ETV Bharat / business

ಸತತ ನಾಲ್ಕನೇ ಬಾರಿಯೂ RBI ಬ್ಯಾಂಕ್​ ಬಡ್ಡಿದರ ಸ್ಥಿರ: ಕಾರಣವೇನು ಗೊತ್ತೇ?

ಹಣದುಬ್ಬರ ಮತ್ತೆ ನಿಯಂತ್ರಣಕ್ಕೆ ಬರುತ್ತಿದೆ. ಕೋವಿಡ್​ನಿಂದ​ ಭಾರತದ ಆರ್ಥಿಕತೆಯು ಬಿಕ್ಕಟ್ಟಿನಿಂದ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಸ್ಪಷ್ಟವಾದ ಲಕ್ಷಣಗಳಿವೆ. ಮೂಲಸೌಕರ್ಯ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಜೆಟ್ ದೊಡ್ಡ ಉತ್ತೇಜನ ನೀಡಿದೆ ಎಂದು ಆರ್​​ಬಿಐ ಗವರ್ನರ್ ಶಕ್ತಿಕಾಂತ್ ದಾಸ್​ ಹೇಳಿದರು.

RBI
RBI
author img

By

Published : Feb 5, 2021, 12:34 PM IST

ಮುಂಬೈ: ಆರ್‌ಬಿಐ ಮತ್ತೊಮ್ಮೆ ತನ್ನ ಪ್ರಮುಖ ಬಡ್ಡಿದರಗಳನ್ನು ಸತತ ನಾಲ್ಕನೇ ಬಾರಿಗೆ ಯಾವುದೇ ಬದಲಾವಣೆ ಮಾಡದೇ ಯಥಾವತ್ತಾಗಿ ಇರಿಸಿಕೊಂಡಿದೆ.

ಇದರೊಂದಿಗೆ ಈಗಿನ ಶೇ 4ರಷ್ಟು ರೆಪೋ ದರ ಹಾಗೂ ಶೇ 3.35ರಷ್ಟು ರಿವರ್ಸ್​ ರೆಪೋ ದರ ಮುಂದುವರಿಯಲಿ. ಬೆಳವಣಿಗೆಯ ದರಕ್ಕೆ ತಕ್ಕಂತೆ ಇರಿಸುವ ಉದ್ದೇಶದಿಂದ ಯಾವುದೇ ಬಡ್ಡಿದರಗಳನ್ನು ಬದಲಾವಣೆ ಮಾಡಿಲ್ಲ ಎಂದು ಆರ್​ಬಿಐ ಗರ್ವನರ್ ಶಕ್ತಿಕಾಂತ್ ದಾಸ್ ಹೇಳಿದರು.

ಆರ್‌ಬಿಐ 2021-22ರಲ್ಲಿ ಜಿಡಿಪಿ ಬೆಳವಣಿಗೆಯ ದರ ಶೇ 10.5ರಷ್ಟು ಹಾಗೂ ಹಣದುಬ್ಬರ ಮುನ್ಸೂಚನೆಯನ್ನು ಶೇ 5.8ರಿಂದ 5.2ಕ್ಕೆ ಪರಿಷ್ಕರಿಸಲಾಗಿದೆ ಎಂಬುದು ಮತ್ತೊಂದು ಗಮನಾರ್ಹ ಅಂಶ.

ಹಣದುಬ್ಬರ ಮತ್ತೆ ನಿಯಂತ್ರಣಕ್ಕೆ ಬರುತ್ತಿದೆ. ಕೋವಿಡ್​ನಿಂದ​ ಭಾರತದ ಆರ್ಥಿಕತೆಯು ಬಿಕ್ಕಟ್ಟಿನಿಂದ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಸ್ಪಷ್ಟವಾದ ಲಕ್ಷಣಗಳಿವೆ. ಮೂಲಸೌಕರ್ಯ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಜೆಟ್ ದೊಡ್ಡ ಉತ್ತೇಜನ ನೀಡಿದೆ ಎಂದರು.

ಇದನ್ನೂ ಓದಿ: 2022ರ ವಿತ್ತೀಯ ವರ್ಷದಲ್ಲಿ ಶೇ 10.5ರಷ್ಟು ಜಿಡಿಪಿ ಬೆಳವಣಿಗೆ - ಆರ್​ಬಿಐ ಅಂದಾಜು

ಅಲ್ಪಾವಧಿಯಲ್ಲಿ ತರಕಾರಿ ಬೆಲೆಗಳು ನಿಯಂತ್ರಣದಲ್ಲಿ ಉಳಿಯುವ ಸಾಧ್ಯತೆ ಇದೆ. ಸಾಲಗಳ ಮೂಲಕ ಹಣ ಸಂಗ್ರಹಿಸುವ ಸರ್ಕಾರದ ನಿರ್ಧಾರವನ್ನು ಸುಗಮವಾಗಿ ನಡೆಸಲು ಆರ್‌ಬಿಐ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಮುಂದಿನ ಸಾಲ ಪರಿಶೀಲನೆಯ ಮೂಲಕ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್) ಶೇ 4ಕ್ಕೆ ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು. 2021ರ ಅಕ್ಟೋಬರ್ ವರೆಗೆ ಬ್ಯಾಂಕ್​ಗಳು ಶೇ 0.625ರ ‘ಕ್ಯಾಪಿಟಲ್ ಕನ್ಸರ್ವೇಶನ್ ಬಫರ್’ ಗುರಿ ಪೂರೈಸಲು ಆರ್‌ಬಿಐ ಗಡುವನ್ನು ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರ ಮತ್ತು ರಿವರ್ಸ್ ರೆಪೋ ದರವನ್ನು ಬದಲಾಗದೆ ಇರಿಸಿದೆ ಎಂದು ಸ್ಪಷ್ಟನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.