ವಾಷಿಂಗ್ಟನ್: ಕೋವಿಡ್-19 ಕಾರಣದಿಂದಾಗಿ ಅಮೆರಿಕದ 'ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಭಾರತಕ್ಕೆ 4ನೇ ಹಂತದ ಆರೋಗ್ಯ ಪ್ರವಾಸದ ನೋಟಿಸ್ ನೀಡಿದೆ.
ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಸೂಚಿಸುತ್ತದೆ ಎಂದು ಅಮೆರಿಕದ ಸ್ಟೇಟ್ ಕಾನ್ಸುಲರ್ ಸಚಿವಾಲಯ ಇಲಾಖೆಗೆ ತಿಳಿಸಿದೆ.
ಭಾರತಕ್ಕೆ ಪ್ರಯಾಣಿಸಬೇಕಾದ ಅಮೆರಿಕದ ನಾಗರಿಕರು ಪ್ರಯಾಣಕ್ಕೆ ಮುಂಚಿತವಾಗಿ ಸಂಪೂರ್ಣವಾಗಿ ಲಸಿಕೆ ಪಡೆಯಬೇಕು. ತಮ್ಮ ರಕ್ಷಣೆಗೆ ವೈಯಕ್ತಿಕ ಆರೋಗ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೋರಲಾಗಿದೆ. ಇದರಲ್ಲಿ ಸಾಮಾಜಿಕ ಅಂತರ, ಸೋಪ್ / ಹ್ಯಾಂಡ್ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛತೆ, ಮಾಸ್ಕ್ ಧರಿಸುವುದು ಮತ್ತು ಜನಸಂದಣಿ ತಪ್ಪಿಸುವುದು, ವಾತಾಯನ ಪ್ರದೇಶಗಳಿಂದ ದೂರು ಇರುವಂತೆ ಸಿಡಿಸಿ ಹೇಳಿದೆ.
ಸಂಪೂರ್ಣ ಲಸಿಕೆ ಪಡೆದ ಪ್ರಯಾಣಿಕರಿಗೆ ಸಿಡಿಸಿ ಮಂಗಳವಾರ ಪ್ರಯಾಣ ಶಿಫಾರಸುಗಳನ್ನು ನೀಡಿದೆ. ನೀವು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದರೇ ಅಮೆರಿಕದಿಂದ ಹೊರಡುವ ಮೊದಲು ಪರೀಕ್ಷೆಗೆ ಒಳಪಡಬೇಕಾಗಿಲ್ಲ. ನೀವು ನಿಗದಿತ ಸ್ಥಳಕ್ಕೆ ಹೋಗಿ ಅಮೆರಿಕಕ್ಕೆ ಬಂದ ನಂತರ ಸ್ವಯಂ ಕ್ವಾರಂಟೈನ್ಗೆ ಒಳಪಡಬೇಕಾಗಿಲ್ಲ ಎಂದಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಶಾಕ್ .. ಇ-ವೆಹಿಕಲ್ ಮಾರಾಟ ಶೇ 20ರಷ್ಟು ಕುಸಿತ
ಭಾರತದಲ್ಲಿ ಮೊದಲು ಬಾರಿ ಪತ್ತೆಯಾದ ಕೊರೊನಾ ವೈರಸ್ ರೂಪಾಂತರದ 103 ಪ್ರಕರಣಗಳನ್ನು ವರದಿ ಮಾಡಿದ ನಂತರ ಇಂಗ್ಲೆಂಡ್ ಈಗಾಗಲೇ ಮುನ್ನೆಚ್ಚರಿಕೆ ಆಧಾರದ ಮೇಲೆ ಭಾರತವನ್ನು ತನ್ನ ಪ್ರಯಾಣ "ಕೆಂಪು ಪಟ್ಟಿಗೆ" ಸೇರಿಸಿದೆ. ಸೋಂಕಿನ ಎರಡನೇ ಅಲೆಯ ನಡುವೆ ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ ಹದಗೆಡುತ್ತಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಎರಡು ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ.