ETV Bharat / business

ಅಮೆರಿಕ ಆರ್ಥಿಕತೆ ಹಾಳು.. ನಿರ್ಲಕ್ಷಿಸಿದರೆ ಸೀದ ಪ್ರಪಾತಕ್ಕೆ- ವೈಟ್​ಹೌಸ್ ವಿತ್ತೀಯ ಸಲಹೆಗಾರ ಎಚ್ಚರಿಕೆ!

ಈ ಸಾಂಕ್ರಾಮಿಕ ರೋಗ ಸೋಲಿಸಲು ಮತ್ತು ಅಮೆರಿಕನ್ ಕುಟುಂಬಗಳಿಗೆ ಅಗತ್ಯವಿರುವ ಆರ್ಥಿಕ ಚೇತರಿಕೆಗೆ ಬೆಂಬಲ ನೀಡಲು ಒಂದು ನಿರ್ಣಾಯಕ ಕ್ರಮ ತೆಗೆದುಕೊಳ್ಳುವುದು ಅಗತ್ಯವಿದೆ. ನಿರ್ಣಾಯಕ ಕ್ರಮ ತೆಗೆದುಕೊಳ್ಳದೆ ಇದ್ದರೇ ನಾವು ಗಂಭೀರ ಆರ್ಥಿಕ ಪಾತಾಳದಲ್ಲಿ ಸಿಲುಕುವ ಅಪಾಯವಿದೆ ಎಂದು ಶ್ವೇತಭವನದ ಆರ್ಥಿಕ ಸಲಹೆಗಾರ ಬ್ರಿಯಾನ್ ಡೀಸ್ ಎಚ್ಚರಿಕೆ ನೀಡಿದ್ದಾರೆ..

author img

By

Published : Jan 23, 2021, 4:00 PM IST

US
US

ವಾಷಿಂಗ್ಟನ್ : ನಿರ್ಣಾಯಕ ಕ್ರಮವಿಲ್ಲದೆ ಅಮೆರಿಕವು ಅತ್ಯಂತ ಗಂಭೀರ ಆರ್ಥಿಕ ಪ್ರಪಾತದಲ್ಲಿ ಬೀಳುವ ಅಪಾಯವಿದೆ. ಸಾಧ್ಯವಾದಷ್ಟು ಬೇಗ ಹೆಚ್ಚಿನ ಕೋವಿಡ್-19 ಪರಿಹಾರ ಅನುಮೋದಿಸುವಂತೆ ಕಾಂಗ್ರೆಸ್​ಗೆ ಒತ್ತಾಯಿಸಲಾಗಿದೆ ಎಂದು ಶ್ವೇತಭವನದ ಆರ್ಥಿಕ ಸಲಹೆಗಾರ ಬ್ರಿಯಾನ್ ಡೀಸ್ ಹೇಳಿದ್ದಾರೆ.

ನಾವು ವೈರಸ್ ಮತ್ತು ಆರ್ಥಿಕತೆಯಲ್ಲಿ ಒಂದು ಅನಿಶ್ಚಿತ ಕ್ಷಣದಲ್ಲಿದ್ದೇವೆ ಎಂಬುದು ನಮಗೆ ಸ್ಪಷ್ಟವಾಗಿದೆ ಎಂದು ರಾಷ್ಟ್ರೀಯ ಆರ್ಥಿಕ ಮಂಡಳಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಡೀಸ್ ಅವರು ಶುಕ್ರವಾರ ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ ಆರ್ಥಿಕತೆ ಇದ್ದ ಸ್ಥಿತಿಯಲ್ಲಿದ್ದಾಗ 10 ಮಿಲಿಯನ್ ಉದ್ಯೋಗಗಳು ಕಡಿಮೆಯಾಗಿದ್ದವು. ಕಳೆದ ತಿಂಗಳು, ಆರ್ಥಿಕತೆಯು ವಸಂತ ಋತುವಿನ ನಂತರ ಮೊದಲ ಬಾರಿಗೆ ಉದ್ಯೋಗಗಳನ್ನು ಕಳೆದುಕೊಂಡಿತು. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 9,00,000 ಅಮೆರಿಕನ್ನರು ಸಾಪ್ತಾಹಿಕ ನಿರುದ್ಯೋಗದ ವಿಮೆಗೆ ಅರ್ಜಿಸಲ್ಲಿಸಿದ್ದಾರೆ ಎಂದರು.

ಇದನ್ನೂ ಓದಿ: NST ಪೋಸ್ಟ್​ ಜಾರಿಯಲ್ಲಿ ಭದ್ರತೆ ಉಲ್ಲಂಘನೆಯಾದ್ರೆ ಯಾರು ಹೊಣೆಗಾರರು? ಕೇಂದ್ರಕ್ಕೆ ಟಿಲಿಕಾಂ ಸವಾಲ್!

ಈ ಸಾಂಕ್ರಾಮಿಕ ರೋಗ ಸೋಲಿಸಲು ಮತ್ತು ಅಮೆರಿಕನ್ ಕುಟುಂಬಗಳಿಗೆ ಅಗತ್ಯವಿರುವ ಆರ್ಥಿಕ ಚೇತರಿಕೆಗೆ ಬೆಂಬಲ ನೀಡಲು ಒಂದು ನಿರ್ಣಾಯಕ ಕ್ರಮ ತೆಗೆದುಕೊಳ್ಳುವುದು ಅಗತ್ಯವಿದೆ. ನಿರ್ಣಾಯಕ ಕ್ರಮ ತೆಗೆದುಕೊಳ್ಳದೆ ಇದ್ದರೇ ನಾವು ಗಂಭೀರ ಆರ್ಥಿಕ ಪಾತಾಳದಲ್ಲಿ ಸಿಲುಕುವ ಅಪಾಯವಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಡೀಸ್​ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ.

ಕೊರೊನಾ ಟೆಸ್ಟ್​ ಮತ್ತು ಲಸಿಕೆ ವಿತರಣೆಗೆ ಹೆಚ್ಚಿನ ಹಣ, 1 ಟ್ರಿಲಿಯನ್ ಡಾಲರ್ ಮನೆಗಳಿಗೆ ನೇರ ಪರಿಹಾರ ಮತ್ತು ಬಾಧಿತ ಸಣ್ಣ ಉದ್ಯಮ ಮತ್ತು ಸಮುದಾಯಗಳಿಗೆ 400 ಶತಕೋಟಿ ಡಾಲರ್​, ಸಾಂಕ್ರಾಮಿಕ ರೋಗ ನೇರವಾಗಿ ಎದುರಿಸಲು 1.9 ಟ್ರಿಲಿಯನ್ ಡಾಲರ್ ಪ್ರಸ್ತಾಪ ಒಳಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.