ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ತಿರ ಆಗುತ್ತಿದ್ದಂತೆ ಅಮೆರಿಕ ಮತ್ತು ಚೀನಾ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳಲಿದೆ. ಇದು ಜಾಗತಿಕ ವ್ಯಾಪಾರವನ್ನು ದುರ್ಬಲಗೊಳಿಸಲಿದ್ದು, ಭಾರತ ಮತ್ತು ಬ್ರೆಜಿಲ್‌ನಂತಹ ಉದಯೋನ್ಮುಖ ಮಾರುಕಟ್ಟೆ ರಾಷ್ಟ್ರಗಳ ಮಾರುಕಟ್ಟೆಗಳಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಆರ್ಥಿಕತೆಯಲ್ಲಿ ಆಳವಾಗಿ ಹಾನಿಗೊಳಗಾದ ಸಂಸ್ಥೆಗಳೂ ಇದರಲ್ಲಿ ಇರಲಿವೆ. ಸಾಂಕ್ರಾಮಿಕ ರೋಗದ ನಂತರ ಚೇತರಿಕೆಯ ಜೊತೆಗೆ ದುರಸ್ತಿ ಪ್ರಕ್ರಿಯೆಯೂ ಅತ್ಯಗತ್ಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾವು ಆರ್ಥಿಕತೆಯನ್ನು ಸರಿಪಡಿಸುವಾಗ, ಸಂಪನ್ಮೂಲಗಳನ್ನು ಮರುಹಂಚಿಕೆ ಮಾಡುವಾಗ, ಬಂಡವಾಳ ರಚನೆಗಳನ್ನು ಪುನರ್ ರಚಿಸುವಾಗ ಅಮೆರಿಕದಲ್ಲಿ ಮತ್ತು ಯುರೋಪಿನಲ್ಲಿಯೂ ಅಗಾಧ ದಿವಾಳಿತನ ನಡೆಯಲಿವೆ ಎಂದು ಅವರು ಪ್ಯಾನ್ಐಐಟಿ ಯುಎಸ್ಎ ವರ್ಚ್ಯುವಲ್ ಸಮ್ಮೇಳನದಲ್ಲಿ 'ದಿ ನ್ಯೂ ಗ್ಲೋಬಲ್ ಎಕನಾಮಿಕ್ ನಾರ್ಮ್: ಪೋಸ್ಟ್ ಕೋವಿಡ್-19' ಕುರಿತು ಮಾತನಾಡಿದರು.
ಖಂಡಿತವಾಗಿಯೂ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ತಿರ ಆಗುತ್ತಿದ್ದಂತೆ ಯುಎಸ್ ಮತ್ತು ಚೀನಾ ನಡುವಿನ ಸಂಘರ್ಷವು ಹೆಚ್ಚಾಗಲಿದೆ. ಅದು ಜಾಗತಿಕ ವ್ಯಾಪಾರವನ್ನೇ ಕುಂಠಿತಗೊಳಿಸುತ್ತದೆ. ಭಾರತ, ಬ್ರೆಜಿಲ್, ಮೆಕ್ಸಿಕೊದಂತಹ ಉದಯೋನ್ಮುಖ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಲಿದೆ. ವೈರಸ್ನಿಂದ ಆರ್ಥಿಕತೆ ಪುನಾರಂಭವಾದಾಗ ಗಮನಾರ್ಹಮಟ್ಟದಲ್ಲಿ ಕೆಲವು ಬೇಡಿಕೆಯ ಮೂಲಗಳು ಬೇಕಾಗುತ್ತವೆ ಎಂದು ರಾಜನ್ ಹೇಳಿದರು.
ಭಾರತ, ಬ್ರೆಜಿಲ್, ಮೆಕ್ಸಿಕೊದಂತಹ ರಾಷ್ಟ್ರಗಳು ಲಾಕ್ಡೌನ್ ಹೊರತಾಗಿಯೂ ಅಪಾರ ಪ್ರಮಾಣದಲ್ಲಿ ವೆಚ್ಚ ಮಾಡಿದ್ದರೂ ವೈರಸ್ನ ನಿಯಂತ್ರಣವು ಇನ್ನೂ ಸಂಭವಿಸಿಲ್ಲ. ಈಗಾಗಲೇ ಯಶಸ್ವಿಯಾದ ದೇಶಗಳಿಗಿಂತ ವೈರಸ್ ಮೇಲಿನ ವೆಚ್ಚವು ಗಮನಾರ್ಹವಾಗಿ ಹೆಚ್ಚಾಗಲಿದೆ ಎಂದರು.
ಭಾರತ ಮತ್ತು ಅಮೆರಿಕದಂತಹ ದೇಶಗಳು ಇನ್ನೂ ವೈರಸ್ ವಿರುದ್ಧ ಹೋರಾಡುತ್ತಿವೆ. ಇದರ ಪರಿಣಾಮವು ತುಂಬಾ ಕಷ್ಟಕರವಾಗಿರುತ್ತದೆ ಎಂದು ರಘುರಾಮ್ ರಾಜನ್ ಹೇಳಿದರು.