ನವದೆಹಲಿ: 10 ಗ್ರಾಂನ 24 ಕ್ಯಾರೆಟ್ ಚಿನ್ನದ(Gold in 24 carat) ಬೆಲೆ 370 ರೂ.ನಷ್ಟು ಕಡಿಮೆಯಾಗಿ 49,100 ರೂ.ಗೆ ತಲುಪಿದೆ. ಬೆಳ್ಳಿಯ ಬೆಲೆ ಕೆಜಿಗೆ 100 ರೂಪಾಯಿ ಇಳಿಕೆಯಾಗಿ 66,300 ರೂಪಾಯಿಗಳೊಂದಿಗೆ ವ್ಯವಹಾರ ನಡೆಸುತ್ತಿದೆ.
ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 52,420 ರೂ., ಮುಂಬೈನಲ್ಲಿ 49,100 ರೂ.ಗೆ ನಿಂತಿದೆ. ದೆಹಲಿ ಮತ್ತು ಮುಂಬೈನಲ್ಲಿ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,050 ಮತ್ತು 48,100 ರೂ.
ಚೆನ್ನೈನಲ್ಲಿ (Chennai)24 ಕ್ಯಾರೆಟ್ ಚಿನ್ನ 50,550 ರೂ.ಗೆ ಮಾರಾಟವಾಗುತ್ತಿದ್ದು, 22 ಕ್ಯಾರೆಟ್ 46,340 ಆಗಿದೆ. ಕೋಲ್ಕತ್ತಾದಲ್ಲಿ 24ಕ್ಯಾರೆಟ್ ಚಿನ್ನ ರೂ.51,000 ಹಾಗೂ 22ಕ್ಯಾರೆಟ್ ರೂ.48,300ಕ್ಕೆ ಮಾರಾಟವಾಗುತ್ತಿದೆ.
ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಮೇಕಿಂಗ್ ಶುಲ್ಕಗಳ ಕಾರಣದಿಂದಾಗಿ ಚಿನ್ನದ ಆಭರಣಗಳ ದರವು ರಾಷ್ಟ್ರದಾದ್ಯಂತ ಬದಲಾಗುತ್ತಿರುತ್ತದೆ. ಚೆನ್ನೈನಲ್ಲಿ ಮಂಗಳವಾರ 1 ಕೆಜಿ ಬೆಳ್ಳಿಯ ಬೆಲೆ 71,400 ರೂ., ದೆಹಲಿ ಮತ್ತು ಮುಂಬೈನಲ್ಲಿ ಲೋಹದ ಬೆಲೆ 66,300 ರೂ.ಗೆ ಮಾರಾಟವಾಗುತ್ತಿದೆ.