ವಾಷಿಂಗ್ಟನ್: ತಮ್ಮ ಜನಪ್ರಿಯತೆ ಕುಸಿಯುತ್ತಿದ್ದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತದಾರರಿಗೆ ಹೊಸ ಭರವಸೆ ನೀಡಿ, 'ನನ್ನನ್ನು ನಂಬಿರಿ' ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
38 ದಶಲಕ್ಷಕ್ಕೂ ಹೆಚ್ಚು ಜನರು ಕೆಲಸವಿಲ್ಲದ ಉದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆರ್ಥಿಕತೆಯು ಈ ಶತಮಾನದ ಗರಿಷ್ಠ ಹಿಂಜರಿತವನ್ನು ಅಮೆರಿಕ ಎದುರಿಸುತ್ತಿದೆ. ಇದರ ಮಧ್ಯೆ ಟ್ರಂಪ್, ಭವಿಷ್ಯದ ಚೇತರಿಕೆಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಮುಂಬರಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಂದು ಅವಧಿಗೆ ಕಣ್ಣಿಟ್ಟು, 'ಆರ್ಥಿಕ ಭರವಸೆ ಚೇತರಿಕೆಯ ಮೇರೆಗೆ ಇನ್ನೂ ನಾಲ್ಕು ವರ್ಷ ಅಧಿಕಾರ ಅವಧಿ ನೀಡುವಂತೆ' ಕೇಳುತ್ತಿದ್ದಾರೆ.
ಬೆಳೆಯುತ್ತಿರುವ ಆರ್ಥಿಕತೆಯು ಪತನವಾಗಲಿದೆ ಎಂದು ಟ್ರಂಪ್ ಊಹಿಸಿದ್ದಾರೆ. ನೀವು ನಾಲ್ಕನೇ ತ್ರೈಮಾಸಿಕದಲ್ಲಿ ಕೆಲವು ದೊಡ್ಡ ಸಂಖ್ಯೆಗಳನ್ನು ನೋಡಲಿದ್ದೀರಿ. ನೀವು ಮುಂದಿನ ವರ್ಷ ಉತ್ತಮ ವರ್ಷವನ್ನಾಗಿ ಮಾಡಲಿದ್ದೀರಿ ಎಂದು ಮತದಾರರನ್ನು ಹುರಿದುಂಬಿಸುತ್ತ ತಮ್ಮ ಕಡೆ ಸೆಳೆಯುವ ಕಸರತ್ತು ಮಾಡುತ್ತಿದ್ದಾರೆ.
ಟ್ರಂಪ್ ಅವರ ಮುಖ್ಯ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ, ಮುಂದಿನ ವರ್ಷದವರೆಗೆ ಕಾಯುವ ಮನೋಭಾವವನ್ನು ಪ್ರತಿಧ್ವನಿಸಿದ್ದಾರೆ. 2021ರಲ್ಲಿ ದೊಡ್ಡ ಮಟ್ಟದ ಭರವಸೆಯನ್ನು ಸಹ ಇಟ್ಟುಕೊಂಡಿದ್ದಾರೆ.
ಚುನಾವಣಾ ನಂತರದ ತೆರಿಗೆ ಕಡಿತ ಮತ್ತು ಚೀನಾದೊಂದಿಗೆ 2ನೇ ಹಂತದ ವ್ಯಾಪಾರ ಒಪ್ಪಂದ. ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿದ್ದರೂ ಮತದಾನ ಮುಕ್ತಾಯವಾದ ಬಳಿಕ ರಿಪಬ್ಲಿಕನ್ ಆರೋಗ್ಯ ರಕ್ಷಣಾ ಯೋಜನೆಯನ್ನು ಬಿಡುಗಡೆ ಮಾಡುವುದಾಗಿ ಟ್ರಂಪ್ ಈಗಾಗಲೇ ವಾಗ್ದಾನ ಮಾಡಿದ್ದರು.
ಈಗ, ಟ್ರಂಪ್ ಅವರು ಆರ್ಥಿಕತೆಯನ್ನು ಮೇಲೆತ್ತಲು ಸಹಾಯ ಮಾಡಿದರೇ ಅದನ್ನು ಮತ್ತೆ ಹಳೆಯ ಲಯಕ್ಕೆ ತರಬಹುದು ಎಂದು ಮತದಾರರಿಗೆ ಭರವಸೆ ನೀಡುತ್ತಿದ್ದಾರೆ.