ಕೋಲ್ಕತ್ತಾ: ಪೆಟ್ರೋಲ್, ಡೀಸೆಲ್ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳು ಯಾವಾಗ ಜಿಎಸ್ಟಿ ವ್ಯಾಪ್ತಿಗೆ ಬರಬೇಕು ಎಂಬುದನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಹಾಗೂ ರಾಜ್ಯಗಳು ನಿರ್ಧರಿಸಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಬಗ್ಗೆ 'ಈಟಿವಿ ಭರತ್' ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಅವರು, ಜಿಎಸ್ಟಿ ಅಡಿ ಪೆಟ್ರೋಲಿಯಂ ಉತ್ಪನ್ನಗಳನ್ನ ತರಲು ರಾಜ್ಯಗಳು ಸಿದ್ಧವಾದರೆ, ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿಲ್ಲ. ಈಗ ರಾಜ್ಯಗಳು ಮತ್ತು ಜಿಎಸ್ಟಿ ಕೌನ್ಸಿಲ್ ಈ ಬಗ್ಗೆ ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಆಗ ಇದು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಜಿಎಸ್ಟಿ ರೂಪಿಸಲ್ಪಟ್ಟಾಗ ಮತ್ತು ಅನಷ್ಠಾನಕ್ಕೆ ತರಲ್ಪಟ್ಟಾಗಲೂ ಪೆಟ್ರೋಲ್ ಮತ್ತು ಪೆಟ್ರೋಲಿಯಂ ಸಂಬಂಧಿತ ಉತ್ಪನ್ನಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆ ಸಮಯದಲ್ಲಿ ದಿವಂಗತ ಅರುಣ್ ಜೇಟ್ಲಿ ಜೀ ಅವರು ಒಂದು ನಿಬಂಧನೆ ಮಾಡಿದ್ದರು. ಜಿಎಟ್ಟಿ ತಿದ್ದುಪಡಿಯಲ್ಲಿ ಶೂನ್ಯ ದರದ ಪೆಟ್ರೋಲಿಯಂ ಉತ್ಪನ್ನದ ನಿಬಂಧನೆ ಸಹ ಅದರಲ್ಲಿ ಒಳಗೊಂಡಿತ್ತು ಎಂದು ಹೇಳಿದ್ದಾರೆ.
ಸಾರ್ವಜನಿಕರಿಗೆ ಎಲ್‌ಐಸಿಯಲ್ಲಿ ಷೇರುದಾರರಾಗಲು ಐಪಿಒ ನೀಡಲಾಗುವುದು. ಸಾರ್ವಜನಿಕ ಹಣ ಅಸುರಕ್ಷಿತ ಎಂಬ ಪ್ರಶ್ನೆಯೇ ಎಂಬುದಿಲ್ಲ. ಇದೊಂದು ಸಾರ್ವಜನಿಕ ಹಿಡುವಳಿಯಾಗಿರುತ್ತದೆ. ಅಲ್ಲಿ ಒಂದು ನಿಯಂತ್ರಕ ಸಂಸ್ಥೆ ಜಾರಿಯಲ್ಲಿರುತ್ತದೆ. ಎಲ್ಲವೂ ಪಾರದರ್ಶಕ ಮತ್ತು ಹೊಣೆಗಾರಿಕೆಯಿಂದ ನಡೆಯಲಿದೆ. ಈ ಹಿಂದಿನಂತೆಯೇ ಮುಂದುವರಿಯಲಿದೆ ಎಂದು 'ಈಟಿವಿ ಭಾರತ್' ಪ್ರಶ್ನೆಯೊಂದಕ್ಕೆ ಸೀತಾರಾಮನ್ ಉತ್ತರಿಸಿದರು.