ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು 3ನೇ ಸುತ್ತಿನ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯನ್ನು ಘೋಷಿಸಿದೆ. ದೇಶದಲ್ಲಿನ 27 ಸಾರ್ವಜನಿಕ ವಲಯದ ಬ್ಯಾಂಕ್ಗಳ ಸಂಖ್ಯೆ ಇನ್ನು ಮುಂದೆ 12ಕ್ಕೆ ಇಳಿಯಲಿದೆ. ವಿಲೀನದ ನಂತರ ಈ ಬ್ಯಾಂಕ್ಗಳ ಗ್ರಾಹಕರು ಮುಂದೆ ಅನುಸರಿಸಬೇಕಾದ ನಿಯಮಗಳ ಮಾಹಿತಿ ಇಲ್ಲಿದೆ.
ವಿಲೀನವಾಗುವ ಬ್ಯಾಂಕ್ಗಳು
ಓರಿಯಂಟಲ್ ಬ್ಯಾಂಕ್ + ಯುನೈಟೆಡ್ ಬ್ಯಾಂಕ್ಗಳು = ಪಂಜಾಬ್ ನ್ಯಾಷನಲ್ ಬ್ಯಾಂಕ್
ಆಂಧ್ರ ಬ್ಯಾಂಕ್ + ಕಾರ್ಪೊರೇಷನ್ ಬ್ಯಾಂಕ್ = ಯೂನಿಯನ್ ಬ್ಯಾಂಕ್
ಸಿಂಡಿಕೇಟ್ ಬ್ಯಾಂಕ್ = ಕೆನರಾ ಬ್ಯಾಂಕ್
ಅಲಹಾಬಾದ್ ಬ್ಯಾಂಕ್= ಇಂಡಿಯನ್ ಬ್ಯಾಂಕ್
ಈ ಹಿಂದೆ ಎರಡು ಹಂತದ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆ ಕೊನೆಗೊಂಡಿದ್ದು, ಮೊದಲನೇ ಹಂತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವ್ಯಾಪ್ತಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ್, ಸ್ಟೇಟ್ ಬ್ಯಾಂಕ್ ಆಫ್ ಬಿಕನಾರ್ ಮತ್ತು ಜೈಪುರ್ ಸೇರಿದಂತೆ ಇತರೆ ಬ್ಯಾಂಕ್ಗಳ ಹಾಗೂ ಎರಡನೇ ಹಂತದಲ್ಲಿ ಬ್ಯಾಂಕ್ ಆಫ್ ಬರೋಡಾದೊಂದಿಗೆ ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಸೇರ್ಪಡೆಗೊಂಡಿದ್ದವು.
ವಿಲೀನದ ಬಳಿಕ ಸಂಬಂಧಪಟ್ಟ ಬ್ಯಾಂಕ್ಗಳ ಗ್ರಾಹಕರ ಮುಂದಿರುವ ನಡೆಗಳು
![Banks Transaction](https://etvbharatimages.akamaized.net/etvbharat/prod-images/4294340_meger.jpg)
* ವಿಲೀನವಾಗಲಿರುವ ಬ್ಯಾಂಕ್ಗಳ ಗ್ರಾಹಕರು ಮೊದಲು ತಮ್ಮ ಖಾತೆ ಹಾಗೂ ಚೆಕ್ ಪುಸ್ತಕ ಬದಲಾಯಿಸಿಕೊಳ್ಳಬೇಕು. ವಿಲೀನ ಮಾಡಿಕೊಳ್ಳುತ್ತಿರುವ ಬ್ಯಾಂಕಿನ ಖಾತೆ, ಚೆಕ್ ಪುಸ್ತಕ ಪಡೆಯಬೇಕು
* ಈಗಾಗಲೇ ಹಣಕಾಸು ವ್ಯವಹಾರ, ಸಂಬಳ ಸೇರಿದಂತೆ ಇತರೆ ವಹಿವಾಟಿಗೆ ಖಾತೆ ಸಂಖ್ಯೆ ಹಾಗೂ ಐಎಫ್ಎಸ್ಸಿ ಸಂಖ್ಯೆಗಳನ್ನು ನೀಡಿರುತ್ತೀರಾ. ನೂತನ ಬ್ಯಾಂಕ್ ಐಎಫ್ಎಸ್ಸಿಯಲ್ಲಿ ಬದಲಾವಣೆ ಆಗದಿದ್ದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಬದಲಾದರೇ ಸಮಸ್ಯೆ ಎದುರಾಗಲಿದೆ. ಇದನ್ನು ಬ್ಯಾಂಕ್ಗೆ ಭೇಟಿಕೊಟ್ಟು ಪರಿಹರಿಸಿಕೊಳ್ಳಬಹುದು.
* ಬ್ಯಾಂಕ್ನಿಂದ ಪಡೆದುಕೊಂಡಿರುವ ಕ್ರೆಡಿಟ್, ಡೆಬಿಟ್ ಕಾರ್ಡ್ಗಳು ಒಂದಿಷ್ಟು ದಿನ ಮಾನ್ಯತೆ ನೀಡಲಾಗುತ್ತದೆ. ಬಳಿಕ ಹೊಸ ಬ್ಯಾಂಕ್ಗೆ ಭೇಟಿ ನೀಡಿ ಬದಲಾಯಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೇ ತೊಂದರೆ ಎದುರಿಸಬೇಕಾಗುತ್ತದೆ.
* ಈಗಾಗಲೇ ಬ್ಯಾಂಕ್ಗಳಲ್ಲಿ ನಿಶ್ಚೀತ ಠೇವಣಿ ಇರಿಸಿದ್ದರೇ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿ ಹೊಸ ಬ್ಯಾಂಕ್ಗೆ ವರ್ಗಾಯಿಸಿಕೊಳ್ಳಬೇಕಾಗುತ್ತದೆ.
* ಬ್ಯಾಂಕ್ಗಳಲ್ಲಿನ ಗ್ರಾಹಕರ ಸಾಲದ ಬಡ್ಡಿ ದರಗಳ ಏನಾಗುತ್ತದೆ ಎಂಬುದನ್ನು ಕೆಲವು ದಿನಗಳವರೆಗೆ ಕಾದು ನೋಡಿ. ಈ ಹಿಂದಿನ ದರಕ್ಕಿಂತ ಭಿನ್ನವಾಗಬಹುದು.
* ಷೇರು ಮಾರುಕಟ್ಟೆಯಲ್ಲಿ ಬ್ಯಾಂಕ್ಗಳ ಮೇಲೆ ಹಣ ಹೂಡಿಕೆ ಮಾಡಿದವರ ಮೇಲೆ ಇದರ ಪರಿಣಾಮ ಬೀರಲಿದೆ. ಈ ಬಗ್ಗೆ ಗ್ರಾಹಕ ಪ್ರತಿನಿಧಿಗಳನ್ನು ಸಂಪರ್ಕಿಸಬಹುದು.