ಇಸ್ಲಾಮಾಬಾದ್ : ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಪಾಕಿಸ್ತಾನವು ಗಂಭೀರ ಆರ್ಥಿಕ ಸವಾಲುಗಳಿಂದಾಗಿ ಬೆಳವಣಿಗೆಯ ದರ ಕುಂಠಿತಗೊಂಡಿದ್ದು, ನಿರುದ್ಯೋಗದಂತಹ ಸಮಸ್ಯೆ ಎದುರಿಸುತ್ತಿದೆ. ಇದರೊಂದಿಗೆ ಜನಸಾಮಾನ್ಯರು ನಿತ್ಯ ಬೆಲೆ ಏರಿಕೆಗೆ ಬೇಸತ್ತಿದ್ದಾರೆ.
ಟೆಲಿವಿಷನ್ ನ್ಯೂಸ್ ಚಾನೆಲ್ ಜಿಯೋ ನ್ಯೂಸ್ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಪೋಸ್ ಅನ್ನು ಉಲ್ಲೇಖಿಸಿ, ದೇಶದಲ್ಲಿ ವಾಸಿಸುತ್ತಿರುವ ಸುಮಾರು 49 ಪ್ರತಿಶತದಷ್ಟು ಪಾಕಿಸ್ತಾನಿಯರು ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ದುರುಪಯೋಗದಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗುತ್ತಿದೆ ಎಂಬುದು ಅವರೆಲ್ಲರ ನಂಬಿಕೆಯಾಗಿದೆ ಎಂದು ವರದಿ ಮಾಡಿದೆ.
ಕಳೆದ ವರ್ಷದಿಂದ ಪಾಕಿಸ್ತಾನ ತನ್ನ ಹಣದುಬ್ಬರವು ಸ್ಥಿರ ಏರಿಕೆ ಕಂಡಿದೆ. ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರ ದರವು 2018-19ರಲ್ಲಿ ಶೇ. 6.8ರಷ್ಟಿತ್ತು. 2019-20ರ ಆರ್ಥಿಕ ವರ್ಷದಲ್ಲಿ ಹಣದುಬ್ಬರ ದರವು ಶೇ.10.7ಕ್ಕೆ ತಲುಪಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚಿನ ಹಣದುಬ್ಬರವಾಗಿದೆ.
ಈ ವಾರ ಏರಿಕೆ ಕಾಣುವುದ ಷೇರು ಮಾರುಕಟ್ಟೆ?
ದುರ್ಬಲ ಚಟುವಟಿಕೆಯ ಹೊರತಾಗಿಯೂ ಗ್ರಾಹಕರ ಬೆಲೆ ಸೂಚ್ಯಂಕದ ಹಣದುಬ್ಬರವು 2019ರ ಹಣಕಾಸು ವರ್ಷದಲ್ಲಿ ಸರಾಸರಿ ಶೇ.6.8 ರಿಂದ 2020ರ ವಿತ್ತೀಯ ವರ್ಷದಲ್ಲಿ ಸರಾಸರಿ ಶೇ.10.7ಕ್ಕೆ ಏರಿದೆ. ಆಹಾರ ಪದಾರ್ಥಗಳ ಹಣದುಬ್ಬರ, ಇಂಧನ ಬೆಲೆಗಳ ಏರಿಕೆ ಮತ್ತು ಡಾಲರ್ ಎದುರು ದುರ್ಬಲವಾದ ರೂಪಾಯಿ ಶೇ.13.8 ಪ್ರತಿಶತದಷ್ಟು ಕುಸಿದಿದೆ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.
ಭ್ರಷ್ಟಾಚಾರವು ದೇಶವನ್ನು ಬಾಧಿಸುವ ಮತ್ತೊಂದು ದೊಡ್ಡ ಸಮಸ್ಯೆ. ಆದ್ದರಿಂದ ಚಿಲ್ಲರೆ ಬೆಲೆಗಳು ಅಧಿಕೃತವಾಗಿ ಉಲ್ಲೇಖಿಸಿದ ಬೆಲೆಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿವೆ. ಸ್ಥಳೀಯರ ನಿತ್ಯದ ಜೀವನವನ್ನು ಇನ್ನಷ್ಟು ಕಷ್ಟಕರ ಕೂಪಕ್ಕೆ ತಳ್ಳಿದೆ. ಬಡ ವರ್ಗಕ್ಕೆ ಇದು ಅತ್ಯಧಿಕ ಹಾನಿ ಮಾಡುತ್ತಿದೆ ಎಂದು ವಿಶ್ಲೇಷಕರೊಬ್ಬರು ಇಂಡಿಯನ್‌ರೇಟಿವ್ ಡಾಟ್ ಕಾಮ್‌ಗೆ ತಿಳಿಸಿದ್ದಾರೆ.