ETV Bharat / business

ಪೂರೈಕೆ ಸರಪಳಿ ಅಡೆತಡೆಗಳು MSME ಗಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ: WTO - ವಿಶ್ವ ವ್ಯಾಪಾರ ಸಂಘಟನೆ

ಸೀಮಿತ ಆರ್ಥಿಕ ಸಂಪನ್ಮೂಲ ಮತ್ತು ಸಾಲ ಪಡೆಯುವ ಸಾಮರ್ಥ್ಯ, ಸಾಮಾಜಿಕ ಅಂತರ ಕ್ರಮಗಳು ಮತ್ತು ಸಾರಿಗೆ ಅಡೆತಡೆಗಳಿಂದಾಗಿ ಎಂಎಸ್‌ಎಂಇಗಳು ವಿಶೇಷವಾಗಿ ಕೋವಿಡ್​-19 ಸಾಂಕ್ರಾಮಿಕ ರೋಗದ ಆರ್ಥಿಕ ಪ್ರಭಾವಕ್ಕೆ ಒಡ್ಡಿಕೊಳ್ಳುತ್ತವೆ. ಎಂಎಸ್‌ಎಂಇಗಳು ವಿಶೇಷವಾಗಿ ಕೃಷಿ ಉತ್ಪನ್ನಗಳ ಮೇಲಿನ ವ್ಯಾಪಾರ ನಿರ್ಬಂಧಗಳಿಗೆ ಒಡ್ಡಿಕೊಳ್ಳುತ್ತವೆ ಎಂದು ವಿಶ್ವ ವ್ಯಾಪಾರ ಸಂಘಟನೆ ತಿಳಿಸಿದೆ.

ವಿಶ್ವ ವ್ಯಾಪಾರ ಸಂಘಟನೆ
author img

By

Published : Jun 5, 2020, 8:16 PM IST

ಹೈದರಾಬಾದ್: ಕೋವಿಡ್ -19 ಸಾಂಕ್ರಾಮಿಕ ರೋಗವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ(ಎಂಎಸ್‌ಎಂಇ)ಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬ ಮಾಹಿತಿಯನ್ನು ವಿಶ್ವ ವ್ಯಾಪಾರ ಸಂಘಟನೆ ಸಚಿವಾಲಯ ಪ್ರಕಟಿಸಿದೆ.

ಪೂರೈಕೆ ಸರಪಳಿ ಅಡೆತಡೆ(Supply Chain Disruption)ಗಳು ಎಂಎಸ್‌ಎಂಇಗಳ ಮೇಲೆ ಪ್ರಭಾವ ಬೀರಿದೆ. ಇದರೊಂದಿಗೆ ಆರ್ಥಿಕ ಕ್ಷೇತ್ರಗಳಲ್ಲಿ ಸಣ್ಣ ಉದ್ಯಮಗಳ ಮೇಲೆ ಕೊರೊನಾ ಬಿಕ್ಕಟ್ಟಿನಿಂದ ಹೆಚ್ಚು ಹಾನಿಯಾಗಿದೆ ಎಂದು ವಿಶ್ವ ವ್ಯಾಪಾರ ಸಂಘಟನೆ ತಿಳಿಸಿದೆ.

ಎಂಎಸ್‌ಎಂಇಗಳು ಅನೇಕ ರಾಷ್ಟ್ರಗಳ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಇದು ವಿಶ್ವಾದ್ಯಂತ ಇರುವ ಎಲ್ಲ ಕಂಪನಿಗಳಲ್ಲಿ 95 ಪ್ರತಿಶತವನ್ನು ಪ್ರತಿನಿಧಿಸುತ್ತವೆ. ಮತ್ತು 60 ಶೇ. ಪ್ರಮಾಣದಲ್ಲಿ ಉದ್ಯೋಗವನ್ನು ನೀಡುತ್ತವೆ.

ಅನೇಕ ಎಂಎಸ್‌ಎಂಇಗಳು ತಮ್ಮ ಚಟುವಟಿಕೆಗಳಿಗಾಗಿ ಅಂತಾರಾಷ್ಟ್ರೀಯ ವ್ಯಾಪಾರವನ್ನು ಅವಲಂಬಿಸಿವೆ. ಯಾಕೆಂದರೆ ಇವುಗಳು ತಮ್ಮ ಉತ್ಪನ್ನಗಳನ್ನು ನೇರ ಅಥವಾ ಪರೋಕ್ಷ ಮಾರ್ಗದ ಮೂಲಕ ರಫ್ತು ಮಾಡುತ್ತವೆ. ಇನ್ನೊಂದೆಡೆ ಈ ಉದ್ದಿಮೆಗಳು ದೇಶೀಯವಾಗಿ ಮಾರಾಟ ಮಾಡುವ ಉತ್ಪನ್ನಗಳನ್ನು ತಯಾರಿಸಲು ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುತ್ತವೆ. ಇನ್ನೊಂದೆಡೆ ಈ ಉದ್ದಿಮೆಗಳು ಮಹಿಳೆಯರು ಮತ್ತು ಯುವಜನರ ಪ್ರಮುಖ ಉದ್ಯೋಗದಾತ ಉದ್ದಿಮೆಗಳಾಗಿವೆ ಎಂದು ಸಚಿವಾಲಯ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.