ನವದೆಹಲಿ: ವಿತ್ತೀಯ ನೀತಿ ಚೌಕಟ್ಟಿನಲ್ಲಿ ಏನಾದರೂ ಬದಲಾವಣೆ ತರಬೇಕಾದ ಅಗತ್ಯವಿದ್ದರೆ ಈ ಬಗ್ಗೆ ಸರ್ಕಾರದೊಂದಿಗೆ ಮಾತನಾಡಲಿದ್ದೇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.
ವಿತ್ತೀಯ ನೀತಿ ಚೌಕಟ್ಟು ಕಳೆದ ಮೂರು ವರ್ಷಗಳಿಂದ ಕಾರ್ಯರೂಪಕ್ಕೆ ಬಂದಿದೆ. ಎಂಪಿಸಿ ಚೌಕಟ್ಟು ಹೇಗೆ ಕಾರ್ಯನಿರ್ವಹಿಸಿದೆ ಎಂಬುದರ ಕುರಿತು ನಾವು ಅದನ್ನು ಆಂತರಿಕವಾಗಿ ಪರಿಶೀಲಿಸುತ್ತೇವೆ ಮತ್ತು ವಿಶ್ಲೇಷಿಸುತ್ತಿದ್ದೇವೆ. ಸೂಕ್ತ ಸಮಯದಲ್ಲಿ ಅಗತ್ಯವಿದ್ದರೆ ನಾವು ಸರ್ಕಾರದೊಂದಿಗೆ ಈ ಕುರಿತು ಮಾತನಾಡುತ್ತೇವೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಇದೇ ವೇಳೆಯಲ್ಲಿ, ಅದು (ಚೌಕಟ್ಟು) ಆರ್‌ಬಿಐನಲ್ಲಿ ಪರಿಶೀಲನೆ ಹಂತದಲ್ಲಿದೆ ಎಂದು ಸಹ ಹೇಳಿದರು.
ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಪ್ರಸ್ತುತ, ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಆರ್ಥಿಕತೆಯ ಬಗ್ಗೆ ಪರಾಮರ್ಶಿಸುತ್ತದೆ.