ಆಧರಿಸಿ ಈ ಡೇಟಾ ಬಿಡುಗಡೆ ಮಾಡಲಾಗಿದೆ.

ಅಗ್ರ 33 ಖಾತೆಗಳಲ್ಲಿ (500 ಕೋಟಿ ರೂ. ಮತ್ತು ಅದಕ್ಕೂ ಮೇಲೆ) ಒಟ್ಟು 32,737 ಕೋಟಿ ರೂ.ಯಷ್ಟಿದೆ. ಪ್ರಮುಖ ಸುಸ್ತಿದಾರರಲ್ಲಿ ಗೀತಾಂಜಲಿ ಜೆಮ್ಸ್, ಎಬಿಜಿ ಶಿಪ್‌ಯಾರ್ಡ್, ಆರ್‌ಇಐ ಆಗ್ರೋ, ರುಚಿ ಸೋಯಾ ಇಂಡಸ್ಟ್ರೀಸ್, ಗಿಲಿ ಇಂಡಿಯಾ, ವಿನ್ಸಮ್ ಡೈಮಂಡ್ಸ್ ಮತ್ತು ಜ್ಯುವೆಲ್ಲರಿ, ಕುಡೋಸ್ ಕೆಮಿ, ನಕ್ಷತ್ರ ಬ್ರಾಂಡ್ಸ್ ಮತ್ತು ಕೋಸ್ಟಲ್ ಪ್ರಾಜೆಕ್ಟ್​ ಸಹ ಸೇರಿವೆ.

685 ಸುಸ್ತಿದಾರರು ದೇಶದ ಅತಿದೊಡ್ಡ ಸಾಲಗಾರ ಎಸ್​ಬಿಐಗೆ 43,887 ಕೋಟಿ ರೂ. ಪಾವತಿಸಬೇಕಿದೆ. ಅದರ ನಂತರ ಪಿಎನ್‌ಬಿ 325 ಡೀಫಾಲ್ಟರ್‌ಗಳು 22,370 ಕೋಟಿ ರೂ. ನೀಡಬೇಕಿದೆ. 355 ಉದ್ದೇಶಪೂರ್ವಕ ಡೀಫಾಲ್ಟರ್​ಗಳು ಬ್ಯಾಂಕ್ ಆಫ್ ಬರೋಡಾಕ್ಕೆ 14,661 ಕೋಟಿ ರೂ. ಮತ್ತು 184 ಉದ್ದೇಶಪೂರ್ವಕ ವಂಚಕರು ಬ್ಯಾಂಕ್ ಆಫ್ ಇಂಡಿಯಾಕ್ಕೆ 11,250 ಕೋಟಿ ರೂ. ಕೊಡಬೇಕಿದೆ.

ಸುಸ್ತಿದಾರರ ಪಟ್ಟಿ ಬಿಡುಗಡೆ ಮಾಡಿರುವ ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಹೆಚ್‌. ವೆಂಕಟಾಚಲಂ, 'ಸುಸ್ತಿದಾರರಿಗೆ ವಿನಾಯಿತಿ ನೀಡುವ ಮೃದು ಧೋರಣೆಯನ್ನು ಸರ್ಕಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.