ETV Bharat / business

ಉತ್ಸುಕ ಯುವಕರ ಸ್ಟಾರ್ಟ್​​ಅಪ್‌ ನಿರೀಕ್ಷೆಗಳಿಗೆ ನೀರೆರೆಯುತ್ತಾರಾ ನಿರ್ಮಲಾ?

author img

By

Published : Jan 22, 2021, 7:07 PM IST

ಮುಂಬರುವ ಬಜೆಟ್​ನಲ್ಲಿ ಸ್ಟಾರ್ಟ್ಅಪ್​ಗಳ ಅನುಸರಣೆ ಹೊರೆ ತಗ್ಗಿಸುವಿಕೆ, ಹೆಚ್ಚಿನ ನೇರ ಬೆಂಬಲ, ತೆರಿಗೆ ಪರಿಹಾರ ಮತ್ತು ಸುಲಭ ಸಾಲದ ನೆರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದಿಡಲಾಗಿದೆ. ಕೇಂದ್ರ ಈ ನಿರ್ಧಾರ ತೆಗೆದುಕೊಂಡರೆ ಕೋವಿಡ್ ನಂತರದ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ ಎಂಬುದು ನವೋದ್ಯಮಿಗಳ ಅಂಬೋಣ.

Nirmala Sitharaman
Nirmala Sitharaman

ನವದೆಹಲಿ: ಫೆಬ್ರವರಿಯ ಆರಂಭದಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್‌ ಭಾರತೀಯ ಉದ್ಯಮಿಗಳು ಮತ್ತು ನವೋದ್ಯಮಿಗಳಲ್ಲಿ (ಸ್ಟಾರ್ಟ್‌ಅಪ್‌) ಸಾಕಷ್ಟು ಭರವಸೆ ಮೂಡಿಸಿದೆ.

ಸ್ಟಾರ್ಟ್ಅಪ್​ಗಳ ಅನುಸರಣೆ ಹೊರೆ ತಗ್ಗಿಸುವಿಕೆ, ಹೆಚ್ಚಿನ ನೇರ ಬೆಂಬಲ, ತೆರಿಗೆ ಪರಿಹಾರ ಮತ್ತು ಸುಲಭ ಸಾಲದ ನೆರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದಿಟ್ಟಿವೆ. ಕೇಂದ್ರ ಈ ನಿರ್ಧಾರ ತೆಗೆದುಕೊಂಡರೆ ಕೋವಿಡ್ ನಂತರದ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ ಎಂಬುದು ನವೋದ್ಯಮಿಗಳ ಅಂಬೋಣ

ಕಳೆದ ಬಜೆಟ್​​ನಲ್ಲಿ ಸೀತಾರಾಮನ್ ಅವರು ಸ್ಟಾರ್ಟ್​ಅಪ್​ಗಳ 'ಬಂಡವಾಳ ಹೂಡಿಕೆ ಮೇಲಿನ ತೆರಿಗೆ ರದ್ದು (ಏಂಜೆಲ್ ಟ್ಯಾಕ್ಸ್​) ಹಾಗೂ ಆದಾಯ ತೆರಿಗೆ ಪರಿಶೀಲನೆಯಿಂದ ವಿನಾಯಿತಿ ನೀಡುವುದಾಗಿ ಭರವಸೆ ನೀಡಿದ್ದರು. 100 ಕೋಟಿ ರೂ. ವಹಿವಾಟಿನವರೆಗೆ ಇರುವ ನವೋದ್ಯಮಗಳಿಗೆ 10 ವರ್ಷಗಳಲ್ಲಿ ಸತತ 3 ಹಣಕಾಸಿನ ವರ್ಷಗಳಲ್ಲಿ 100ರಷ್ಟು ಕಡಿತದ ರಿಯಾಯಿತಿ ನೀಡಿದ್ದರು.

ಇಂಗ್ಲಿಷೇತರ ಕಲಿಕಾ ಶಾಲಾ ಮಕ್ಕಳಿಗೆ ಆಂಗ್ಲ ಭಾಷೆ ಕಲಿಸಲು ಸಂವಾದಾತ್ಮಕ ಆ್ಯಪ್ ಆಕಿಪಾಕಿ (OckyPocky) ಸ್ಥಾಪಿಸಿದ ಅಮಿತ್ ಅಗ್ರವಾಲ್ ಈಟಿವಿ ಭಾರತ ಜೊತೆ ಮಾತನಾಡಿ, ಮುಂಬರುವ ಬಜೆಟ್‌ನಲ್ಲಿ ಅಂತಿಮ ಬಳಕೆದಾರರಿಗೆ ಹೆಚ್ಚಿನ ಪರಿಹಾರ ಘೋಷಿಸುವ ಮೂಲಕ ಸರ್ಕಾರವು ಪ್ಯಾರಾ ಶಿಕ್ಷಣ ಉದ್ಯಮ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕೋವಿಡ್ -19 ಪ್ರೇರಿತ ಲಾಕ್‌ಡೌನ್‌ಗಳಿಂದಾಗಿ ತರಗತಿಗಳ ಬಾಗಿಲು ತೆರೆಯಲಿಲ್ಲ. ಆನ್​ಲೈನ್​ ಶಿಕ್ಷಣ ಮೊರೆ ಹೋಗಿದ್ದರ ತತ್ಪರಿಣಾಮ ಸ್ಟಾರ್ಟ್ಅಪ್‌ಗಳ ಬೆಳವಣಿಗೆಗೆ ಉತ್ತುಂಗಕ್ಕೇರಿದವು.

ಎಡ್​ಟೆಕ್ ಕಂಪನಿಗಳು ಎಂದು ಕರೆಯಲ್ಪಡುವ ಈ ಸ್ಟಾರ್ಟ್‌ಅಪ್‌ಗಳು ಸಂವಾದಾತ್ಮಕ ಅಪ್ಲಿಕೇಶನ್‌ಗಳ ಮೂಲಕ ಮಕ್ಕಳಲ್ಲಿ ಗಣಿತ ಮತ್ತು ಇಂಗ್ಲಿಷ್ ಕೌಶಲ್ಯ ಸುಧಾರಿಸುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಹಲವು ಸೇವೆಗಳನ್ನು ನೀಡುತ್ತವೆ.

ಸರ್ಕಾರದ ಅಸಡ್ಡೆಯಿಂದಾಗಿ ಟೈರ್​- II ಮತ್ತು ಟೈರ್​-3 ನಗರಗಳಲ್ಲಿನ ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಲ್ಲಿ ಹೆಚ್ಚಿನವರು ನವೋದ್ಯಮದ ಸೇವೆಯಿಂದ ವಂಚಿತರಾಗುತ್ತಿರುವುದು ಕಳವಳ ಮಾತ್ರವಲ್ಲದೇ, ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ವಿಭಜನೆಯತ್ತ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.

ಭಾರತದ ಎಡ್​​ಟೆಕ್ ಸ್ಟಾರ್ಟ್ಅಪ್​ಗಳ ಬೈಜು (BYJU) ನಂತಹ ಯುನಿಕಾರ್ನ್​​ಗಳು ಮತ್ತು ಇತರ ಎಡ್​ಟೆಕ್ ಸ್ಟಾರ್ಟ್ಅಪ್​ಗಳಾದ ಯುಎನ್​​ಅಕಾಡೆಮಿ (Unacademy), ಅಪ್​ಗ್ರಾಡ್​ (UpGrad), ಟಾಪರ್​ (Toppr), ನೆಕ್ಸ್​ಟ್ಎಜ್ಯುಕೇಷನ್​ (NextEducation), ಡೋಂಟ್​​ ಮೆಮೊರೈಸ್​ (Dont Memorize) ಇತರ ಆ್ಯಪ್​ಗಳು ಸೇರಿವೆ.

ಸ್ಟಾರ್ಟ್ಅಪ್ ಬ್ಯಾಂಡ್​ಗೆ ಸೇರುವ ಮುನ್ನ ಯೂಟ್ಯೂಬ್ ಇಂಡಿಯಾ ಮುಖ್ಯಸ್ಥರಾಗಿದ್ದ ಆಕಿಪಾಕಿ ಸಂಸ್ಥಾಪಕ ಅಗರ​ವಾಲ್, ಮಧ್ಯಮ ವರ್ಗದ ಸಂಬಳ ಪಡೆಯುವ ಪೋಷಕರಿಗೆ, ಅದರಲ್ಲೂ ವಿಶೇಷವಾಗಿ ಸಣ್ಣ ಪಟ್ಟಣ ​​ಮತ್ತು ನಗರಗಳಲ್ಲಿ ಇಂತಹವುಗಳು ಸಮಸ್ಯೆಯಾಗಿ ಉಳಿದಿವೆ ಎನ್ನುತ್ತಾರೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಪ್ಯಾರಾ ಶಿಕ್ಷಣಕ್ಕಾಗಿ ಖರ್ಚು ಮಾಡಿದ ಹಣ ಸೇರಿಸುವ ಮೂಲಕ ಪೋಷಕರು ಪಾವತಿಸುವ ಬೋಧನಾ ಶುಲ್ಕದ ಮೇಲೆ ಸರ್ಕಾರವು ಇನ್ನೂ ಕೆಲವು ಪ್ರಯೋಜನಗಳನ್ನು ಅನುಮತಿಸಿದರೆ ಅದು ದೊಡ್ಡ ಪ್ರಗತಿಗೆ ದಾರಿಯಾಗಲಿದೆ ಎಂಬುದು ಅಮಿತ್ ಅಭಿಮತ.

ಸೆಕ್ಷನ್ 80ಸಿ ಅಡಿಯಲ್ಲಿ ಪೋಷಕರು ಅಥವಾ ಸ್ಪಾನ್ಸರ್​​ಗಳು ಶಾಲೆ, ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಬೋಧನಾ ಶುಲ್ಕವಾಗಿ ಖರ್ಚು ಮಾಡಿದ ಹಣದ ಮೇಲೆ ಹಣಕಾಸು ವರ್ಷದ ಆದಾಯದಿಂದ 1.5 ಲಕ್ಷ ರೂ. ಕಡಿತ ಪಡೆಯಲು ಅನುಮತಿಸಲಾಗಿದೆ. ಆದರೆ, ಈ ಪರಿಹಾರವು ಅಭಿವೃದ್ಧಿ ಶುಲ್ಕ, ಸಾರಿಗೆ ಶುಲ್ಕ ಅಥವಾ ಎಡ್​​ಟೆಕ್ ಕಂಪನಿಗಳಿಗೆ ಪಾವತಿಸುವ ಶುಲ್ಕ ಸಂಬಂಧಿತ ವೆಚ್ಚಗಳು ಒಳಗೊಂಡಿಲ್ಲ.

ಹಣಕಾಸು ಸಚಿವರು ಈ ವಿಷಯವನ್ನು ಬಜೆಟ್​​ನಲ್ಲಿ ಪರಿಗಣಿಸಬೇಕು. ಇಂತಹ ಖರ್ಚನ್ನು ಶೇ 100ರಷ್ಟು ಕಡಿತಗೊಳಿಸಲು ಇದಕ್ಕೆ ಅವಕಾಶ ನೀಡಬೇಕು ಎಂದು ಈಟಿವಿ ಭಾರತ ಮೂಲಕ ಮನವಿ ಮಾಡಿದರು.

ಸ್ಟಾರ್ಟ್ಅಪ್‌ಗಳ ನಿಯಮಗಳ ಹೊರೆ ತಗ್ಗಿಸಿ

ಪ್ರಧಾನಿ ಮೋದಿಯ ನೆಚ್ಚಿನ ಸ್ಟಾರ್ಟ್​ಅಪ್​ ವಲಯಕ್ಕೆ ಈ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್​ ಅವರು ಉತ್ತಮ ಉಪಕ್ರಮಗಳು ಘೋಷಿಸುವ ನಿರೀಕ್ಷೆಯಿದೆ. ಸರ್ಕಾರದಿಂದ ಮಾನ್ಯತೆ ಪಡೆದ ಸ್ಟಾರ್ಟ್​ಅಪ್​ಗಳ ಹೊರತಾಗಿ ಐಟಿ ರಿಟರ್ನ್ಸ್, ಎಂಸಿಎ ರಿಟರ್ನ್ಸ್ ಸಲ್ಲಿಸುವಾಗ ಇತರ ಕಂಪನಿಗಳು ಪಾಲಿಸುವಂತ ಅನುಸರಣೆಗಳೆಲ್ಲವನ್ನೂ ನಾವೂ ಪೂರೈಸಬೇಕಾಗಿದೆ. ಈ ಅನುಸರಣೆ ವೆಚ್ಚವು ವರ್ಷಕ್ಕೆ 50,000 ರಿಂದ 1 ಲಕ್ಷ ರೂ. ತೆಗೆದುಕೊಳ್ಳುತ್ತದೆ. ಇದು ನಮ್ಮ ಹಣದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಬಿಹಾರ್ ಮೂಲದ ತರಕಾರಿ ಶೇಖರಣೆ ಮಾರಾಟದ ಸಪ್ತಕೃಷಿ (SaptKrishi) ನವೋದ್ಯಮ ಸ್ಥಾಪಕ ನಿಕ್ಕಿ ಕುಮಾರ್​ ಝಾ.

ನಾವು ಹೊಸ ಹಂತದಲ್ಲಿದ್ದೇವೆ, ನಾವು ಬೂಟ್​ಸ್ಟ್ರಾಪ್ ಆಗಿದ್ದೇವೆ (ಹೊರಗಿನ ಬಂಡವಾಳದ ನೆರವಿಲ್ಲದೆ). ಈ ರೀತಿಯ ಅನುಸರಣೆ ಹೊರೆಯನ್ನು ನಾವು ಭರಿಸಲಾಗುವುದಿಲ್ಲ. ಈ ಸಮಸ್ಯೆಯನ್ನು ಹೋಗಲಾಡಿಸಬೇಕು ಎಂದು ಈಟಿವಿ ಭಾರತಗೆ ತಿಳಿಸಿದರು.

ಇದನ್ನೂ ಓದಿ: ಬೆಟ್ಟದಷ್ಟು ನಿರೀಕ್ಷೆಯ ನಿರ್ಮಲಾ ಬಜೆಟ್:​ 'ಮಾಡು ಇಲ್ಲವೇ ಮಡಿ ಬಜೆಟ್​'ಗೆ ಇಂಡಿಯಾ ರೇಟಿಂಗ್ಸ್​ ಟಿಪ್ಸ್​ಗಳಿವು!

ಒನ್ ಪರ್ಸನ್ ಕಂಪನಿಯಂತೆ (ಒಪಿಸಿ) ಸರ್ಕಾರವು ಹೊಸ ವರ್ಗದ ಕಂಪನಿಗಳನ್ನು ಬಜೆಟ್​​ನಲ್ಲಿ ಸ್ಟಾರ್ಟ್ಅಪ್ ಕಂಪನಿಯಾಗಿ ಘೋಷಿಸಬೇಕು ಎಂದರು.

ಈಟಿವಿ ಭಾರತ ಈ ಹಿಂದೆ ಈ ಬಗ್ಗೆ ವರದಿ ಮಾಡಿದಂತೆ, 'ಈ ತಿಂಗಳ ಆರಂಭದಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಕಾನೂನು ಸಮಿತಿಯು ಶುಲ್ಕ, ದಂಡ ಮತ್ತು ಇತರ ಅನುಸರಣೆ ಅಗತ್ಯಗಳನ್ನು ತಗ್ಗಿಸಲು 2008ರ ಎಲ್‌ಎಲ್‌ಪಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಹೊಸ ವರ್ಗದ ಎಲ್‌ಎಲ್‌ಪಿ ರಚಿಸಲು ಶಿಫಾರಸು ಮಾಡಿತು.

ಪೇಟೆಂಟ್ ನೋಂದಣಿಗಾಗಿ ಪೇಟೆಂಟ್ ವಕೀಲರಿಗೆ ಸ್ಟಾರ್ಟ್‌ಅಪ್ ಪಾವತಿಸಿದ ಶುಲ್ಕವನ್ನು ಸರ್ಕಾರ ಸಬ್ಸಿಡಿ ನೀಡಿದರೂ ಆತ ಅದನ್ನು ಸರ್ಕಾರದಿಂದ ಪಡೆದ ನಂತರವೇ ಮರುಪಾವತಿ ಮಾಡುತ್ತಾರೆ. ನಾನು ಹಣವನ್ನು ಮುಂಗಡವಾಗಿ ಪಾವತಿಸಬೇಕಾಗಿರುವುದರಿಂದ ಇದು ನನ್ನ ಹಣದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ನನ್ನ ಭವಿಷ್ಯದ ಖರ್ಚುಗಳನ್ನು ಈ ಆಧಾರದ ಮೇಲೆ ಯೋಜಿಸಲು ಸಾಧ್ಯವಿಲ್ಲ. ಅದು ನನಗೆ ಯಾವಾಗ ಮರುಪಾವತಿ ಆಗುತ್ತದೆ ಎಂಬುದೂ ನನಗೆ ತಿಳಿದಿಲ್ಲ ಎಂದು ಈ ನೀತಿ ಬಗ್ಗೆ ಅಸಮಾಧಾನ ಹೊರಹಾಕಿದರು.

ಸ್ಟಾರ್ಟ್ಅಪ್‌ಗಳ ಅನುಸರಣೆಯ ವೆಚ್ಚ ಕಡಿಮೆ ಮಾಡಲು ಚಾರ್ಟರ್ಡ್ ಅಕೌಂಟೆಂಟ್‌ಗೆ ಸ್ಟಾರ್ಟ್ಅಪ್ ಪಾವತಿಸುವ ಲೆಕ್ಕಪರಿಶೋಧಕ ಶುಲ್ಕವನ್ನು ಸಹ ಸರ್ಕಾರವು ಸಬ್ಸಿಡಿ ಮಾಡಬೇಕು ಎಂದು ನಿಕ್ಕಿ ಝಾ ಮನವಿ.

ಸರ್ಕಾರದಿಂದ ಅನುಮೋದಿತ ಪೇಟೆಂಟ್ ವಕೀಲರಿಗೆ ಸರ್ಕಾರವು ಶುಲ್ಕದ ಶೇ 90ರಷ್ಟು ವೆಚ್ಚವನ್ನು ಭರಿಸುತ್ತದೆ. ಅದೇ ರೀತಿ, ಚಾರ್ಟರ್ಡ್ ಅಕೌಂಟೆಂಟ್‌ಗೆ ಪಾವತಿಸಬೇಕಾದ ಆಡಿಟ್ ಶುಲ್ಕದ ಒಂದು ಭಾಗವನ್ನು ಅವರು ಸಬ್ಸಿಡಿ ಮಾಡಬೇಕು ಎಂದು ಈಟಿವಿ ಭಾರತಗೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.