ನವದೆಹಲಿ : ನಮ್ಮಲ್ಲಿ ಕೆಲ ಬ್ಯಾಂಕ್ಗಳಿವೆ. ಆದರೆ, ನಮಗೆ ಅದಕ್ಕಿಂತ ದೊಡ್ಡ ಬ್ಯಾಂಕ್‌ಗಳು ಬೇಕಾಗುತ್ತವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೇಂದ್ರ ಸಚಿವ ಸಂಪುಟ ಸಭೆಯ ನಿರ್ಧಾರದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮಲ್ಲಿ ಕೆಲವೇ ಕೆಲವು ಬ್ಯಾಂಕುಗಳಿವೆ. ಆದರೆ, ನಮಗೂ ಅದಕ್ಕಿಂತ ದೊಡ್ಡ ಬ್ಯಾಂಕ್‌ಗಳು ಬೇಕಾಗುತ್ತವೆ.
ಅದರಿಂದ ಹಣಕಾಸಿನ ಸ್ಥಿತಿಗತಿ ಅಳೆಯಲು ಸಾಧ್ಯವಾಗುತ್ತದೆ. ದೇಶದ ಮಹತ್ವಾಕಾಂಕ್ಷೆಯ ಅಗತ್ಯಗಳನ್ನು ಪೂರೈಸಲು ನಮಗೆ ಎಸ್‌ಬಿಐ ಗಾತ್ರದ ಇನ್ನೂ ಅನೇಕ ಬ್ಯಾಂಕ್‌ಗಳು ಬೇಕಾಗುತ್ತವೆ. ಇದು ಹಣಕಾಸು ವಲಯದ ಭಾಗವಾಗಿದೆ. ಆದ್ದರಿಂದ, ಎಲ್ಲಾ ಬ್ಯಾಂಕ್‌ಗಳು ಖಾಸಗೀಕರಣಗೊಳಿಸಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಖಾಸಗೀಕರಣಗೊಳ್ಳುವ ಬ್ಯಾಂಕುಗಳ ನೌಕರರ ಹಿತರಕ್ಷಣೆ ನಮ್ಮ ಕರ್ತವ್ಯ: ಸೀತಾರಾಮನ್ ಅಭಯ
ನಾವು ಸಾರ್ವಜನಿಕ ಉದ್ಯಮ ನೀತಿ ಘೋಷಿಸಿದ್ದೇವೆ. ಅಲ್ಲಿ ಸಾರ್ವಜನಿಕ ವಲಯದ ಉಪಸ್ಥಿತಿ ಇರುವ 4 ಕ್ಷೇತ್ರಗಳನ್ನು ನಾವು ಗುರುತಿಸಿದ್ದೇವೆ. ಇದರಲ್ಲಿ ಹಣಕಾಸಿನ ವಲಯವೂ ಕೂಡ ಸೇರಿದೆ. ಆದ್ದರಿಂದ, ಎಲ್ಲಾ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸಲು ಹೋಗುವುದಿಲ್ಲ ಎಂದು ಹೇಳಿದರು.