ETV Bharat / business

ಸರ್ಕಾರದ ಬಳಿ ಹಣವಿಲ್ಲ, ಟೋಲ್​ ದುಡ್ಡು ಕಟ್ಟಲೇಬೇಕು: ಗಡ್ಕರಿ

ಲೋಕಸಭೆಯಲ್ಲಿ ರಸ್ತೆ ಹಾಗೂ ಹೆದ್ದಾರಿಗೆ ಮೀಸಲಿಟ್ಟ ಅನುದಾನದ ಕುರಿತು ಮಾತನಾಡಿದ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರು, ಸರ್ಕಾರದ ಬಳಿ ಹಣವಿಲ್ಲ. ಟೋಲ್​ ವ್ಯವಸ್ಥೆ ಎಂದಿಗೂ ಕೊನೆಗೊಳ್ಳುವಂತಹದಲ್ಲ. ಸಮಯದಿಂದ ಸಮಯಕ್ಕೆ ವಸೂಲಾತಿ ಮೊತ್ತ ಬದಲಾಗುತ್ತದೆ. ಉತ್ತಮವಾದ ಸೇವೆಗಳು ಬೇಕಾದರೆ ಟೋಲ್ ಹಣ ಕಟ್ಟಬೇಕು ಎಂದು ತಿಳಿಸಿದರು.

author img

By

Published : Jul 16, 2019, 10:32 PM IST

Updated : Jul 17, 2019, 3:58 AM IST

ಸಂಗ್ರಹ ಚಿತ್ರ

ನವದೆಹಲಿ: ಟೋಲ್​ ವ್ಯವಸ್ಥೆ ಕೊನೆಗೊಳ್ಳುವುದಿಲ್ಲ. ಜನರಿಗೆ ಉತ್ತಮವಾದ ಸೇವೆಗಳು ಬೇಕೆಂದರೆ ಹಣ ಪಾವತಿಸಲೇಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಹೇಳಿದರು.

ಲೋಕಸಭೆಯಲ್ಲಿ ರಸ್ತೆ ಹಾಗೂ ಹೆದ್ದಾರಿಗೆ ಮೀಸಲಿಟ್ಟ ಅನುದಾನದ ಕುರಿತು ಮಾತನಾಡಿದ ಅವರು, ಸರ್ಕಾರದ ಬಳಿ ಹಣವಿಲ್ಲ. ಟೋಲ್​ ವ್ಯವಸ್ಥೆ ಎಂದಿಗೂ ಕೊನೆಗೊಳ್ಳುವಂತಹದಲ್ಲ. ಸಮಯದಿಂದ ಸಮಯಕ್ಕೆ ವಸೂಲಾತಿ ಮೊತ್ತ ಬದಲಾಗುತ್ತದೆ. ಉತ್ತಮವಾದ ಸೇವೆಗಳು ಬೇಕಾದರೆ ಟೋಲ್ ಹಣ ಕಟ್ಟಬೇಕು ಎಂದು ತಿಳಿಸಿದರು.

ಪಾವತಿಸಲು ಸಮರ್ಥರಿರುವ ಸ್ಥಳಗಳಲ್ಲಿ ಮಾತ್ರ ಟೋಲ್ ವಸೂಲಿ ಮಾಡಲಾಗುತ್ತಿದೆ, ಈ ಮೂಲಕ ಗ್ರಾಮೀಣ ಮತ್ತು ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಒಂದುವರೆ ಗಂಟೆ ಮಾತನಾಡಿದ ಗಡ್ಕರಿ, ಕಳೆದ 5 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ 40 ಸಾವಿರ ಕಿ.ಮೀ. ಹೆದ್ದಾರಿ ನಿರ್ಮಿಸಿದೆ. ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ಇದು ಭಯೋತ್ಪಾದನೆ ದಾಳಿಗೆ ಬಲಿಯಾದವರ ಸಂಖ್ಯೆಗಿಂತ ಅಧಿಕವಾಗಿದೆ ಎಂದರು.

Intro:Body:Conclusion:
Last Updated : Jul 17, 2019, 3:58 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.