ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನೊಳಗೊಂಡ ಆರು ಸದಸ್ಯರ ಹಣಕಾಸು ಪರಾಮರ್ಶೆ ನೀತಿ ಸಮಿತಿಯ ಸಭೆಯಲ್ಲಿ ಸತತ ನಾಲ್ಕನೇ ಬಾರಿಗೆ ರೆಪೋ ದರವನ್ನು ಶೇ 5.40ಕ್ಕೆ ಇಳಿಕೆ ಮಾಡಲಾಗಿದೆ.
ಆರ್ಬಿಐ ಬ್ಯಾಂಕ್ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ ಕಡಿಮೆಗೊಳಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸತತ 4ನೇ ಬಾರಿಗೆ ಇಳಿಸಿದಂತಾಗಿದೆ. ಜೂನ್ ಮೊದಲ ವಾರದಲ್ಲಿ ರೆಪೋ ದರ ಶೇ 5.75 ಆಗಿತ್ತು.
ಸಮಿತಿಯಲ್ಲಿರುವ ನಾಲ್ವರು ಸದಸ್ಯರು ರೆಪೋ ದರವನ್ನು ಶೇ 0.35ರಷ್ಟು ಇಳಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಉಳಿದಿಬ್ಬರು ಶೇ 0.25ರಷ್ಟು ಕಡಿತಗೊಳಿಸಲು ಇಂಗಿತ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಶೇ 0.35ರಷ್ಟು ಬೇಸಿಸ್ ಪಾಯಿಂಟ್ಸ್ ಕಡಿತಗೊಳಿಸುವ ಮೂಲಕ ಶೇ 5.75ರಿಂದ ಶೇ 5.40ಕ್ಕೆ ಇಳಿಕೆ ಮಾಡಿದೆ.
ಆರ್ಬಿಐನ ಈ ಕ್ರಮದಿಂದಾಗಿ ಬ್ಯಾಂಕ್ಗಳಲ್ಲಿ ಪಡೆಯುವ ಗೃಹ ಸಾಲ, ವಾಹನಗಳ ಸಾಲದ ಬಡ್ಡಿದರ ಇಳಿಕೆಯಾಗುವ ನಿರೀಕ್ಷೆ ಇದೆ. ಜೊತೆಗ ಕಾರ್ಪೊರೇಟ್ ಸಾಲಗಾರರಿಗೂ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.