ನವದೆಹಲಿ: ಪ್ರಸ್ತುತ ಮಟ್ಟದಿಂದ ಹಣದುಬ್ಬರವು ಭೌತಿಕವಾಗಿ ಕುಸಿಯುವ ಸಾಧ್ಯತೆಯಿಲ್ಲದ ಕಾರಣ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರ ಇನ್ನಷ್ಟು ಕಡಿತ ಮಾಡಲಿಕ್ಕಿಲ್ಲ ಎಂದು ಎಸ್‌ಬಿಐನ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ಆರ್ಥಿಕ ಚೇತರಿಕೆಯ ಜವಾಬ್ದಾರಿ ಈಗ ಸರ್ಕಾರದ ಹೆಗಲ ಮೇಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿತ್ತೀಯ ತಜ್ಞರು ಹೇಳುತ್ತಾರೆ.
ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಇತ್ತೀಚೆಗೆ ನಡೆದ ಸಭೆಯ ಒಂದು ದಿನದ ನಂತರ ಈ ಹೇಳಿಕೆ ಹೊರ ಬಂದಿದೆ. ಹೆಚ್ಚಿನ ಹಣದುಬ್ಬರ ದರಗಳನ್ನು ಹಿಡಿದಿಡುವ ಸರ್ವಾನುಮತದ ನಿರ್ಧಾರಕ್ಕೆ ಇದೇ ಪ್ರಮುಖ ಕಾರಣವೆಂದು ಉಲ್ಲೇಖಿಸಲಾಗಿದೆ.
ಆರ್ಥಿಕ ಬೆಳವಣಿಗೆ ವೃದ್ಧಿಸುವ ಉದ್ದೇಶದಿಂದ ಈ ವರ್ಷದ ಮಾರ್ಚ್‌ನಲ್ಲಿ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೊ ದರ ಶೇ 1.15ರಷ್ಟು ಕಡಿತಗೊಳಿಸಿತ್ತು.
ರೆಪೊ ದರವನ್ನು ಇನ್ನಷ್ಟು ತಗ್ಗಿಸಲು ಆಗಸ್ಟ್ನಲ್ಲಿ ನಡೆದ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ನಿರಾಕರಿಸಲಾಗಿತ್ತು. ಈ ನಿರ್ಧಾರ ಅನೇಕರನ್ನು ಆಶ್ಚರ್ಯಗೊಳಿಸಿತು. 'ತ್ವರಿತಗತಿಯ ಚೇತರಿಕೆಯ ಯಾವುದೇ ಭರವಸೆಯನ್ನು ನಾವು ಬೆಳೆಸಬೇಕಾದರೆ ಹಣಕಾಸಿನ ನೀತಿ ನಿರ್ಣಾಯಕ ಪಾತ್ರ ವಹಿಸುತ್ತದೆ' ಎಂದು ಎಸ್‌ಬಿಐನ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ದರ ಕಡಿತ ಚಕ್ರದ ಕೊನೆಯಲ್ಲಿದ್ದೇವೆ ಎಂದು ನಾವು ಈಗ ನಂಬುತ್ತೇವೆ. ಹಣದುಬ್ಬರವು ಪ್ರಸ್ತುತ ಮಟ್ಟದಿಂದ ಭೌತಿಕವಾಗಿ ಕುಸಿಯುವ ಸಾಧ್ಯತೆಯಿಲ್ಲದ ಕಾರಣ ದೊಡ್ಡ ದರ ಕಡಿತದ ನಿರೀಕ್ಷೆಗಳು ಸ್ಥಗಿತವಾಗಬಹುದು. ಗರಿಷ್ಟವೆಂದರೆ, ರೆಪೊ ದರಗಳಲ್ಲಿ ಇನ್ನೂ ಶೇ 0.25ರಷ್ಟು ಕಡಿತ ಆಗಬಹುದು ಎಂದು ಸುಳಿವು ನೀಡಿದ್ದಾರೆ.