ಚೆನ್ನೈ: ಆರೋಗ್ಯಕರ ಆಹಾರ ಪದ್ಧತಿಯತ್ತ ಜನರನ್ನು ಪ್ರೋತ್ಸಾಹಿಸಲು ಹೆಚ್ಚಿನ ಕೊಬ್ಬಿನಾಂಶ, ಅಧಿಕ ಸಕ್ಕರೆ ಪದಾರ್ಥ ಮತ್ತು ಉಪ್ಪಿನ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸುವುದನ್ನು ಸರ್ಕಾರ ಪರಿಗಣಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಸಲಹೆ ನೀಡಿದ್ದಾರೆ.
ಎಂ ಎಸ್ ಸ್ವಾಮಿನಾಥನ್ ರೀಸರ್ಚ್ ಫೌಂಡೇಷನ್ (ಎಂಎಸ್ಎಸ್ಆರ್ಎಫ್) ಆಯೋಜಿಸಿದ್ದ ಡಾ.ಸಿ ಸಿ ಗೋಪಾಲನ್ ಸ್ಮಾರಕ ಉಪನ್ಯಾಸ ನೀಡಿ ಮಾತನಾಡಿದ ಅವರು, ಸ್ಟಂಟಿಂಗ್ ಜೊತೆಗೆ ಅಧಿಕ ತೂಕ ಮತ್ತು ಸ್ಥೂಲಕಾಯಂತಹ ಸಮಸ್ಯೆಗಳನ್ನು ಪರಿಹರಿಸಬೇಕಾದ ಹೊಸ ಪೌಷ್ಠಿಕಾಂಶಗಳ ಅಗತ್ಯವಿದೆ ಎಂದರು.
ಅಪೌಷ್ಠಿಕತೆ ಮತ್ತು ಕೊರತೆಗಳು ಕಡಿಮೆ ಆದಾಯದ ದೇಶಗಳಲ್ಲಿನ ಸಮಸ್ಯೆಗಳಿಗಿವೆ. ಅಧಿಕ ತೂಕ ಮತ್ತು ಸ್ಥೂಲಕಾಯತೆಯು ಹೆಚ್ಚಿನ ಆದಾಯದ ದೇಶಗಳ ಸಮಸ್ಯೆಗಳಾಗಿವೆ. ಈ ಇಬ್ಬರ ಮಧ್ಯೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ ಜನ ಸಮುದಾಯ ಉತ್ತಮ ಆರೋಗ್ಯದ ಸಹಬಾಳ್ವೆ ನಡೆಸುತ್ತಿದ್ದಾರೆ ಎಂದು ಹೇಳಿದರು.