ನವದೆಹಲಿ : ಕೇಂದ್ರ ಬಜೆಟ್ ಮಂಡನೆ ಬಳಿಕ ನಡೆದ ಮೊದಲ ಸಭೆಯಲ್ಲಿ ರಿಸರ್ವ್ ಬ್ಯಾಂಕ್ನ ಕೇಂದ್ರ ಮಂಡಳಿಗೆ ಸರ್ಕಾರದ ಆದ್ಯತೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.
ಸಂಪ್ರದಾಯದ ಪ್ರಕಾರ, ಹಣಕಾಸು ಸಚಿವರು ಪ್ರತಿ ವರ್ಷ ಬಜೆಟ್ ಬಳಿಕ ಆರ್‌ಬಿಐ ಮತ್ತು ಸೆಕ್ಯುರಿಟೀಸ್ ಅಂಡ್ ಎಕ್ಸೆಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮಂಡಳಿಯ ಸದಸ್ಯರೊಂದಿಗೆ ಸಭೆ ನಡೆಸುತ್ತಾರೆ.
ಹಣಕಾಸು ಸಚಿವರು 587ನೇ ಆರ್‌ಬಿಐ ಕೇಂದ್ರ ಮಂಡಳಿ ಸಭೆ ಉದ್ದೇಶಿಸಿ ಮಾತನಾಡಿದರು, ಮಂಡಳಿ ಸದಸ್ಯರಿಗೆ ಬಜೆಟ್‌ನ ಪ್ರಮುಖ ಉಪಕ್ರಮಗಳು ಮತ್ತು ಸರ್ಕಾರದ ಆದ್ಯತೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಬಜೆಟ್ ಕುರಿತು ಹಣಕಾಸು ಸಚಿವರನ್ನು ಅಭಿನಂದಿಸಿದ ಮಂಡಳಿಯ ಸದಸ್ಯರು, ಸರ್ಕಾರಕ್ಕೆ ವಿವಿಧ ಸಲಹೆಗಳನ್ನು ನೀಡಿರುವುದಾಗಿ ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಓದಿ : ಮಾ.2022ರ ಕೊನೆಯಲ್ಲಿ ಭಾರತದ ಆರ್ಥಿಕತೆ ಚೇತರಿಕೆ ಕಾಣುತ್ತೆ : ಎಸ್&ಪಿ ಗ್ಲೋಬಲ್ ರೇಟಿಂಗ್ಸ್ ವರದಿ
ಬಜೆಟ್ ಬಳಿಕದ ಮೊದಲ ಸಭೆಯಲ್ಲಿ ಕೇಂದ್ರ ನಿರ್ದೇಶಕರ ಮಂಡಳಿಯು ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಜಾಗತಿಕ ಮತ್ತು ದೇಶೀಯ ಸವಾಲುಗಳು ಮತ್ತು ರಿಸರ್ವ್ ಬ್ಯಾಂಕ್ನ ಕಾರ್ಯಾಚರಣೆ ವಿವಿಧ ಕ್ಷೇತ್ರಗಳನ್ನು ಪರಿಶೀಲಿಸಿದೆ. ಇದರಲ್ಲಿ ಬ್ಯಾಂಕ್ಗಳ ಕುಂದು ಕೊರತೆ ಪರಿಹಾರ ಕಾರ್ಯವಿಧಾನವನ್ನು ಬಲಪಡಿಸುವ ಮಾರ್ಗಗಳಿವೆ ಎಂದು ಆರ್‌ಬಿಐ ಹೇಳಿದೆ.
ಮಂಗಳವಾರ ನಡೆದ ಸಭೆಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಧ್ಯಕ್ಷತೆ ವಹಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು. ಮಂಡಳಿಯಲ್ಲಿ ಸರ್ಕಾರದ ನಾಮ ನಿರ್ದೇಶಿತ ನಿರ್ದೇಶಕರಾದ ಹಣಕಾಸು ಸೇವೆಗಳ ಕಾರ್ಯದರ್ಶಿ ದೆಬಾಶಿಶ್ ಪಾಂಡ ಮತ್ತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಸಭೆಯಲ್ಲಿ ಭಾಗವಹಿಸಿದ್ದರು.