ETV Bharat / business

ಯುದ್ಧ: ಕಳೆದ 10 ವರ್ಷದಲ್ಲೇ ಕಚ್ಚಾ ತೈಲದ ಬೆಲೆ ದಾಖಲೆಯ ಏರಿಕೆ.. ಗ್ರಾಹಕನ ಜೇಬಿಗೆ ಕತ್ತರಿ ಸಾಧ್ಯತೆ!! - ಉಕ್ರೇನ್​ ರಷ್ಯಾ ಯುದ್ಧದ ಪರಿಣಾಮಗಳು

ರಷ್ಯಾ ವಿರುದ್ಧ ಅನೇಕ ದೇಶಗಳು ಆರ್ಥಿಕ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಗಣನೀಯ ಏರಿಕೆ ಕಂಡಿದೆ.

crude oil price increased
ಕಚ್ಚಾ ತೈಲದ ಬೆಲೆ ಗಣನೀಯ ಏರಿಕೆ
author img

By

Published : Mar 4, 2022, 7:47 AM IST

ಉಕ್ರೇನ್​​: ಉಕ್ರೇನ್​ ಮೇಲೆ ರಷ್ಯಾ ದಾಳಿ ಮುಂದುವರಿಸಿದ್ದು, ಉಕ್ರೇನ್​​ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ರಷ್ಯಾ ನಡೆ ವಿರುದ್ಧ ಈಗಾಗಲೇ ಅನೇಕ ರಾಷ್ರಗಳು ತಮ್ಮ ವಿರೋಧ ವ್ಯಕ್ತಪಡಿಸಿವೆ. ರಷ್ಯಾ ವಿರುದ್ಧ ಅನೇಕ ದೇಶಗಳು ಆರ್ಥಿಕ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಗಣನೀಯ ಏರಿಕೆ ಕಂಡಿದೆ.

ಹೌದು, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್​ಗೆ 119.84 ಡಾಲರ್​ಗೆ ತಲುಪಿದೆ. ಉಕ್ರೇನ್​ ಮೇಲಿನ ರಷ್ಯಾ ಆಕ್ರಮಣ ಆರ್ಥಿಕ ಕ್ಷೇತ್ರದ ಮೇಲೆ ಭಾರಿ ಪರಿಣಾಮ ಬೀರಿದ್ದು, ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಚ್ಚಾ ತೈಲದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆಯು ಗುರುವಾರದಂದು ಪ್ರತಿ ಬ್ಯಾರೆಲ್‌ಗೆ ಶೇ. 4ರಷ್ಟು ಅಂದರೆ ಪ್ರತಿ ಬ್ಯಾರಲ್​ಗೆ 119.84 ಡಾಲರ್‌ನಷ್ಟು ಏರಿಕೆಯಾಗಿದೆ.

ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಬೆಲೆಯಲ್ಲಿ ಜಾಗತಿಕ ಮಟ್ಟದ ಹೆಚ್ಚಳವು ಭಾರತದ ದೇಶೀಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್‌ಗೆ 22 ರೂ. ಹೆಚ್ಚಿಸುವ ನಿರೀಕ್ಷೆಯಿದೆ.

ಸೋಮವಾರದಂದು ಪ್ರತಿ ಬ್ಯಾರೆಲ್‌ಗೆ 98 ಡಾಲರ್​​, ಮಂಳವಾರದಂದು ಪ್ರತಿ ಬ್ಯಾರೆಲ್‌ಗೆ 102 ಡಾಲರ್, ಬುಧವಾರದಂದು ಪ್ರತಿ ಬ್ಯಾರೆಲ್‌ಗೆ 111 ಡಾಲರ್​ಗೆ ತಲುಪಿದ್ದ ಕಚ್ಚಾ ತೈಲದ ಬೆಲೆ ಈಗ 119.84 ಡಾಲರ್​ಗೆ ದಾಖಲೆಯ ಏರಿಕೆ ಕಂಡಿದೆ.

ಕಚ್ಚಾ ತೈಲ ಉತ್ಪಾದನೆಯಲ್ಲಿ ಪ್ರಸ್ತುತ ರಷ್ಯಾ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ರಷ್ಯಾದ ವಿರುದ್ಧ ಇತರ ದೇಶಗಳ ನಿರ್ಬಂಧಗಳು ಜಾಗತಿಕ ಪೂರೈಕೆಗಳನ್ನು ಮೊಟಕುಗೊಳಿಸುತ್ತದೆ ಮತ್ತು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎನ್ನುವ ಭೀತಿ ಶುರುವಾಗಿದೆ.

ಇದನ್ನೂ ಓದಿ: ಕಠೋರ ರೂಪ ಪಡೆದುಕೊಂಡ ರಷ್ಯಾ ಆಕ್ರಮಣ.. ಉಕ್ರೇನ್​ ಸ್ಥಿತಿ ಶೋಚನೀಯ.. ಪುಟಿನ್ ವಿರುದ್ಧ ಆಕ್ರೋಶ!

ಇನ್ನೂ ಭಾರತ ದೇಶ ಕಚ್ಚಾ ತೈಲ ಆಮದುದಾರ ದೇಶವಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಬೆಲೆ 20 ರಿಂದ 22 ರೂ.ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.