ಮುಂಬೈ: ಖಾಸಗಿ ವಲಯದ ಸಣ್ಣ ಹಣಕಾಸು ಬ್ಯಾಂಕ್‌ಗಳಿಗೆ (ಎಸ್‌ಎಫ್‌ಬಿ) 'ಆನ್ ಟ್ಯಾಪ್' ಪರವಾನಗಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನೂತನ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇಂತಹ ಬ್ಯಾಂಕ್ ಸ್ಥಾಪಿಸಲು ಕನಿಷ್ಠ 200 ಕೋಟಿ ರೂ. ನಿವ್ವಳ ಮೌಲ್ಯ ಇರಿಸಬೇಕು ಎಂದಿದೆ.
ಸಣ್ಣ ಹಣಕಾಸು ಘಟಕಗಳು, ಕಿರು ಮತ್ತು ಸಣ್ಣ ರೈತರು, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಹಾಗೂ ಅಸಂಘಟಿತ ವಲಯದ ಘಟಕಗಳು ಸೇರಿದಂತೆ ಇತರ ಘಟಕಗಳಿಂದ ಠೇವಣಿಗಳನ್ನು ಸ್ವೀಕರಿಸುವ ಮತ್ತು ಸಾಲ ನೀಡುವಂತಹ ಹಣಕಾಸು ಚಟುವಟಿಕೆಗಳನ್ನು ಸಣ್ಣ ಹಣಕಾಸು ಬ್ಯಾಂಕ್ಗಳು ನಡೆಸುತ್ತವೆ.
ಪರವಾನಗಿ ಮೊತ್ತವು 'ಆನ್-ಟ್ಯಾಪ್' ಆಧಾರದ ಮೇಲೆ 200 ಕೋಟಿ ರೂ. ಕನಿಷ್ಠ ಇಕ್ವಿಟಿ ಕ್ಯಾಪಿಟಲ್ ಅಥವಾ ನಿವ್ವಳ ಮೌಲ್ಯ ಪಾವತಿಸಬೇಕು. ಪ್ರಾಥಮಿಕ (ನಗರ) ಸಹಕಾರಿ ಬ್ಯಾಂಕ್‌ಗಳಿಗೆ (ಯುಸಿಬಿ), ಸಣ್ಣ ಹಣಕಾಸು ಬ್ಯಾಂಕ್‌ಗಳಿಗೆ (ಎಸ್‌ಎಫ್‌ಬಿ) ಸ್ವಯಂಪ್ರೇರಣೆಯಿಂದ ಹಣಕಾಸು ಚಟುವಟಿಕೆ ನಡೆಸುವ ಇಚ್ಛಿಸುವವರಿಗೆ ನಿವ್ವಳ ಮೌಲ್ಯದ ಆರಂಭಿಕ ಮೊತ್ತ 100 ಕೋಟಿ ರೂ. ಆಗಿತ್ತು. ಪರಿಷ್ಕೃತ ನೂತನ ನಿಯಮದಡಿ ವ್ಯವಹಾರ ಆರಂಭವಾದ ದಿನಾಂಕದಿಂದ ಮುಂದಿನ 5 ವರ್ಷಗಳವರೆಗೆ ಈ ಮೊತ್ತವು 200 ಕೋಟಿ ರೂ.ಗೆ ಏರಿಕೆ ಆಗಿದೆ ಎಂದು ಆರ್ಬಿಐ ತಿಳಿಸಿದೆ.