ಮುಂಬೈ: ಉತ್ತಮ ದ್ರವ್ಯತೆ ನಿರ್ವಹಣೆಗೆ ಅನುಕೂಲವಾಗುವ ಉದ್ದೇಶದಿಂದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೆ (ಆರ್‌ಆರ್‌ಬಿ) ದ್ರವ್ಯತೆ ಹೊಂದಾಣಿಕೆ ಸೌಲಭ್ಯ (ಎಲ್‌ಎಎಫ್), ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ (ಬ್ಯಾಂಕ್ಗಳು ಸಾಲ ಪಡೆಯಲು ಇರಬೇಕಾದ ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ: ಎಂಎಸ್‌ಎಫ್) ಮತ್ತು ಕಾಲ್ ಅಥವಾ ನೋಟಿಸ್ ಹಣದ ಮಾರುಕಟ್ಟೆ ಪ್ರವೇಶಿಸಲು ರಿಸರ್ವ್ ಬ್ಯಾಂಕ್ ಶುಕ್ರವಾರ ಅನುಮತಿ ನೀಡಿದೆ.
ಪ್ರಸ್ತುತ, ಆರ್‌ಬಿಐನ ನಿಯಮದಂತೆ ಮಾರುಕಟ್ಟೆ ಪ್ರವೇಶಿಸಲು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೆ ಅನುಮತಿ ಇಲ್ಲ.
ಫ್ಲಿಪ್ಕಾರ್ಟ್ನ 2ಗುಡ್ ಲೋಕಲ್ ಯೋಜನೆ ಶುರು: ಆಪ್ಲೈನ್ ಚಿಲ್ಲರೆ ವಸ್ತುಗಳು ಆನ್ಲೈನ್ನಲ್ಲೂ ಲಭ್ಯ!
ಹಣದ ಮಾರುಕಟ್ಟೆಯಲ್ಲಿ ಭಾಗವಹಿಸುವಿಕೆ ವಿಸ್ತರಿಸುವ ಉದ್ದೇಶದಿಂದ ಮತ್ತು ಉತ್ತಮ ದ್ರವ್ಯತೆ ನಿರ್ವಹಣೆಗೆ ಅನುಕೂಲವಾಗುವಂತೆ ಆರ್‌ಆರ್‌ಬಿಗಳಿಗೆ ಈಗ ಆರ್‌ಬಿಐನ ಎಲ್‌ಎಎಫ್ ಮತ್ತು ಎಂಎಸ್‌ಎಫ್ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಕಾಲ್ ಅಥವಾ ನೋಟಿಸ್ ಹಣದ ಮಾರುಕಟ್ಟೆ ಪ್ರವೇಶದ ಅವಕಾಶ ನೀಡಲಾಗುವುದು ಎಂದು ವಿತ್ತೀಯ ನೀತಿ ಘೋಷಿಸುವಾಗ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.