ನವದೆಹಲಿ: ಸ್ಟಾರ್ಟ್ ಅಪ್ಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆ ಆರಂಭಿಕ ಹಂತದ ನಿಧಿ, ನೌಕರರ ಸ್ಟಾಕ್ ಮಾಲೀಕತ್ವದ ಯೋಜನೆಗಳು (ಇಎಸ್ಒಪಿಗಳು) ಮತ್ತು ಅವರ ವಹಿವಾಟಿನ ಆಧಾರದ ಮೇಲೆ ಈ ಸಂಸ್ಥೆಗಳ ಮೇಲೆ ಹೊಸ ತೆರಿಗೆ ರಿಯಾಯಿತಿಗಳನ್ನು ಒಳಗೊಂಡಂತೆ ಹಲವು ಯೋಜನೆಗಳನ್ನು ಕೇಂದ್ರ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಸ್ಟಾರ್ಟ್‌ಅಪ್‌ಗಳನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿ, ನೌಕರರ ಮೇಲಿನ ತೆರಿಗೆ ಹೊರೆಯನ್ನು ಐದು ವರ್ಷಗಳವರೆಗೆ ಅಥವಾ ಅವರು ಕಂಪನಿಯನ್ನು ತೊರೆಯುವವರೆಗೆ ಅಥವಾ ಅವರು ಅದನ್ನು ಮಾರಾಟ ಮಾಡುವವರೆಗೆ ಮುಂದೂಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ತಮ್ಮ ಬಜೆಟ್ ಭಾಷಣದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಉಲ್ಲೇಖಿಸಿದ ಹಣಕಾಸು ಸಚಿವರು, ಜ್ಞಾನ-ಚಾಲಿತ ಉದ್ಯಮಗಳಿಗೆ ಮೂಲವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಯೋಜಿಸಲಾಗಿದೆ ಎಂದು ಹೇಳಿದ್ರು.
ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಗೆ ಭಾರತ ನೆಲೆಯಾಗಿದೆ. ಸ್ಟಾರ್ಟ್-ಅಪ್ ಇಂಡಿಯಾ ಅಭಿಯಾನದ ಅಡಿಯಲ್ಲಿ, ದೇಶದಲ್ಲಿ 27,000 ಹೊಸ ಸ್ಟಾರ್ಟ್ಅಪ್ಗಳಿಗೆ ಮಾನ್ಯತೆ ನೀಡಲಾಗಿದೆ ಎಂದರು.
ಸ್ಟಾರ್ಟ್ ಅಪ್ಗಳು ಬೆಳವಣಿಗೆಯ ಎಂಜಿನ್ ಎಂದು ಬಣ್ಣಿಸಿದ ನಿರ್ಮಲಾ ಸೀತಾರಾಮನ್, ವಹಿವಾಟು ಮಿತಿಯನ್ನು 25 ಕೋಟಿಯಿಂದ 100 ಕೋಟಿಗೆ ಹೆಚ್ಚಿಸಲು ಪ್ರಸ್ತಾಪಿಸಿದರು.