ETV Bharat / business

ವೇತನ, ಪಿಂಚಣಿ, EMI ಪಾವತಿ ಗ್ರಾಹಕರಿಗೆ ಸಿಹಿ ಸುದ್ದಿ; ATM ಸೇರಿ ಇತರ ವಹಿವಾಟಿಗೆ ನಾಳೆಯಿಂದಲೇ ಶುಲ್ಕ ಹೆಚ್ಚಳ

ಬ್ಯಾಂಕುಗಳಲ್ಲಿ ವಹಿವಾಟು ನಡೆಸುವ ಸಂಬಂಧ ಆರ್‌ಬಿಐ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ನಾಳೆಯಿಂದ ಜಾರಿಗೆ ಬರಲಿದೆ. ಹೊಸ ಮಾರ್ಗಸೂಚಿಗಳಲ್ಲಿ ವೇತನ, ಪೆನ್ಷನ್‌ ಹಾಗೂ ಇಎಂಐ ಪಾವತಿದಾರರಿಗೆ ಸಿಹಿ ಸುದ್ದಿ ನೀಡಿದೆ. ಆದ್ರೆ ಹೆಚ್ಚು ಬಾರಿ ಎಂಟಿಎಂಗಳಲ್ಲಿ ಹಣ ಬಿಡಿಸುವುದು, ಹೆಚ್ಚಿನ ಚೆಕ್‌ ಬುಕ್‌ ಸೇರಿ ಹಲವು ಸೇವೆಗಳಿಗೆ ಶುಲ್ಕವನ್ನು ಹೆಚ್ಚಿಸಿದೆ.

RBI Guidelines on Salary, Pension, EMI Payment: Bank customers
ವೇತನ, ಪಿಂಚಣಿ, ಇಎಂಐ ಪಾವತಿಯ ಗ್ರಾಹಕರಿಗೆ ಸಿಹಿ ಸುದ್ದಿ; ಎಟಿಎಂ ಸೇರಿ ಇತರೆ ವಹಿವಾಟಿಗೆ ಶುಲ್ಕ ಹೆಚ್ಚಳ
author img

By

Published : Jul 31, 2021, 2:11 PM IST

ಮುಂಬೈ: ವೇತನ, ಪೆನ್ಷನ್‌, ಇಎಂಐ ಪಾವತಿಗಳ ಸಂಬಂಧ ಬ್ಯಾಂಕ್‌ ಗ್ರಾಹಕರಿಗೆ ಆರ್‌ಬಿಐ ಸಿಹಿ ಸುದ್ದಿ ನೀಡಿದ್ದು, ವಹಿವಾಟು ಸಂಬಂಧ ಹೊಸ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದ್ದು, ನಾಳೆಯಿಂದ (ಆಗಸ್ಟ್‌) ಅನ್ವಯವಾಗುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (ಎನ್‌ಎಸಿಎಚ್) ನ ನಿಯಮಗಳನ್ನು ಬದಲಾಯಿಸಿದೆ. ಮಾರ್ಗಸೂಚಿಗಳ ಪ್ರಕಾರ, ಎನ್‌ಎಸಿಎಚ್‌ನ ಸೇವೆಗಳು ವಾರದಲ್ಲಿ ಏಳು ದಿನಗಳು ಲಭ್ಯವಿರುತ್ತವೆ. ಪ್ರಸ್ತುತ ಸೋಮವಾರದಿಂದ ಶುಕ್ರವಾರದವರೆಗೆ ಬ್ಯಾಂಕುಗಳು ತೆರೆದಿರುವಾಗ ಮಾತ್ರ ಈ ಸೇವೆಗಳು ಲಭ್ಯವಿರುತ್ತಿದ್ದವು.

ಈ ಮೊದಲು ಬ್ಯಾಂಕಿನ ಕೆಲಸದ ಅವಧಿಯಲ್ಲೇ ಮಾತ್ರ ವೇತನ, ಪಿಂಚಣಿ ಹಾಗೂ ಇಎಂಐ ಪಾವತಿಯಂತಹ ವ್ಯವಹಾರಗಳನ್ನು ನಡೆಸಲಾಗುತ್ತಿತ್ತು. ಹೊಸ ಮಾರ್ಗಸೂಚಿಯಂತೆ ವಾರದ 24 ಗಂಟೆಯೂ ಬ್ಯಾಂಕಿಂಗ್‌ ಸೇವೆ ಲಭ್ಯವಾಗಲಿದೆ. ತಿಂಗಳ ಮೊದಲ ದಿನ ಕೆಲವೊ ವಾರಾಂತ್ಯ(ಭಾನುವಾರ)ದಲ್ಲಿ ಬರುತ್ತದೆ. ಇದರಿಂದಾಗಿ ಖಾತೆಗೆ ಹಣ ಜಮಾ ಮಾಡಲು ಮುಂದಿನ ಕೆಲಸದ ದಿನಕ್ಕೆ ಕಾಯಬೇಕಾಗಿತ್ತು. ಆಗ ಸಂಬಳ ವಿಳಂಬವಾಗುತ್ತದೆ.

ಇದನ್ನೂ ಓದಿ: ಗ್ರಾಹಕರ ಗಮನಕ್ಕೆ: ಆಗಸ್ಟ್‌ನಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ

ಇತ್ತೀಚೆಗೆ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಸಾಂಕ್ರಾಮಿಕದ ನಡುವೆ ಹಲವಾರು ಪ್ರಮುಖ ಆರ್ಥಿಕ ಕ್ರಮಗಳನ್ನು ಘೋಷಿಸಿದ್ದರು. ಇತರ ಕ್ರಮಗಳ ಜೊತೆಗೆ, ಅವರು ಆರ್‌ಟಿಜಿಎಸ್ ಮತ್ತು ಎನ್‌ಎಸಿಎಚ್‌ನ 24x7 ಲಭ್ಯತೆಯನ್ನು 2021ರ ಆಗಸ್ಟ್ 1 ಜಾರಿಗೆ ಬರುವಂತೆ ಘೋಷಿಸಿದ್ದರು.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ನಿರ್ವಹಿಸುವ ಬೃಹತ್ ಪಾವತಿ ವ್ಯವಸ್ಥೆ, NACH ಲಾಭಾಂಶ, ಬಡ್ಡಿ, ಸಂಬಳ, ಪಿಂಚಣಿ ಇತ್ಯಾದಿಗಳ ಪಾವತಿ ಮತ್ತು ವಿದ್ಯುತ್, ಗ್ಯಾಸ್, ದೂರವಾಣಿಗೆ ಸಂಬಂಧಿಸಿದ ಪಾವತಿಗಳ ಸಂಗ್ರಹದಂತಹ ಒಂದರಿಂದ ಹಲವು ಕ್ರೆಡಿಟ್ ವರ್ಗಾವಣೆಗಳನ್ನು ಸುಗಮಗೊಳಿಸುತ್ತದೆ. , ನೀರು, ಇಎಂಐ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ, ವಿಮಾ ಕಂತು ಇತ್ಯಾದಿ ಸೇವೆಗಳನ್ನು ಲಭ್ಯವಾಗಲಿವೆ.

ಎಟಿಎಂಗಳಲ್ಲಿ ನಗದು ಹಿಂಪಡೆಯು ಶುಲ್ಕ ಹೆಚ್ಚಳ:

ಆರ್‌ಬಿಐ ಆದೇಶದ ಪ್ರಕಾರ, ಎಟಿಎಂಗಳಲ್ಲಿನ ವಹಿವಾಟುಗಳ ವಿನಿಮಯ ಶುಲ್ಕವನ್ನು 15 ರಿಂದ 17 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಆದೇಶ ನಾಳೆಯಿಂದ ಜಾರಿಗೆ ಬರಲಿದೆ. ಒಂಬತ್ತು ವರ್ಷಗಳ ನಂತರ ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸಲಾಗಿದೆ. ಎಟಿಎಂ ನಿರ್ವಹಣೆಗೆ ಬ್ಯಾಂಕುಗಳಿಂದ ಆಗಬೇಕಿರುವ ನಿಯೋಜನೆ ಮತ್ತು ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಪರಿಷ್ಕರಣೆ ಮಾಡಲಾಗಿದೆ.

ಹಣಕಾಸೇತರ ವ್ಯವಹಾರಗಳ ಶುಲ್ಕವನ್ನು 5 ರೂಪಾಯಿಯಿಂದ 6 ಕ್ಕೆ ಹೆಚ್ಚಿಸಲಾಗಿದೆ. ಇದು ವಿನಿಮಯ ಶುಲ್ಕಗಳು ವಹಿವಾಟಿನ ಮೇಲೆ ಅನ್ವಯವಾಗುತ್ತವೆ. ಇಲ್ಲಿ ಬ್ಯಾಂಕಿನ ಬಳಕೆದಾರರು, ಖಾತೆ ಹೊಂದಿರುವ ಬ್ಯಾಂಕ್‌ನಿಂದ ಪಡೆದ ಎಟಿಎಂ ಕಾರ್ಡ್ ಅನ್ನು ಬೇರೆ ಬ್ಯಾಂಕಿನ ಎಟಿಎಂನಲ್ಲಿ ಕಾರ್ಡ್‌ ಬಳಸಿ ಹಣ ಬಿಡಿಸಿಕೊಂಡಾಗ ಈ ನಿಮಯ ಅನ್ವಯವಾಗುತ್ತದೆ.

ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್ ನಾಳೆಯಿಂದ ನಗದು ವಹಿವಾಟು, ಎಟಿಎಂ ಇಂಟರ್‌ಚೇಂಜ್ ಹಾಗೂ ಚೆಕ್‌ಬುಕ್ ಶುಲ್ಕಗಳ ಪರಿಷ್ಕರಣೆ ಮಾಡಿದೆ. ಈ ಶುಲ್ಕಗಳು ನಾಳೆಯಿಂದ ದೇಶೀಯ ಉಳಿತಾಯ ಖಾತೆಗೆ ಅನ್ವಯಿಸಿ ಜಾರಿಗೆ ಬರಲಿದೆ. ಬ್ಯಾಂಕ್ ನಿಯಮಗಳ ಪರಿಷ್ಕರಣೆಗಳು ಆಗಸ್ಟ್ 1, 2021 ರಿಂದ ಜಾರಿಗೆ ಬರಲಿವೆ ಎಂದು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ತಿಳಿಸಿದೆ. ಹೊಸ ಬದಲಾವಣೆ ನಂತರ, ಐಸಿಐಸಿಐ ಬ್ಯಾಂಕ್ ಖಾತೆದಾರರು ಮೊದಲ 3 ವಹಿವಾಟುಗಳ ನಂತರ ಬೇರೆ ಬ್ಯಾಂಕ್‌ ಅಥವಾ ಬ್ಯಾಂಕೇತರ ಎಟಿಎಂಗಳಿಂದ ನಗದು ಹಿಂಪಡೆಯಲು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ವಹಿವಾಟಿಗೆ ಎಷ್ಟೊಂದು ಕಾರ್ಡುಗಳು.. ಇವುಗಳ ಬಳಕೆ ತಿಳಿದುಕೊಂಡರೆ ಒಳ್ಳೆಯದು

1) ಚೆಕ್ ಬುಕ್ ಶುಲ್ಕಗಳು

ಐಸಿಐಸಿಐ ಬ್ಯಾಂಕ್ ಖಾತೆ ಹೊಂದಿರುವವರು ನಾಳೆಯಿಂದ ಹೆಚ್ಚುವರಿ ಚೆಕ್ ಪುಸ್ತಕಗಳ ಬಳಕೆಗಾಗಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಂದು ನಿರ್ದಿಷ್ಟ ವರ್ಷದ ಮೊದಲ 25 ಚೆಕ್‌ಗಳ ಪುಸ್ತಕಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಆದರೆ ನಂತರ 10 ಚೆಕ್ ಲೀಫ್‌ಗಳ ಪ್ರತಿ ಹೆಚ್ಚುವರಿ ಚೆಕ್‌ಬುಕ್‌ಗೆ 20 ರೂ. ಶುಲ್ಕ ಪಾವತಿಸಬೇಕಾಗುತ್ತದೆ.

2) ನಗದು ಹಿಂತೆಗೆತ ಮಿತಿ ಶುಲ್ಕಗಳು

ಕ್ಯಾಲೆಂಡರ್ ತಿಂಗಳಿನ ಮೊದಲ ನಗದು ಹಿಂಪಡೆಯುವಿಕೆ ಆಗಸ್ಟ್ ನಿಂದ ಉಚಿತವಾಗಿ ಇರುತ್ತದೆ. ಆ ನಂತರ, ಬ್ಯಾಂಕ್ ಖಾತೆದಾರರು ಹಿಂತೆಗೆದುಕೊಳ್ಳುವ ಪ್ರತಿ 1,000 ರೂ.ಗೆ 5 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬ್ಯಾಂಕ್ ಪ್ರತಿ ತಿಂಗಳು ಉಚಿತ ನಗದು ವಹಿವಾಟಿಗೆ 1 ಲಕ್ಷ ರೂ. ಮಿತಿಯನ್ನು ನಿಗದಿಪಡಿಸಿದೆ. ಇದು ಕನಿಷ್ಠ 150 ರೂ.ಗೆ ಒಳಪಟ್ಟಿರುತ್ತದೆ. ಈ ಬದಲಾವಣೆಗಳು ಖಾತೆ ತೆರೆದಿರುವ ಅಥವಾ ಪೋರ್ಟ್‌ ಮಾಡಿದ ಹೋಮ್ - ಬ್ರಾಂಚ್ ಖಾತೆಗಳಿಗೆ ಅನ್ವಯಿಸುತ್ತದೆ. ಗೃಹೇತರ ಶಾಖೆಗಳಿಗೆ ದಿನಕ್ಕೆ ರೂ. 25,000 ವರೆಗಿನ ವಹಿವಾಟಿಗೆ ಯಾವುದೇ ಶುಲ್ಕವಿರುವುದಿಲ್ಲ, ಈ ಮಿತಿ ಮೀರಿದರೆ ಮೇಲೆ ತಿಳಿಸಿದಂತೆಯೇ ಶುಲ್ಕ ವಿಧಿಸಲಾಗುತ್ತದೆ.

3) ಹಣಕಾಸು ವಹಿವಾಟುಗಳಿಗಾಗಿ ಎಟಿಎಂ

ಐಸಿಐಸಿಐ ಗ್ರಾಹಕರು ಮುಂಬೈ, ದೆಹಲಿ, ಚೆನ್ನೈ, ಕೋಲ್ಕತಾ, ಹೈದರಾಬಾದ್ ಮತ್ತು ಬೆಂಗಳೂರು ಎಂಬ ಆರು ಮಹಾನಗರಗಳಲ್ಲಿನ ಬ್ಯಾಂಕೇತರ ಎಟಿಎಂಗಳಿಂದ 1 ತಿಂಗಳಲ್ಲಿ ಮೊದಲ ಮೂರು ವಹಿವಾಟುಗಳನ್ನು ಉಚಿತವಾಗಿ ಪಡೆಯಬಹುದು. ಈ ಮಿತಿ ಮೀರಿದರೆ ಪ್ರತಿ ಹಣಕಾಸಿನ ವಹಿವಾಟಿಗೆ 20 ರೂ. ಸಿಲ್ವರ್, ಗೋಲ್ಡ್, ಮ್ಯಾಗ್ನಮ್, ಟೈಟಾನಿಯಂ ಮತ್ತು ವೆಲ್ತ್ ವೆರಿಯಂಟ್ ಖಾತೆಗಳನ್ನು ಹೊಂದಿರುವ ಕಾರ್ಡುದಾರರಿಗೆ ಇದು ಅನ್ವಯಿಸುತ್ತದೆ.

4) ಹಣಕಾಸೇತರ ವ್ಯವಹಾರಗಳಿಗೆ ಎಟಿಎಂ

ಮೇಲೆ ತಿಳಿಸಿದ ಮಹಾನಗರಗಳನ್ನು ಹೊರತುಪಡಿಸಿ ಬೇರೆ ಎಲ್ಲ ಸ್ಥಳಗಳಲ್ಲಿ ಐದು ಉಚಿತ ವಹಿವಾಟುಗಳನ್ನು ಒದಗಿಸುತ್ತದೆ. ಬ್ಯಾಂಕಿನ ವೆಬ್‌ಸೈಟ್‌ನ ಪ್ರಕಾರ, ಇವುಗಳಲ್ಲಿ ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳು ಸೇರಿವೆ. ಹಣಕಾಸೇತರ ವಹಿವಾಟಿನ ಮಿತಿಯನ್ನು ಮೀರಿದರೆ ಆ ಕ್ಯಾಲೆಂಡರ್ ತಿಂಗಳಲ್ಲಿ ಪ್ರತಿ ಮುಂದಿನ ವಹಿವಾಟಿಗೆ ರೂ 8.50 ಶುಲ್ಕ ವಿಧಿಸಲಾಗುತ್ತದೆ.

5) ಗೃಹ ಶಾಖೆಯಲ್ಲಿ ನಗದು ವಹಿವಾಟು

ಐಸಿಐಸಿಐ ಬ್ಯಾಂಕ್ ಹೋಮ್ ಬ್ರಾಂಚ್‌ನಲ್ಲಿ ತಿಂಗಳಿಗೆ ನಾಲ್ಕು ಉಚಿತ ವಹಿವಾಟುಗಳಿಗೆ ಅವಕಾಶ ನೀಡುತ್ತದೆ. ಇದು ಸಾಮಾನ್ಯ ಉಳಿತಾಯ ಖಾತೆಗಳಿಗೆ ಸಂಚಿತ ಠೇವಣಿ ಅಥವಾ ಹಿಂಪಡೆಯುವಿಕೆಗೆ ಅನ್ವಯಿಸುತ್ತದೆ. ಈ ಮಿತಿಯನ್ನು ಮೀರಿದರೆ ಪ್ರತಿ ವಹಿವಾಟಿಗೆ 150 ರೂ. ಶುಲ್ಕ ವಿಧಿಸಲಾಗುತ್ತದೆ.

6) ಮೂರನೇ ವ್ಯಕ್ತಿಯ ವಹಿವಾಟು

ಯಾವುದೇ ಮೂರನೇ ವ್ಯಕ್ತಿ ಹಣ ಹಿಂಪಡೆಯುವಿಕೆ ಅಥವಾ ಪಾವತಿ ಮೇಲೆ ಮೇಲಿನ ಮಿತಿ ದಿನಕ್ಕೆ 25,000 ರೂ. ಪ್ರತಿ ವಹಿವಾಟಿಗೆ 150 ರೂಪಾಯಿ ಶುಲ್ಕವಿರುತ್ತದೆ. ದಿನಕ್ಕೆ ರೂ 25,000 ಕ್ಕಿಂತ ಹೆಚ್ಚು ಅನುಮತಿಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

7) ಪ್ಲಸ್ ಸಂಬಳ ಖಾತೆದಾರರಿಗೆ ಶುಲ್ಕಗಳು

ಐಸಿಐಸಿಐ ಬ್ಯಾಂಕಿನಲ್ಲಿ ಸರಾಸರಿ ಪ್ಲಸ್ ಸಂಬಳ ಖಾತೆದಾರರಿಗೆ, ಮೊದಲ ನಾಲ್ಕು ವಹಿವಾಟುಗಳನ್ನು ನಿರ್ದಿಷ್ಟ ಕ್ಯಾಲೆಂಡರ್ ತಿಂಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಇದರ ನಂತರ, ಪ್ರತಿ 1,000 ರೂ. ಅಥವಾ ಅದರ ಭಾಗಕ್ಕೆ 5 ರೂ.ಗಳ ಶುಲ್ಕವಿರುತ್ತದೆ. ತಿಂಗಳಲ್ಲಿ ಮೊದಲ ಬಾರಿಗೆ ನಗದು ಮರುಬಳಕೆ ಯಂತ್ರ (ಸಿಆರ್‌ಎಂ) ಸೇವೆಗೆ ಯಾವುದೇ ಶುಲ್ಕವಿರುವುದಿಲ್ಲ. ಮಿತಿ ಮೀರಿದ ನಂತರ, ಪ್ರತಿ 1,000 ರೂ.ಗೆ 5 ರೂ. ಶುಲ್ಕ ವಿಧಿಸಲಾಗುತ್ತದೆ.

8) ಮೌಲ್ಯ ಮಿತಿ ಶುಲ್ಕಗಳು (ಗೃಹೇತರ ಶಾಖೆಗಳು)

ದಿನಕ್ಕೆ ರೂ 25,000 ವರೆಗಿನ ನಗದು ವಹಿವಾಟಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಮಿತಿಯನ್ನು ಮೀರಿದ ನಂತರ ಪ್ರತಿ 1,000 ರೂ.ಗೆ 5 ರೂ. ವೆಚ್ಚವಾಗುತ್ತದೆ.

9) ಹಿರಿಯ ನಾಗರಿಕರ ಖಾತೆಗಳು ಮತ್ತು ಸ್ಟಾರ್/ಸ್ಮಾರ್ಟ್ ಸ್ಟಾರ್ ಖಾತೆಗಳು

ಈ ರೀತಿಯ ಖಾತೆಗಳು ವಹಿವಾಟಿನ ಮೇಲೆ ದಿನಕ್ಕೆ ರೂ 25,000 ಗರಿಷ್ಠ ಮಿತಿಯನ್ನು ಹೊಂದಿರುತ್ತವೆ, ಆದರೆ ಈ ಸಂದರ್ಭದಲ್ಲಿ ಖಾತೆಗೆ ಶುಲ್ಕ ವಿಧಿಸಲಾಗುವುದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.