ETV Bharat / business

ಕೇಂದ್ರದ ಬಳಿ ಭಿಕ್ಷೆ ಬೇಡುತ್ತಿಲ್ಲ, ನಮ್ಮ ಬಾಕಿ ಹಣ ಕೇಳುತ್ತಿದ್ದೇವೆ: ಮೋದಿ ವಿರುದ್ಧ ತಿರುಗಿಬಿದ್ದ ಸಿಎಂಗಳು! - ಉದ್ಧವ್ ಠಾಕ್ರೆ

ನಾವು ನಮ್ಮ ಬಾಕಿ ಹಣ ಕೇಳುತ್ತಿದ್ದೇವೆಯೇ ಹೊರತು ನಿಮ್ಮ ಬಳಿ ಭಿಕ್ಷೆ ಬೇಡುತ್ತಿಲ್ಲ. ಪಶ್ಚಿಮ ಬಂಗಾಳಕ್ಕೆ ಕೇಂದ್ರದಿಂದ 53,000 ಕೋಟಿ ರೂ. ಬಾಕಿ ಹಣ ಇನ್ನೂ ಬಂದಿಲ್ಲ. ಕಾರ್ಮಿಕರಿಗೆ ಸಂಬಳ ನೀಡುವುದಕ್ಕೂ ಕಷ್ಟವಾಗಿದೆ. ಈಗ ತುಂಬಾ ಗಂಭೀರ ಪರಿಸ್ಥಿತಿ ಇದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದರು.

Cms
ಸಿಎಂಗಳು
author img

By

Published : Aug 26, 2020, 7:53 PM IST

ನವದೆಹಲಿ: ಕೊರೊನಾ ವೈರಸ್​​ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​​ಟಿ) ಪರಿಹಾರ ತಡೆಹಿಡಿದಿದ್ದಕ್ಕಾಗಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಜಾರ್ಖಂಡ್ ಸೇರಿದಂತೆ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವರ್ಚುವಲ್ ಸಭೆ ನಡೆಸಿದರು. ಪ್ರಧಾನಿ ಮೋದಿ ಸರ್ಕಾರ ಬಾಕಿ ಉಳಿಸಿಕೊಂಡ ಜಿಎಸ್​ಟಿ ಪರಿಹಾರ ಮೊತ್ತ ಸಂಬಂಧ ವಾಗ್ದಾಳಿ ನಡೆಸಿದರು.

ನಾವು ನಮ್ಮ ಬಾಕಿ ಹಣ ಕೇಳುತ್ತಿದ್ದೇವೆಯೇ ಹೊರತು ನಿಮ್ಮ ಬಳಿ ಭಿಕ್ಷೆ ಬೇಡುತ್ತಿಲ್ಲ. ಪಶ್ಚಿಮ ಬಂಗಾಳಕ್ಕೆ ಕೇಂದ್ರದಿಂದ 53,000 ಕೋಟಿ ರೂ. ಬಾಕಿ ಹಣ ಇನ್ನೂ ಬಂದಿಲ್ಲ. ಕಾರ್ಮಿಕರಿಗೆ ಸಂಬಳ ನೀಡುವುದಕ್ಕೂ ಕಷ್ಟವಾಗಿದೆ. ಈಗ ತುಂಬಾ ಗಂಭೀರ ಪರಿಸ್ಥಿತಿ ಇದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಪ್ರಸ್ತುತ ಅಂದಾಜಿನ ಪ್ರಕಾರ, ಪಂಜಾಬ್ ಈ ಹಣಕಾಸು ವರ್ಷದಲ್ಲಿ 25,000 ಕೋಟಿ ರೂ. ಪಡೆಯಬೇಕಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದರು.

ಕೊರೊನಾ ವೈರಸ್ ಅನ್ನು ಎದುರಿಸಲು ನನ್ನ ಬಳಿ ಹಣವಿಲ್ಲ. ನಾನು ಕೆಲವೊಮ್ಮೆ ಸಂಬಳ ಮತ್ತು ಇತರ ಪರಿಹಾರಗಳನ್ನು ಹೇಗೆ ನೀಡಬೇಕು ಎಂಬುದರ ಬಗ್ಗೆ ಚಿಂತಿಸುತ್ತಿದ್ದೇನೆ ಎಂದು ಸಭೆಯಲ್ಲಿ ಅಸಮಾಧಾನ ಹೊರಹಾಕಿದರು.

ನಾವು ಈಗಾಗಲೇ ಕೊರೊನಾ ವೈರಸ್​​ಗೆ ಸುಮಾರು 500 ಕೋಟಿ ರೂ. ಖರ್ಚು ಮಾಡಿದ್ದೇವೆ. ನಮ್ಮ ರಾಜ್ಯಗಳ ಹಣಕಾಸು ಪರಿಸ್ಥಿತಿ ಸಂಪೂರ್ಣವಾಗಿ ಕುಸಿದಿದೆ. ಕೇಂದ್ರವು ಜಿಎಸ್​​ಟಿ ಪರಿಹಾರ ನೀಡಿಲ್ಲ. ನಾವು ಸಾಮೂಹಿಕವಾಗಿ ಪ್ರಧಾನಿ ಅವರನ್ನು ಭೇಟಿ ಮಾಡಲು ಇಚ್ಛಿಸುತ್ತೇವೆ ಅಮರಿಂದರ್​ ಸಿಂಗ್ ಅವರು ಸಿಎಂ ಮಮತಾ ಅವರ ಮಾತನ್ನು ಬೆಂಬಲಿಸಿದರು.

ಮುಖ್ಯಮಂತ್ರಿಗಳು ತಮ್ಮ ಹಕ್ಕುಗಳಿಗಾಗಿ ಕೇಂದ್ರದ ವಿರುದ್ಧ ಬಲವಾದ ಹೋರಾಟ ನಡೆಸಬೇಕಿದೆ. ಮೊದಲು ನಾವು ಹೋರಾಡಬೇಕೇ ಅಥವಾ ಭಯಪಡಬೇಕೇ ಎಂದು ನಿರ್ಧರಿಸಬೇಕು. ನಾವು ಹೋರಾಡಬೇಕಾದರೆ ಏನೇ ಅದರು ಅದನ್ನು ಮಾಡಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದರು.

ಏಪ್ರಿಲ್‌ನಿಂದ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಬಾಕಿ ಬಂದಿಲ್ಲ. ಕೇಂದ್ರ ಸರ್ಕಾರದಿಂದ ಪಡೆಯಬೇಕಾದ ಮೊತ್ತ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಾವು ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದೇವೆ. ಕೆಲವೊಮ್ಮೆ ನಮಗೆ ಪ್ರತಿಕ್ರಿಯೆ ಸಿಗುತ್ತದೆ, ಕೆಲವೊಮ್ಮೆ ಸಿಗುವುದಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.