ETV Bharat / business

ಜಿಡಿಪಿ ಜಿಗಿಯಬೇಕಾದ್ರೆ ಬಡ್ಡಿ ದರ ಇಳಿಬೇಕು: ಡಿ. ಮುರಳೀಧರ್ ಅಭಿಮತ - ರೆಪೊ ದರ

'ಈಟಿವಿ ಭಾರತ್' ಜತೆಗೆ ಮಾತನಾಡಿದ ಸರ್.ಎಂ. ವಿಶ್ವೇಶ್ವರಯ್ಯ ಆರ್ಥಿಕ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಿ. ಮುರಳೀಧರ್ , ಹಣದುಬ್ಬರ ಯಾವಾಗ ಕಡಿಮೆ ಆಗುತ್ತದೆಯೋ ಆಗ ಬಡ್ಡಿ ದರ ಇಳಿಸಬೇಕು. ಬಡ್ಡಿ ದರ ಹೆಚ್ಚಿದ್ದ ಸಂದರ್ಭದಲ್ಲಿ ವ್ಯವಹಾರ- ವಹಿವಾಟು ಮಾಡುವ ವೆಚ್ಚ ಅಧಿಕವಾಗದು. ಈ ರೆಪೊ ದರ ಕಡಿತವು ಮುಂದಿನ 3- 4 ತ್ರೈಮಾಸಿಕವರೆಗೂ ಹೀಗೆ ಮುಂದುವರಿಯಲಿದೆ ಎಂದು ಭವಿಷ್ಯ ನುಡಿದರು.

ಡಿ. ಮುರಳೀಧರ್
author img

By

Published : Oct 5, 2019, 8:40 AM IST

ಬೆಂಗಳೂರು: ಆರ್​ಬಿಐ ರೆಪೊ ದರ ಕಡಿತ ಮಾಡಿದ್ದು ಸ್ವಾಗತಾರ್ಹ. ದೇಶದ ಜಿಡಿಪಿ ಏರಿಕೆ ಆಗಬೇಕಾದ್ರೆ ಬಡ್ಡಿ ದರ ಕಡಿತವಾಗಬೇಕು. ಜಿ- 20 ಸದಸ್ಯ ಹಾಗೂ ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳ ಬಡ್ಡಿ ದರ ಎರಡಂಕಿ ಕೂಡ ದಾಟಿಲ್ಲ ಎಂದು ಸರ್.ಎಂ. ವಿಶ್ವೇಶ್ವರಯ್ಯ ಆರ್ಥಿಕ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಿ. ಮುರಳೀಧರ್ ಹೇಳಿದರು.

'ಈಟಿವಿ ಭಾರತ್' ಜತೆಗೆ ಮಾತನಾಡಿದ ಅವರು, ಹಣದುಬ್ಬರ ಯಾವಾಗ ಕಡಿಮೆ ಆಗುತ್ತದೆಯೋ ಆಗ ಬಡ್ಡಿ ದರ ಇಳಿಸಬೇಕು. ಬಡ್ಡಿ ದರ ಹೆಚ್ಚಿದ್ದ ಸಂದರ್ಭದಲ್ಲಿ ವ್ಯವಹಾರ- ವಹಿವಾಟು ಮಾಡುವ ವೆಚ್ಚ ಅಧಿಕವಾಗದು. ಈ ರೆಪೊ ದರ ಕಡಿತವು ಮುಂದಿನ 3- 4 ತ್ರೈಮಾಸಿಕವರೆಗೂ ಹೀಗೆ ಮುಂದುವರಿಯಲಿದೆ ಎಂದರು.

ಆರ್​ಬಿಐನ ಬಡ್ಡಿ ದರ ಇಳಿಕೆಯ ಕುರಿತು ವಿಶ್ಲೇಷಣೆ ನೀಡಿದ ಡಿ. ಮುರಳೀಧರ್

ಈ ಹಿಂದೆಯೂ ರೆಪೊ ದರ ಕಡಿತ ಮಾಡಿದ ನಂತರವೂ ಬ್ಯಾಂಕ್​ಗಳು ಬಡ್ಡಿ ದರ ಇಳಿಕೆ ಮಾಡದ ನಿದರ್ಶನಗಳಿವೆ. ಇದನ್ನು ಗಮನಿಸಿದ ಆರ್​ಬಿಐ ರೆಪೊ ದರ ಆಧಾರಿತ ಬಡ್ಡಿ ದರ ನಿಗದಿಪಡಿಸಬೇಕೆಂದು ಬ್ಯಾಂಕ್​ಗಳಿಗೆ ಕಠಿಣ ಸೂಚನೆ ನೀಡಿದ್ದು, ಬಡ್ಡಿ ದರ ಕಡಿಮೆ ಆಗಲಿದೆ ಎಂದು ತಿಳಿಸಿದರು.

ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ (ಎನ್‌ಬಿಎಫ್‌ಸಿ) ನಮ್ಮ ಆರ್ಥಿಕತೆ ಕುಸಿದಿದೆ. ದೇಶದಲ್ಲಿ ಸುಮಾರು 2000 ಎನ್​​ಬಿಎಫ್​ಸಿಗಳಿದ್ದು, ಬ್ಯಾಂಕ್​ಗಳನ್ನು ನಿಯಂತ್ರಿಸುವಂತೆ ಆರ್​ಬಿಐ ಇವುಗಳನ್ನು ನಿಯಂತ್ರಿಸಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಆರ್​ಬಿಐ ಎನ್​ಬಿಎಫ್​ಸಿಗಳ ಮೇಲೆ ನಿಯಂತ್ರಣ ಸಾಧಿಸಿ, ಅವುಗಳ ಸಂಖ್ಯೆಯನ್ನು ಹಂತಹಂತವಾಗಿ 300 ರಿಂದ 400ಕ್ಕೆ ತಗ್ಗಿಸುವ ಉದ್ದೇಶ ಇರಿಸಿಕೊಂಡಿದೆ ಎಂದು ಮುರುಳೀಧರ್​ ತಿಳಿಸಿದರು.

Intro:ಬೈಟ್: ಡಿ ಮುರಳೀಧರ್,ಅಧ್ಯಕ್ಷ, ಸರ್ ಎಂ ವಿ ವಿಶ್ವೇಶ್ವರಯ್ಯ ಆರ್ಥಿಕ ಸಂಶೋಧನಾ ಕೇಂದ್ರ

ಇಲ್ಲವಾದಲ್ಲಿ

ಡಿ ಮುರಳೀಧರ್, ಆರ್ಥಿಕ ತಜ್ಞBody:ಜಿಡಿಪಿ ಏರಿಕೆ ಆಗಬೇಕೆಂದರೆ ಬಡ್ಡಿ ದರ ಕಡಿತವಾಗಬೇಕು: ಡಿ ಮುರಳೀಧರ್

ಬೆಂಗಳೂರು: ರೆಪೊ ದರವನ್ನು ಆರ್ ಬಿ ಐ ಇಂದು ಕಡಿತ ಮಾಡಿದೆ ಇದು ಸ್ವಾಗತಾರ್ಹ ವಿಷಯ ಆದರೆ ದೇಶದ ಜಿಡಿಪಿ ಏರಿಕೆ ಆಗಬೇಕು ಅಂದರೆ ಬಡ್ಡಿ ದರ ಕಡಿತವಾಗಬೇಕು, ಜಿ 20 ರಾಷ್ಟ್ರಗಳಲ್ಲಿ ಹಾಗೂ ಆರ್ಥಿಕತೆಯಲ್ಲಿ ಮುಂದಿರುವ ರಾಷ್ಟ್ರಗಳಲ್ಲಿ ಬಡ್ಡಿ ದರ 2 ಅಂಕಿ ದಾಟಿಲ್ಲ ಎಂದು ಸರ್ ಎಂ ವಿಶ್ವೇಶ್ವರಯ್ಯ ಆರ್ಥಿಕ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಿ ಮುರಳೀಧರ್ ಅಭಿಪ್ರಾಯ ಪಟ್ಟಿದ್ದಾರೆ.

ಈಟಿವಿ ಭಾರತ್ ನೊಂದಿಗೆ ಮಾತನ್ನಾಡಿದ ಇವರು ಹಣದುಬ್ಬರ ಯಾವಾಗ ಕಡಿಮೆ ಇರತ್ತೋ ಆಗ ಬಡ್ಡಿ ದರ ಕಡಿಮೆ ಮಾಡಲೇಬೇಕು, ಯಾಕಂದರೆ ಬಡ್ಡಿ ದರ ಹೆಚ್ಚಿದ್ದ ಸಂದರ್ಭದಲ್ಲಿ ವ್ಯವಹಾರ ಮಾಡುವ ವೆಚ್ಚ ಅಧಿಕವಾಗಿರುತ್ತದೆ. ಜೊತೆಗೆ ರೆಪೊ ರೇಟ್ ಕಡಿತ ಇನ್ನು 3 ರಿಂದ 4 ತ್ರೈಮಾಸಿಕ ವರೆಗೂ ಮುಂದುವರೆಯುತ್ತದೆ ಎಂದು ಮುರಳೀಧರ್ ಹೇಳಿದರು.

ಈ ಹಿಂದೆ ರೆಪೊ ರೇಟ್ ಕಡಿತ ಮಾಡಿದಮೇಲೂ ಬ್ಯಾಂಕ್ಗಳು ಬಡ್ಡಿ ದರ ಇಳಿಕೆ ಮಾಡುತ್ತಿರಲಿಲ್ಲ, ಹೀಗಾಗಿ ಆರ್ ಬಿ ಐ ರೆಪೊ ದರದ ಆದಾರದಂತೆ ಬಡ್ಡಿ ದರ ಇರಬೇಕು ಎಂದು ಆದೇಶ ತಂದಿರುವುದು ಬಡ್ಡಿ ದರ ಕಡಿಮೆ ಆಗುತ್ತದೆ ಎಂದು ತಿಳಿಸಿದರು.

ಎನ್ ಬಿ ಎಫ್ ಸಿ ಗಳಿಂದಲೇ ನಮ್ಮ ಆರ್ಥಿಕತೆ ಕುಸಿದಿರುವುದು, ದೇಶದಲ್ಲಿ ಸುಮಾರು 2000 ಎನ್ ಬಿ ಎಫ್ ಸಿ ಗಳು ಇದೆ, ಬ್ಯಾಂಕ್ ಗಳು ಆರ್ ಬಿ ಐ ನಿಯಮಾವಳಿ ಪ್ರಕಾರ ಹೇಗೆ ಕಾರ್ಯನಿರ್ವಹಿಸುತ್ತದೆ ಆ ರೀತಿ ಈ ಎನ್ ಬಿ ಎಫ್ ಸಿ ಗಳು ನಿಯಂತ್ರಣ ಮಾಡಲಾಗುತ್ತಿಲ್ಲಾ. ಆದರೆ ಇಂದು ಆರ್ ಬಿ ಐ ಮುಂದಿನ ದಿನಗಳಲ್ಲಿ ಈ ಎನ್ ಬಿ ಎಫ್ ಸಿಗಳ ಮೇಲೆ ನಿಯಂತ್ರಣ ಸಾಧಿಸಿ ಕಾಲಕ್ರಮೇಣ ಸಾವಿರಾರು ಎನ್ ಬಿ ಎಫ್ ಸಿ ಗಳನ್ನು 300 ರಿಂದ 400ಕ್ಕೆ ಇಳಿಸಬೇಕೆಂಬ ಉದ್ದೇಶದಿಂದ ಈ ನಿರ್ಣಯ ಕೇಂದ್ರ ಬ್ಯಾಂಕ್ ಯೋಚಿಸಿದೆ ಎಂದು ಹೇಳಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.