ಲಂಡನ್: ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಮರಳಿಸಿದೆ ಲಂಡನ್ಗೆ ಪರಾರಿ ಆಗಿರುವ ಮದ್ಯದ ಉದ್ಯಮಿ ವಿಜಯ್ ಮಲ್ಯ ದಿವಾಳಿತನದ ಆದೇಶದಿಂದ ತಾತ್ಕಾಲಿಕವಾಗಿ ನಿರಾಳರಾಗಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನೇತೃತ್ವದ ಭಾರತೀಯ ಬ್ಯಾಂಕ್ಗಳ ಒಕ್ಕೂಟದ ಮನವಿಯ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಲಂಡನ್ ಹೈಕೋರ್ಟ್, 'ವಿಜಯ್ ಮಲ್ಯ ಅವರನ್ನು ದಿವಾಳಿತನ ಆದೇಶ ನೀಡುವುದನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ'.
ಲಂಡನ್ ಹೈಕೋರ್ಟ್ನ ದಿವಾಳಿತನ ವಿಭಾಗದ ನ್ಯಾಯಮೂರ್ತಿ ಮೈಕೆಲ್ ಬ್ರಿಗ್ಸ್ ಅವರು ಮಲ್ಯಗೆ ರೀಲಿಫ್ ನೀಡಿದ್ದು, 'ಭಾರತದ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಗಳ ಹಾಗೂ ಕರ್ನಾಟಕ ಹೈಕೋರ್ಟ್ ಮುಂದೆ ಇರುವ ಅರ್ಜಿಗಳ ವಿಚಾರಣೆ ಇತ್ಯರ್ಥ ಆಗುವವರೆಗೆ ಅವರ ಸಾಲ ಮರುಪಾವತಿಗೆ ಗಡುವು ನೀಡಬೇಕು' ಎಂದು ಹೇಳಿದ್ದಾರೆ.
ಭಾರತೀಯ ಬ್ಯಾಂಕ್ಗಳ ದಿವಾಳಿತನದ ಅರ್ಜಿಯು ಯಾವುದೇ ಮಾನದಂಡಗಳನ್ನು ಮೀರಿದ್ದಾಗಿದೆ. ಭಾರತದಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ದಿವಾಳಿತನದ ಆದೇಶಕ್ಕಾಗಿ ಒತ್ತಾಯಿಸುತ್ತಿವೆ. ನನ್ನ ತೀರ್ಪಿನ ಬಗ್ಗೆ ಹೇಳುವುದಾರೇ ಬ್ಯಾಂಕ್ಗಳನ್ನು ಭಾಗಶಃ ಸುರಕ್ಷಿತವಾಗಿದೆ. ಅರ್ಜಿಯ ವಿಚಾರಣೆ ಉದ್ದೇಶದಿಂದ ಸಾಲಗಳನ್ನು ಪೂರ್ಣವಾಗಿ ಪಾವತಿಸುವ ಸಮಯವನ್ನು ವಿಸ್ತರಿಸಬೇಕು ಎಂದು ತಿಳಿಸಿದ್ದಾರೆ.