ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಮುಖ ವ್ಯಾಪಾರವು ಪ್ರಸ್ತುತ 143 ಶತಕೋಟಿ ಡಾಲರ್ಗಳಿಂದ 2025ರ ವೇಳೆಗೆ 238 ಶತಕೋಟಿ ಡಾಲರ್ಗೆ ಏರಿಕೆಯಾಗುವ ನಿರೀಕ್ಷೆ ಇದೆ.
ಅಮೆರಿಕ- ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂ(ಯುಎಸ್ಐಎಸ್ಪಿಎಫ್) ವರದಿಯಂತೆ ಕಳೆದ ಏಳು ವರ್ಷಗಳಿಂದ ಪ್ರತಿ ವರ್ಷ ವ್ಯಾಪಾರವು ಶೇ 7.5ರಷ್ಟು ಏರಿಕೆ ಕಂಡಿದೆ ಎಂದು ಉಭಯ ರಾಷ್ಟ್ರಗಳ ಅಧಿಕಾರಿಗಳು ಅಂದಾಜಿಸಿದ್ದಾರೆ.
ಈ ವರದಿಯಂತೆ ದ್ವಿಪಕ್ಷೀಯ ವ್ಯಾಪಾರ 2025ರ ವೇಳೆಗೆ 283-327 ಶತಕೋಟಿ ಡಾಲರ್ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ. ವಾರ್ಷಿಕ ಸರಾಸರಿ ಶೇ.10 ರಿಂದ ಶೇ. 12.5ರಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ ಎಂದು ತಿಳಿಸಿದೆ.
ರಕ್ಷಣಾ ವ್ಯಾಪಾರ, ವಾಣಿಜ್ಯ ವಿಮಾನ, ತೈಲ ಮತ್ತು ಎಲ್ಎನ್ಜಿ, ಕಲ್ಲಿದ್ದಲು, ಯಂತ್ರೋಪಕರಣಗಳು ಹಾಗೂ ಎಲೆಕ್ಟ್ರಾನಿಕ್ನಂತಹ ಕ್ಷೇತ್ರಗಳು ಭಾರತದಲ್ಲಿ ಅಮೆರಿಕ ಹೂಡಿಕೆಗೆ ಮತ್ತು ವಹಿವಾಟಿಗೆ ಸಂಭಾವ್ಯ ಬೆಳವಣಿಗೆಯ ಕ್ಷೇತ್ರಗಳಾಗಿವೆ ಎಂದು ಅಂದಾಜಿಸಿದೆ. ಅಮೆರಿಕದಲ್ಲಿ ಉದ್ಯಮಕ್ಕೆ ವಾಹನ, ಔಷಧಗಳು, ಸಮುದ್ರ ಆಹಾರ, ಐಟಿ ಮತ್ತು ಪ್ರಯಾಣ ಸೇವೆಗಳನ್ನು ಉತ್ತೇಜಿಸಲು ಭಾರತೀಯ ಉದ್ಯಮಕ್ಕೆ ಅವಕಾಶವಿದೆ ಎಂದು ಹೇಳಿದೆ.