ನವದೆಹಲಿ: ಕೊರೊನಾ ವೈರಸ್ನ ಎರಡನೇ ಅಲೆಯಿಂದಾಗಿ ಗಣನೀಯ ಪ್ರಮಾಣದ ಹೊಡೆತ ಅನುಭವಿಸಿರುವ ಆರ್ಥಿಕತೆಯನ್ನು ಬೆಂಬಲಿಸಲು ರಾಷ್ಟ್ರವು ಹಣವನ್ನು ಮುದ್ರಿಸುವ ಅಗತ್ಯವಿದೆ ಎಂದು ಉನ್ನತ ಬ್ಯಾಂಕರ್‌ಗಳಲ್ಲಿ ಒಬ್ಬರು ಉದಯ್ ಕೊಟಕ್ ಹೇಳಿದ್ದಾರೆ.
ಕೋಟಕ್ ಮಹೀಂದ್ರಾ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕರಾಗಿದ್ದು, ಈ ವಿತ್ತೀಯ ವಿಸ್ತರಣೆಯನ್ನು ಎರಡು ಭಾಗಗಳಲ್ಲಿ ವಿಭಾಗ ಮಾಡಬೇಕಾಗಿದೆ. ಸಂಪನ್ಮೂಲಗಳ ಕೆಳ ಭಾಗದಲ್ಲಿ ಇರುವವರಿಗೆ ಮತ್ತು ಇನ್ನೊಂದು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಕ್ಷೇತ್ರಗಳಲ್ಲಿನ ಉದ್ಯೋಗಗಳ ರಕ್ಷಣೆಗೆ ಸನ್ನದ್ಧವಾಗಬೇಕಿದ ಎಂದಿದ್ದಾರೆ.
ನನ್ನ ದೃಷ್ಟಿಯಲ್ಲಿ ಸರ್ಕಾರದ ಬ್ಯಾಲೆನ್ಸ್ ಶೀಟ್ ವಿಸ್ತರಿಸುವ ಸಮಯ ಬಂದಿದೆ. RBIನಿಂದ ಸರಿಯಾಗಿ ಬೆಂಬಲಿತವಾಗಿ, ವಿತ್ತೀಯ ವಿಸ್ತರಣೆ ಅಥವಾ ಹಣದ ಮುದ್ರಣ ಮಾಡಬೇಕಿದೆ. ನಾವು ಅದರಲ್ಲಿ ಕೆಲವನ್ನು ಮಾಡುವ ಗಳಿಗೆ ಬಂದೊದಗಿದೆ. ಈಗ ಇಲ್ಲದಿದ್ದರೆ ಇನ್ನು ಯಾವಾಗ ಎಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: WhatsApp ಬಳಕೆದಾರರೇ ಭಯಪಡಬೇಡಿ.. ಹೊಸ ಐಟಿ ರೂಲ್ಸ್ಗೆ ಐಟಿ ಸಚಿವರ ಅಭಯ
ಬಡವರಿಗೆ ನೇರ ವರ್ಗಾವಣೆಗಾಗಿ ಜಿಡಿಪಿಯ ಶೇ 1ರಷ್ಟು ಸರ್ಕಾರದ ವೆಚ್ಚವಕ್ಕೆ ಶಿಫಾರಸು ಮಾಡಿದರು. ಇದು 1 ಲಕ್ಷ ಕೋಟಿ ರೂ.ಗಳಿಂದ 2 ಲಕ್ಷ ಕೋಟಿ ರೂ. ಆಗಬಹುದು. ಪಿರಮಿಡ್‌ನ ಕೆಳಭಾಗದಲ್ಲಿರುವ ಬಳಕೆಯನ್ನು ಸಹ ಇದು ಬಲಪಡಿಸುತ್ತದೆ ಎಂದರು.
ಬಡವರಿಗೆ ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕಾಗಿದೆ. ಸಾಂಕ್ರಾಮಿಕದ ಪರಿಣಾಮವನ್ನು ಎರಡು ವಿಭಾಗಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. Covid-19 ಕಾರಣದಿಂದಾಗಿ ಅಸ್ಥಿರ ಅವಧಿಯ ಮೂಲಕ ಸಾಗುತ್ತಿರುವ ಮತ್ತು ಅದರ ಪ್ರಭಾವದಿಂದ ಬದುಕುಳಿಯುವ ಸಾಧ್ಯತೆಗಳಿವೆ ಎಂದು ಹೇಳಿದರು.