ETV Bharat / business

ಏಪ್ರಿಲ್ 1ಕ್ಕೂ ಮೊದಲು ಖರೀದಿಸಿದ ಬಿಎಸ್-IV ಡೀಸೆಲ್ ವಾಹನಗಳ ನೋಂದಣಿಗೆ ಸುಪ್ರೀಂಕೋರ್ಟ್​ ಅಸ್ತು

ಅಗತ್ಯ ಸಾರ್ವಜನಿಕ ಉಪಯುಕ್ತತೆ ಸೇವೆಗಳಿಗೆ ಬಳಸಲು ಏಪ್ರಿಲ್ 1ರ ಮೊದಲು ಖರೀದಿಸಿದ ಡೀಸೆಲ್ ವಾಹನಗಳನ್ನು ಬಿಎಸ್-IV ಮಾನದಂಡಗಳ ಪ್ರಕಾರ ನೋಂದಣಿ ಮಾಡಲಾಗುವುದು. ಏಪ್ರಿಲ್ 1ರ ಬಳಿಕ ಖರೀದಿಸಿದ ಬಿಎಸ್-VI ಮಾದರಿ ವಾಹನಗಳನ್ನು ಬಿಎಸ್​​-VI ನಿಬಂಧನೆಯಡಿ ನೋಂದಣಿಗೆ ಅವಕಾಶ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಆದೇಶಿಸಿದೆ.

author img

By

Published : Sep 18, 2020, 4:48 PM IST

BS-IV diesel vehicle
ಬಿಎಸ್-IV ಡೀಸೆಲ್ ವಾಹನ

ನವದೆಹಲಿ: ಏಪ್ರಿಲ್ 1ಕ್ಕೂ ಮೊದಲು ಖರೀದಿಸಿದ ಬಿಎಸ್-IV ಡೀಸೆಲ್ ವಾಹನಗಳು ನೋಂದಾಯಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ಇವುಗಳನ್ನು ಮಹಾನಗರ ಪಾಲಿಕೆಗಳು ಮತ್ತು ದೆಹಲಿ ಪೊಲೀಸರು ಅಗತ್ಯ ಸಾರ್ವಜನಿಕ ಸೇವೆಗಳಿಗೆ ಬಳಸಲಿದ್ದಾರೆ.

ಅಗತ್ಯ ಸಾರ್ವಜನಿಕ ಉಪಯುಕ್ತತೆ ಸೇವೆಗಳಿಗೆ ಬಳಸಲು ಏಪ್ರಿಲ್ 1ರ ಮೊದಲು ಖರೀದಿಸಿದ ಡೀಸೆಲ್ ವಾಹನಗಳನ್ನು ಬಿಎಸ್-IV ಮಾನದಂಡಗಳ ಪ್ರಕಾರ ನೋಂದಣಿ ಮಾಡಲಾಗುವುದು. ಏಪ್ರಿಲ್ 1ರ ಬಳಿಕ ಖರೀದಿಸಿದ ಬಿಎಸ್-VI ಮಾದರಿ ವಾಹನಗಳನ್ನು ಬಿಎಸ್​​-VI ನಿಬಂಧನೆಯಡಿ ನೋಂದಣಿಗೆ ಅವಕಾಶ ನೀಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಆದೇಶಿಸಿದೆ.

ಎಲ್ಲಾ ನಿಯಮ ಮತ್ತು ನಿಬಂಧನೆಗಳ ಅನುಸರಣೆಗೆ ಒಳಪಟ್ಟು ಸಿಎನ್‌ಜಿ ವಾಹನಗಳ ನೋಂದಣಿಗೆ ನ್ಯಾಯಪೀಠ ಅನುಮತಿ ನೀಡಿತು. ಸಿಎನ್‌ಜಿ ವಾಹನಗಳು, ಬಿಎಸ್-IV ಮತ್ತು ಬಿಎಸ್-VI ವಾಹನಗಳು ಎಂಬ ಮೂರು ರೀತಿಯ ವಾಹನಗಳ ನೋಂದಣಿಗಾಗಿ ನ್ಯಾಯಪೀಠದ ಮುಂದೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಏಪ್ರಿಲ್ 1ರ ಮೊದಲು ಮುನ್ಸಿಪಲ್ ಕಾರ್ಪೊರೇಷನ್‌ಗಳು ಖರೀದಿಸಿದ ಮತ್ತು ಕಸ ಎತ್ತುವಂತಹ ಅಗತ್ಯ ಸೇವೆಗಳಿಂದ ಬಳಸಲಾಗುವ ಬಿಎಸ್-IV ಡೀಸೆಲ್ ವಾಹನಗಳನ್ನು ಬಿಎಸ್-IV ಮಾನದಂಡಗಳ ಪ್ರಕಾರ ನೋಂದಾಯಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ.

ಇದಕ್ಕೂ ಮೊದಲು ಮಾರ್ಚ್‌ನಲ್ಲಿ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ) ಬಿಎಸ್-IV ವಾಹನಗಳ ಮಾರಾಟ ಮತ್ತು ನೋಂದಣಿ ಒಂದು ತಿಂಗಳವರೆಗೆ ವಿಸ್ತರಿಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು.

ಕೋವಿಡ್​ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ವಿಧಿಸಲಾದ ಲಾಕ್‌ಡೌನ್ ಕಾರಣದಿಂದಾಗಿ ಸಾಕಷ್ಟು ಮಾರಾಟದ ನಷ್ಟವಾಗಿದೆ. ಬಿಎಸ್-IV ವಾಹನಗಳ ಮಾರಾಟಕ್ಕೆ ಮಾರ್ಚ್ 31ರ ಗಡುವನ್ನು ವಿಸ್ತರಿಸಲು ಕೋರಿತ್ತು. ಒಕ್ಕೂಟದ ಬೇಡಿಕೆಗೆ ಸ್ಪಂದಿಸಿದ ಸುಪ್ರೀಂಕೋರ್ಟ್​, ಅವಧಿ ವಿಸ್ತರಣೆಯನ್ನು ಮಾರ್ಚ್ 31ರ ವರೆಗೆ ನೀಡುತ್ತು. ಲಾಕ್‌ಡೌನ್ ಮುಗಿದ 10 ದಿನಗಳಲ್ಲಿ ಮಾರಾಟವಾಗದ ಶೇ.10ರಷ್ಟು ಬಿಎಸ್-IV ವಾಹನಗಳ ಮಾರಾಟಕ್ಕೆ ಅವಕಾಶ ಸಹ ಒದಗಿಸಿತ್ತು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.