ETV Bharat / business

ಕಾಗದದಲ್ಲಿ ಮಾತ್ರವೇ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡಿದೆ : ಸುಪ್ರೀಂ ಕಿಡಿ

author img

By

Published : May 24, 2021, 4:21 PM IST

ವಲಸೆ ಕಾರ್ಮಿಕರು ಕೇವಲ ನಿರ್ಮಾಣ ಕಾರ್ಮಿಕರಲ್ಲ. ಆದರೆ, ರಿಕ್ಷಾ ಎಳೆಯುವವರು, ಸಣ್ಣ ಮಾರಾಟಗಾರರು ಮತ್ತು ಬೀದಿ ವ್ಯಾಪಾರಿಗಳು, ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಬಾಧಿತರಾಗಿದ್ದಾರೆ ಎಂದು ವಕೀಲ ಪ್ರಶಾಂತ್ ಭೂಷಣ್ ಗಮನ ಸೆಳೆದರು. ಅವರಿಗೆ ಸಹಾಯ ಮಾಡಲು ನಗದು ವರ್ಗಾವಣೆ ಅತ್ಯಗತ್ಯ ಎಂದು ಭೂಷಣ್ ಸಲ್ಲಿಸಿದರು..

migrant workers
migrant workers

ನವದೆಹಲಿ : ವಲಸೆ ಕಾರ್ಮಿಕರಿಗೆ ಸಿಗಬೇಕಾದ ಪ್ರಯೋಜನಗಳು ಹಾಗೂ ಅವರ ನೋಂದಣಿ ಪ್ರಕ್ರಿಯೆಯು ಶೋಚನೀಯ ಸ್ಥಿತಿಯಲ್ಲಿ ನಿಧಾನವಾಗಿದೆ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರ ನೋಂದಣಿಯನ್ನು ತ್ವರಿತಗೊಳಿಸಬೇಕು. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವವರನ್ನೂ ಕೂಡ ಸೇರ್ಪಡೆ ಮಾಡಬೇಕು ಎಂದು ಉನ್ನತ ನ್ಯಾಯಾಲಯ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ ಆರ್ ಶಾ ಅವರಿದ್ದ ನ್ಯಾಯಪೀಠವು ಕೇಂದ್ರದ ಸಲಹೆಗಾರರಿಗೆ ಸೂಚಿಸಿದೆ.

ನಮ್ಮ ಮುಖ್ಯ ಕಾಳಜಿ ಏನೆಂದರೆ ವಲಸೆ ಕಾರ್ಮಿಕರಿಗೆ ಆಗುವ ಪ್ರಯೋಜನಗಳು ಅವರಿಗೆ ತಲುಪಬೇಕು. ನಿಮ್ಮ (ಕೇಂದ್ರ) ಅಫಿಡವಿಟ್‌ನ ನಾವು ಸೂಕ್ಷ್ಮವಾಗಿ ಗಮನಿಸಿದ್ದೇವೆ.

ಆದರೆ, ವಲಸೆ ಕಾರ್ಮಿಕರ ನೋಂದಣಿಯ ಬಗ್ಗೆ ಏನೂ ಇಲ್ಲ. ಪಡಿತರ ಚೀಟಿ ಇಲ್ಲದ ಕಾರ್ಮಿಕರಿಗೆ ಸರ್ಕಾರ ಒಣ ಪಡಿತರವನ್ನು ಹೇಗೆ ನೀಡುತ್ತದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಅಸಂಘಟಿತ ವಲಯದ ಕಾರ್ಮಿಕರ ಬಗ್ಗೆ ರಾಷ್ಟ್ರೀಯ ಮಾಹಿತಿ ಏಕೆ ಇಲ್ಲ? ಲಾಕ್​ಡೌನ್ ಸಮಯದಲ್ಲಿ ಪ್ರಯೋಜನಗಳು ಅಗತ್ಯವಿರುವವರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಡೇಟಾ ಮತ್ತು ಪೋರ್ಟಲ್ ಅತ್ಯಗತ್ಯ ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ವಲಸೆ ಕಾರ್ಮಿಕರನ್ನು ಗುರುತಿಸುವುದು ಮತ್ತು ನೋಂದಣಿ ಮಾಡುವುದು ಅತ್ಯಗತ್ಯ ಎಂಬ ಉನ್ನತ ನ್ಯಾಯಾಲಯದ ಸಲಹೆಯನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಒಪ್ಪಿಕೊಂಡಿದ್ದಾರೆ.

ಇದು ಇತರ ಪ್ರಯೋಜನಗಳ ಜೊತೆಗೆ ನೇರವಾಗಿ ಅವರ ಖಾತೆಗಳಲ್ಲಿ ಹಣವನ್ನು ವರ್ಗಾಯಿಸಲು ಸಹಾಯ ಮಾಡುತ್ತದೆ. ಸರ್ಕಾರದ ಯೋಜನೆಗಳು ಫಲಾನುಭವಿಗಳನ್ನು ತಲುಪುತ್ತಿರುವುದನ್ನು ಮೇಲ್ವಿಚಾರಣೆ ಮಾಡುವ ಕೇಂದ್ರವನ್ನು ಉನ್ನತ ನ್ಯಾಯಾಲಯವು ಪ್ರಶ್ನಿಸಿದೆ.

ಈ ಪ್ರಯೋಜನಗಳು ಅಗತ್ಯವಿರುವವರಿಗೆ ತಲುಪುತ್ತಿವೆ. ಮೇಲ್ವಿಚಾರಣೆ ನೋಡಬೇಕು. ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲು ಸೂಚಿಸಲಾಗಿದೆ.

ಕಾಗದದ ಮೇಲೆ ಸರ್ಕಾರವು ಸಾವಿರಾರು ಕೋಟಿಗಳನ್ನು ಖರ್ಚು ಮಾಡಿದೆ. ಆದರೆ, ಇದು ಅಗತ್ಯವಿರುವ ವ್ಯಕ್ತಿಗಳನ್ನು ತಲುಪುತ್ತದೆಯೇ ಎಂಬ ಆತಂಕವಿದೆ ಎಂದು ನ್ಯಾಯಮೂರ್ತಿ ಶಾ ಹೇಳಿದರು.

ನೋಂದಣಿಗೆ ಸರ್ಕಾರ ವಲಸೆ ಕಾರ್ಮಿಕರನ್ನು ಸಂಪರ್ಕಿಸಬೇಕು. ಸರ್ಕಾರಗಳು ವಲಸೆ ಕಾರ್ಮಿಕರಿಗೆ ಸಾಂಕ್ರಾಮಿಕದ ನಡುವೆ ಉದ್ಯೋಗ ಕಳೆದುಕೊಂಡವರಿಗೆ, ಅವರು ನೋಂದಾಯಿಸಿಕೊಂಡರೆ ಮಾತ್ರ ಪ್ರಯೋಜನಗಳನ್ನು ನೀಡಬಹುದು ಎಂದು ನ್ಯಾಯಪೀಠ ತಿಳಿಸಿದೆ.

ಇದು ಕಷ್ಟದ ಕೆಲಸ. ಆದರೆ, ಸಾಧಿಸಬೇಕಾಗಿದೆ. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವವರ ಜೊತೆಗೆ ವಲಸೆ ಕಾರ್ಮಿಕರ ನೋಂದಣಿಯನ್ನು ಕೇಂದ್ರ ಮತ್ತು ರಾಜ್ಯಗಳು ತ್ವರಿತಗೊಳಿಸಬೇಕು ಎಂದು ತಾಕೀತು ಮಾಡಿದೆ.

ವಲಸೆ ಕಾರ್ಮಿಕರು ಕೇವಲ ನಿರ್ಮಾಣ ಕಾರ್ಮಿಕರಲ್ಲ. ಆದರೆ, ರಿಕ್ಷಾ ಎಳೆಯುವವರು, ಸಣ್ಣ ಮಾರಾಟಗಾರರು ಮತ್ತು ಬೀದಿ ವ್ಯಾಪಾರಿಗಳು, ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಬಾಧಿತರಾಗಿದ್ದಾರೆ ಎಂದು ವಕೀಲ ಪ್ರಶಾಂತ್ ಭೂಷಣ್ ಗಮನ ಸೆಳೆದರು. ಅವರಿಗೆ ಸಹಾಯ ಮಾಡಲು ನಗದು ವರ್ಗಾವಣೆ ಅತ್ಯಗತ್ಯ ಎಂದು ಭೂಷಣ್ ಸಲ್ಲಿಸಿದರು.

ವಲಸೆ ಕಾರ್ಮಿಕರನ್ನು ನೋಂದಾಯಿಸುವ ಪ್ರಕ್ರಿಯೆಯು ತುಂಬಾ ನಿಧಾನವಾಗಿದೆ ಎಂದು ನ್ಯಾಯಪೀಠ ಭೂಷಣ್ ಅವರೊಂದಿಗೆ ಒಪ್ಪಿಕೊಂಡಿತು.

ನ್ಯಾಯಮೂರ್ತಿ ಭೂಷಣ್ ಅವರು ಎಲ್ಲಾ ಅಸಂಘಟಿತ ಕಾರ್ಮಿಕರ ನೋಂದಣಿಗೆ ಒತ್ತು ನೀಡಿದ್ದು, ಇದರಿಂದ ಅವರು ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು. ಆದರೆ, ನೀತಿ ನಿರ್ಧಾರವಾದ ನಗದು ವರ್ಗಾವಣೆಗೆ ಆದೇಶ ನೀಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.