ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ಗಳ ಬಲ ಪಡಿಸಲು ಮತ್ತೊಂದು ಸುತ್ತಿನ ಬ್ಯಾಂಕ್ಗಳ ರಾಷ್ಟ್ರೀಕರಣಗೊಳಿಸುವುದಾಗಿ ಘೋಷಿಸಿದ ಕೇಂದ್ರದ ನಡೆಯನ್ನು ವಿರೋಧಿಸಿ ಅಖೆಲ ಭಾರತ ಬ್ಯಾಂಕ್ ನೌಕರರ ಸಂಘಟನೆ (ಎಐಬಿಇಎ) ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ಓರಿಯಂಟಲ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯುನೈಟೆಡ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಹಾಗೂ
ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ಗಳನ್ನು ನಾಲ್ಕು ಹಂತದಲ್ಲಿ ವಿಲೀನಗೊಳಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು.
ಈ ಬಗ್ಗೆ ಮಾತನಾಡಿದ ಎಐಬಿಇಎ ಮುಖ್ಯಸ್ಥ ಚಿ.ಎಚ್. ವೆಂಕಟಾಲಯಂ ಅವರು, ಭಾರತದಲ್ಲಿ ಮೆಗಾ ಬ್ಯಾಂಕಿಂಗ್ ಹಾಗೂ ದೊಡ್ಡ ವಿಲೀನದ ಅಗತ್ಯವಿಲ್ಲ. ನಮ್ಮದು ವಿಶಾಲವಾದ ರಾಷ್ಟ್ರವಾಗಿದ್ದು, ಲಕ್ಷಾಂತರ ಹಳ್ಳಿಗಳಲ್ಲಿ ಈಗಲೂ ಬ್ಯಾಂಕ್ಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್ ವಿಲೀನ ಬೇಕಾಗಿಲ್ಲ. ಇದನ್ನು ವಿರೋಧಿಸಿ ನಾಳೆ (ಶನಿವಾರ) ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.