ETV Bharat / business

ದೇಶದ 2,200 ಜನರ ಆದಾಯ ₹ 1 ಕೋಟಿ: ತಪ್ಪು ಹೇಳಿಕೆ ಕೊಟ್ಟರಾ ಮೋದಿ? IT ಹೇಳುವುದೇನು?

130 ಕೋಟಿಗೂ ಹೆಚ್ಚು ಜನರಿರುವ ದೇಶದಲ್ಲಿ ಕೇವಲ 1.5 ಕೋಟಿ ಜನರು ಮಾತ್ರ ಆದಾಯ ತೆರಿಗೆ ಪಾವತಿಸುತ್ತಾರೆ. ಅವರಲ್ಲಿಯೂ ಕೇವಲ 3 ಲಕ್ಷ ಜನರು ಮಾತ್ರ ತಮ್ಮ ಆದಾಯವನ್ನು 50 ಲಕ್ಷ ರೂ.ಗಿಂತ ಹೆಚ್ಚಿದೆ ಎಂದು ಘೋಷಿಸಿದ್ದಾರೆ ಎಂದು ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಸುದ್ದಿವಾಹಿನಿಯ ವಿಶೇಷ​ ಕಾರ್ಯಕ್ರಮದಲ್ಲಿ ಗುರುವಾರ ಹೇಳಿಕೆ ನೀಡಿದ್ದರು.

author img

By

Published : Feb 14, 2020, 5:10 PM IST

PM Modi
ಪ್ರಧಾನಿ ಮೋದಿ

ನವದೆಹಲಿ: ದೇಶದ 2,200 ಆದಾಯ ತೆರಿಗೆ ಪಾವತಿದಾರರು ಮಾತ್ರ ತಮ್ಮ ಆದಾಯ 1 ಕೋಟಿ ರೂ.ಗಿಂತ ಹೆಚ್ಚಿದೆ ಎಂದು ಘೋಷಿಸಿಕೊಂಡಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟೀಕಿಸುತ್ತಿದ್ದಾರೆ.

ಈ ಕುರಿತು ಪತ್ರಕರ್ತರೂ ಸೇರಿದಂತೆ ಕೆಲವು ಟ್ವಿಟ್ಟರ್ ಬಳಕೆದಾರರು ಪ್ರಧಾನಿಗಳಿಗೆ ಸರಣಿ ಪ್ರಶ್ನೆಗಳನ್ನು ಹಾಕಿದ್ದಾರೆ. ಪ್ರಧಾನಿಯವರು ತಪ್ಪು ಮಾಹಿತಿ ನೀಡಿದ್ದಕ್ಕೆ ಯಾರು ದೂಷಿಸುತ್ತಾರೆ? ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ ತಪ್ಪಾಗಿ ಉಲ್ಲೇಖಿಸಿದ್ದಾರೆಯೇ? ಎಂದು ಪ್ರಶ್ನಿಸುತ್ತಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?

130 ಕೋಟಿಗೂ ಹೆಚ್ಚು ಜನರಿರುವ ದೇಶದಲ್ಲಿ ಕೇವಲ 1.5 ಕೋಟಿ ಜನರು ಮಾತ್ರ ಆದಾಯ ತೆರಿಗೆ ಪಾವತಿಸುತ್ತಾರೆ. ಅವರಲ್ಲಿಯೂ ಕೇವಲ 3 ಲಕ್ಷ ಜನರು ಮಾತ್ರ ತಮ್ಮ ಆದಾಯವನ್ನು 50 ಲಕ್ಷ ರೂ.ಗಿಂತ ಹೆಚ್ಚಿದೆ ಎಂದು ಘೋಷಿಸಿದ್ದಾರೆ ಎಂದು ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಸುದ್ದಿವಾಹಿನಿಯ ವಿಶೇಷ​ ಕಾರ್ಯಕ್ರಮದಲ್ಲಿ ಗುರುವಾರ ಹೇಳಿಕೆ ನೀಡಿದ್ದರು.

ಈ ಬಗ್ಗೆ ಮುಂದುವರಿದು ಮಾತನಾಡಿದ ಅವರು, ನಮ್ಮ ದೇಶದಲ್ಲಿ ಅಸಂಖ್ಯಾತ ವೃತ್ತಿಪರರು, ವೈದ್ಯರು, ಎಂಜಿನಿಯರ್‌ಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಬಾಲಿವುಡ್ ಕಲಾವಿದರು, ವಕೀಲರು, ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಂತಹ ವೃತ್ತಿಪರರಿಂದ ತುಂಬಿದ್ದಾರೆ. ಆದರೆ, ಅವರು ಘೋಷಿಸಿಕೊಂಡ ಆದಾಯ ತೆರಿಗೆ ಪಾವತಿ ಮೊತ್ತ ಕೇಳಿಸಿಕೊಂಡರೇ ನೀವು ಆಘಾತಕ್ಕೊಳಗಾಗುತ್ತೀರಾ! ಕೇವಲ 2,200 ಮಂದಿ ಮಾತ್ರ ತಮ್ಮ ವಾರ್ಷಿಕ ಆದಾಯವನ್ನು 1 ಕೋಟಿ ರೂ.ಗಿಂತ ಅಧಿಕ ಇದೆಯೆಂದು ಘೋಷಿಸಿಕೊಂಡಿದ್ದಾರೆ ಎಂದರು.

ಆದಾಯ ತೆರಿಗೆ (ಐಟಿ) ಇಲಾಖೆ ಹೇಳುವುದೇನು?

ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಕೇಂದ್ರೀಯ ಆದಾಯ ತೆರಿಗೆ ಇಲಾಖೆ (ಸಿಬಿಡಿಟಿ) ಸರಣಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ.

  • Out of these,1.03 crore individuals have shown income below Rs 2.5 lakh & 3.29 crore individuals disclosed taxable income between Rs.2.5 lakh to Rs.5 lakh.
    Out of 5.78 crore returns filed during this financial year,4.32 crore individuals have disclosed income upto Rs 5 lakh..2/6

    — Income Tax India (@IncomeTaxIndia) February 13, 2020 " class="align-text-top noRightClick twitterSection" data=" ">

ವೈಯಕ್ತಿಕ ಆದಾಯ ತೆರಿಗೆ ಪಾವತಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲವು ತಪ್ಪು ಮಾಹಿತಿಗಳು ಹರಿದಾಡುತ್ತಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 2018-19ರ ಸಾಲಿನಲ್ಲಿ 5.78 ಕೋಟಿ ಜನರು ಆದಾಯ ತೆರಿಗೆ ಪಾವತಿಸಿದ್ದಾರೆ.ಇದರಲ್ಲಿ 1.03 ಕೋಟಿ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರು ₹ 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದಾರೆ. 3.29 ಕೋಟಿ ಆದಾಯ ತೆರಿಗೆದಾರರು ₹ 2.5 ಲಕ್ಷದಿಂದ ₹ 5 ಲಕ್ಷದವರೆಗೆ ಆದಾಯ ಹೊಂದಿದ್ದಾರೆ ಎಂದು ಟ್ವೀಟ್​ನಲ್ಲಿ ತಿಳಿಸಿದೆ.

ಒಟ್ಟಾರೆ 5.78 ಕೋಟಿ ಐಟಿ ರಿಟರ್ನ್ಸ್​ ಸಲ್ಲಿಕೆದಾರರಲ್ಲಿ ಪ್ರಸಕ್ತ ವರ್ಷ 4.32 ಕೋಟಿ ಜನರು ಆದಾಯ ₹ 5 ಲಕ್ಷದವರೆಗೆ ಇದೆ ಎಂದಿದ್ದಾರೆ. 3.16 ಲಕ್ಷ ತೆರಿಗೆದಾರರ ಆದಾಯ ₹ 50 ಲಕ್ಷಕ್ಕೂ ಅಧಿಕವಾಗಿದೆ. 8,600 ತೆರಿಗೆದಾರರ ಆದಾಯ ₹ 5 ಕೋಟಿಗೂ ಅಧಿಕವಾಗಿದೆ ಎಂದು ಬರೆದುಕೊಂಡಿದೆ.

  • In the ITRs filed by individuals in current financial year,only about 2200 Doctors,Chartered Accountants, Lawyers &such other professionals have disclosed annual income of more than Rs.1crore from their profession(excluding other incomes like rental,interest,capital gains etc)6/6

ಪ್ರಸಕ್ತ ವರ್ಷದಲ್ಲಿ ಐಟಿಆರ್​ ಪಾವತಿಸಿದ ವೈದ್ಯರು, ಚಾರ್ಟರ್ಡ್​ ಅಕೌಂಟೆಂಟ್​, ವಕೀಲರು ಹಾಗೂ ಇತರೆ ವೃತ್ತಿಪರರ ಸಂಖ್ಯೆ ಕೇವಲ 2,200 ಇದೆ. ಇವರ ವಾರ್ಷಿಕ ಆದಾಯ ₹ 1 ಕೋಟಿಗೂ (ಬಾಡಿಗೆ, ಬಡ್ಡಿ, ಬಂಡವಾಳ ಆದಾಯ ಇತರೆ ಮೂಲ ಬಿಟ್ಟು) ಅಧಿಕವಿದೆ ಎಂದು ಘೋಷಿಸಿಕೊಂಡಿದ್ದಾರೆ ಎಂದಿದೆ. ಇದನ್ನೇ ಪ್ರಧಾನಿ ಮೋದಿ ತಮ್ಮ ಭಾಷಣೆದಲ್ಲಿ ಉಲ್ಲೇಖಿಸಿದ್ದಾರೆ ಎಂದು ಸ್ಪಷ್ಟನೆ ನೀಡಿ ಗೊಂದಲ ಬಗೆಹರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.