ETV Bharat / business

'ಒಂದು ದೇಶ, ಒಂದು ಪಡಿತರ ಚೀಟಿ' ಜಾರಿ: ಕೇಂದ್ರಕ್ಕೆ ಸುಪ್ರೀಂ ತಾಕೀತು - ಒಂದು ರಾಷ್ಟ್ರ ಒಂದು ಪಡಿತರ ಚೀಟಿ

ಲಾಕ್​ಡೌನ್ ವೇಳೆಯಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಚೀಟಿಯಂತಹ ಯೋಜನೆ ಜಾರಿಗೆ ತರುವುದಕ್ಕೆ ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸಿ. ಸದ್ಯದ ಸಂದರ್ಭಗಳನ್ನು ಗಮನದಲ್ಲಿ ಇಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ನಾವು ಭಾರತದ ಒಕ್ಕೂಟವನ್ನು ನಿರ್ದೇಶಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಸಂಜಯ್ ಕಿಶನ್ ಕೌಲ್ ಮತ್ತು ಬಿ. ಆರ್. ಗವಾಯಿ ಅವರಿದ್ದ ನ್ಯಾಯಪೀಠ ಆದೇಶಿಸಿದೆ.

one nation, one ration card'
ಒಂದು ರಾಷ್ಟ್ರ ಒಂದು ಪಡಿತರ ಚೀಟಿ
author img

By

Published : Apr 28, 2020, 4:30 PM IST

ನವದೆಹಲಿ: ಕೊರೊನಾ ವೈರಸ್​ ಲಾಕ್​ಡೌನ್ ವೇಳೆ ವಲಸಿಗ ಕಾರ್ಮಿಕರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಎಡಬ್ಲ್ಯೂಎಸ್​) ಸಬ್ಸಿಡಿಯುಕ್ತ ಆಹಾರಧಾನ್ಯ ಸಿಗುವಂತೆ ಮಾಡಲು ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆಯನ್ನು ತಾತ್ಕಾಲಿಕವಾಗಿ ಅಳವಡಿಸಿಕೊಳ್ಳುವ ಸಾಧ್ಯಾ ಸಾಧ್ಯತೆಗಳನ್ನು ಪರಿಗಣಿಸುವಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದೆ.

ಕೇಂದ್ರ ಸರ್ಕಾರವನ್ನು ತನ್ನ ಈ ಯೋಜನೆಯನ್ನು ಈ ವರ್ಷದ ಜೂನ್ ತಿಂಗಳಿಂದ ಆರಂಭಿಸಲಿದೆ.

ಈ ಹಂತದಲ್ಲಿ ಸದರಿ ಯೋಜನೆ ಜಾರಿಗೆ ತರುವುದಕ್ಕೆ ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸಿ. ಸದ್ಯದ ಸಂದರ್ಭಗಳನ್ನು ಗಮನದಲ್ಲಿ ಇಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ನಾವು ಭಾರತದ ಒಕ್ಕೂಟವನ್ನು ನಿರ್ದೇಶಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಸಂಜಯ್ ಕಿಶನ್ ಕೌಲ್ ಮತ್ತು ಬಿ. ಆರ್. ಗವಾಯಿ ಅವರಿದ್ದ ನ್ಯಾಯಪೀಠ ಆದೇಶಿಸಿದೆ.

ದೇಶದ್ಯಾಂತ ಲಾಕ್​ಡೌನ್​ನಿಂದಾಗಿ ವಲಸೆ ಕಾರ್ಮಿಕರು, ಫಲಾನುಭವಿಗಳು ಮತ್ತು ಇತರ ರಾಜ್ಯಗಳ ನಾಗರಿಕರು ವಿವಿಧ ಸ್ಥಳಗಳಲ್ಲಿ ಶೆಡ್ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಯೋಜನೆಯ ಅನುಷ್ಠಾನ ಕೋರಿ ಅಡ್ವೊಕೇಟ್ ರೆಪಾಕ್ ಕಂನಲ್ ಸಲ್ಲಿಸಿದ ಮನವಿಗೆ ಉನ್ನತ ನ್ಯಾಯಾಲಯ ವಿಲೇವಾರಿ ಮಾಡಿದೆ.

ಪ್ರಸ್ತುತ ಬಾಡಿಗೆ ಪ್ರದೇಶ, ನಿರಾಶ್ರಿತ ಶಿಬಿರಗಳಲ್ಲಿ ಉಳಿದುಕೊಂಡಿರುವ ವಲಸೆ ಕಾರ್ಮಿಕರು ಸ್ಥಳೀಯ ಗುರುತಿನ ಚೀಟಿ ಅಥವಾ ಯಾವುದೇ ಗುರುತಿನ ಚೀಟಿಗಳನ್ನು ಕೇಳ ಬಾರದು. ಈ ಬಗ್ಗೆ ಖಾತ್ರಿಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಹ ಕೋರಿದ್ದಾರೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ನಾಗರಿಕರಿಗೆ ಆದ್ಯತೆ ನೀಡುತ್ತಿವೆ. ದೇಶವ್ಯಾಪಿ ಲಾಕ್​ಡೌನ್ ವೇಳೆಯಲ್ಲಿ ರೇಷನ್ ಕಾರ್ಡ್/ವಸತಿ ಪುರಾವೆ ಅಥವಾ ವೋಟರ್ ಕಾರ್ಡ್​ನಂತಹ ಸ್ಥಳೀಯ ಗುರುತಿನ ರುಜುವಾತು ಇಲ್ಲದಿರುವ ಕಾರಣದಿಂದಾಗಿ ಇತರ ರಾಜ್ಯಗಳು/ಯುಟಿಎಸ್​ನ ವಲಸಿಗ ಕಾರ್ಮಿಕರು ಅಥವಾ ನಾಗರಿಕರಿಗೆ ಸಬ್ಸಿಡಿ ಧಾನ್ಯ/ಆಹಾರ/ಶೆಲ್ಟೆರ್/ವೈದ್ಯಕೀಯ ಸೌಲಭ್ಯಗಳ ಪ್ರಯೋಜನಗಳನ್ನು ನಿರಾಕರಿಸುತ್ತಿವೆ ಎಂದು ಕಂಸಲ್ ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.