ETV Bharat / business

ಕೊರೊನಾ ಎಫೆಕ್ಟ್​: ಭಾರತದ ನಿರುದ್ಯೋಗ ದರ ಶೇ 27ಕ್ಕೆ ಏರಿಕೆ - ಲಾಕ್​ಡೌನ್

ಲಾಕ್​ಡೌನ್ ಸಮಯದಲ್ಲಿ ಕಾರ್ಮಿಕ ಭಾಗವಹಿಸುವಿಕೆ ಕ್ಷೀಣಿಸಿದೆ. ನಿರುದ್ಯೋಗ ದರದ ಏಕಕಾಲಿಕ ಹೆಚ್ಚಳವು ನಿರಾಶೆಯನ್ನು ಪ್ರತಿಬಿಂಬಿಸುತ್ತದೆ.

ಉದ್ಯೋಗ ಕಡಿತ
author img

By

Published : May 5, 2020, 5:39 PM IST

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಭಾರತದಲ್ಲಿ ಹೇರಲಾಗಿರುವ ಲಾಕ್‌ಡೌನ್ ಆದೇಶದಿಂದ, ದೇಶದ ನಿರುದ್ಯೋಗ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಮೇ 3ಕ್ಕೆ ಕೊನೆಗೊಂಡ ವಾರದಲ್ಲಿ ನಿರುದ್ಯೋಗ ದರವು ಶೇ 27.1ಕ್ಕೆ ಏರಿದೆ. ಇದು ಇದುವರೆಗಿನ ಅತಿ ಹೆಚ್ಚು ನಿರುದ್ಯೋಗ ದರವಾಗಿದೆ. ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣವು ಏಪ್ರಿಲ್ 21ರ ವಾರದಲ್ಲಿ ಶೇ 35.4 ರಿಂದ ಮೇ 3ಕ್ಕೆ ಕೊನೆಗೊಂಡ ವಾರದಲ್ಲಿ ಶೇ 36.2ಕ್ಕೆ ಏರಿಕೆ ಆಗಿರುವುದರಿಂದ ಇದು ಕೂಡ ಏರಿಕೆಯಾಗಿದೆ ಎಂದು ತೋರುತ್ತದೆ.

2020ರ ಏಪ್ರಿಲ್ ತಿಂಗಳಲ್ಲಿ ನಿರುದ್ಯೋಗ ದರವು ಶೇ 23.5ರಷ್ಟಿತ್ತು. ಮೇ ಮೊದಲ ವಾರದ ದತ್ತಾಂಶವು ದರ ಮತ್ತಷ್ಟು ಏರಿಕೆಯಾಗಬಹುದು ಎಂದು ಸೂಚಿಸುತ್ತದೆ. ಲಾಕ್‌ಡೌನ್ ದೀರ್ಘಕಾಲದವರೆಗೆ ಮುಂದುವರಿಯುವುದರಿಂದ ಈ ಏರಿಕೆ ನಿರೀಕ್ಷಿತವಾಗಿದೆ. ಆರಂಭದಲ್ಲಿ ಲಾಕ್‌ಡೌನ್ ಅನೌಪಚಾರಿಕ ವಲಯದ ಅಸಂಘಟಿತ ಕಾರ್ಮಿಕರನ್ನು ಮಾತ್ರ ನೋಯಿಸಿತ್ತು. ಈಗ ಸಂಘಟಿತ ಕಾರ್ಮಿಕರ ಮೇಲೂ ಪ್ರಭಾವ ಬೀರಿದೆ.

ಸ್ಟಾರ್ಟ್​ಅಪ್​ಗಳು ಕೆಲಸದಿಂದ ಹೊರಗುಳಿಯುವುದನ್ನು ಘೋಷಿಸಿವೆ. ಉದ್ಯಮ ಸಂಘಗಳು ಉದ್ಯೋಗ ನಷ್ಟದ ಬಗ್ಗೆ ಎಚ್ಚರಿಕೆ ನೀಡಿವೆ. 2,800ಕ್ಕೂ ಹೆಚ್ಚು ಸದಸ್ಯ ಕಂಪನಿಗಳನ್ನು ಹೊಂದಿರುವ, ಭಾರತದ ಐಟಿ ಸಂಘವಾದ ನಾಸ್ಕಾಮ್ ಸಹ ಉದ್ಯೋಗ ನಷ್ಟದ ಬಗ್ಗೆ ಎಚ್ಚರಿಕೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.