ಮುಂಬೈ: ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ತನ್ನ ಆರು ಆದಾಯದ ಸಾಲ ಯೋಜನೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಕೆಲವೇ ದಿನಗಳ ನಂತರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕ್ಷೇತ್ರಕ್ಕೆ ವಿಶೇಷ ದ್ರವ್ಯತೆ ಸೌಲಭ್ಯ ಘೋಷಿಸಿದೆ. ಏಳು ವರ್ಷದ ಬಳಿಕದ ಅತಿದೊಡ್ಡ ನಗದು ನೆರವು ಇದಾಗಿದೆ.
ಕೋವಿಡ್-19ಗೆ ಪ್ರತಿಕ್ರಿಯೆಯಾಗಿ ಬಂಡವಾಳ ಮಾರುಕಟ್ಟೆಗಳಲ್ಲಿನ ಏರಿಳಿತವು ಮ್ಯೂಚುವಲ್ ಫಂಡ್‌ಗಳ (ಎಂಎಫ್) ಮೇಲೆ ದ್ರವ್ಯತೆ ಒತ್ತಡ ಹೇರಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿಕೆಯೊಂದರಲ್ಲಿ ತಿಳಿಸಿತ್ತು. ಇದು ಕೆಲವು ಮ್ಯೂಚವಲ್ ಫಂಡ್‌ಗಳ ಸಾಲ ಯೋಜನೆ ಸ್ಥಗಿತಗೊಳಿಸುವಿಕೆ ಮತ್ತು ಸಂಭಾವ್ಯ ಸಾಂಕ್ರಾಮಿಕ ಪರಿಣಾಮಗಳ ವಿಮೋಚನಾ ಒತ್ತಡಕ್ಕೆ ಒಳಗಾದವು. ಹೆಚ್ಚಿನ ಅಪಾಯದ ಒತ್ತಡವು ಎಮ್ಎಫ್ ವಿಭಾಗಕ್ಕೆ ಸೀಮಿತವಾಗಿದೆ ಎಂದು ಆರ್‌ಬಿಐ ಹೇಳಿದೆ.
ಎಂಎಫ್‌ಗಳ ಮೇಲಿನ ದ್ರವ್ಯತೆ ಒತ್ತಡವನ್ನು ಸರಾಗಗೊಳಿಸುವ ಉದ್ದೇಶದಿಂದ 50,000 ಕೋಟಿ ರೂ. ವಿಶೇಷ ದ್ರವ್ಯತೆ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜಾಗರೂಕತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಕೋವಿಡ್-19ರ ಆರ್ಥಿಕ ಪರಿಣಾಮ ತಗ್ಗಿಸಲು ಮತ್ತು ಆರ್ಥಿಕ ಸ್ಥಿರತೆ ಕಾಪಾಡಲು ಅಗತ್ಯವಾದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಕಳೆದ ಬಾರಿ, ಆರ್‌ಬಿಐ 2013ರ ಜುಲೈನಲ್ಲಿ ಮ್ಯೂಚುವಲ್ ಫಂಡ್‌ಗಳ ನಗದು ಅವಶ್ಯಕತೆ ಪೂರೈಸಲು ಬ್ಯಾಂಕ್ಗಳಿಗೆ 25,000 ಕೋಟಿ ರೂ. ವಿಶೇಷ ಸಾಲ ನೀಡಿತ್ತು ಎಂದಿದೆ.
ಅಮೆರಿಕದ ಲೆಹ್ಮನ್ ಬ್ರದರ್ಸ್ ಬ್ಯಾಂಕ್ ಪತನದ ನಂತರ 2008ರ ಅಕ್ಟೋಬರ್ನಲ್ಲಿ ಆರ್‌ಬಿಐ ಮ್ಯೂಚುವಲ್ ಫಂಡ್ ಉದ್ಯಮಕ್ಕೆ ಪ್ರತ್ಯೇಕವಾಗಿ ಇದೇ ರೀತಿಯ ಹೆಚ್ಚುವರಿ ದ್ರವ್ಯತೆ ಬೆಂಬಲ ನೀಡಿತ್ತು. ಮ್ಯೂಚುವಲ್ ಫಂಡ್‌ಗಳಿಗೆ ವಿಶೇಷ ಲಿಕ್ವಿಡಿಟಿ ಫೆಸಿಲಿಟಿ (ಎಸ್‌ಎಲ್‌ಎಫ್-ಎಂಎಫ್) ಅಡಿಯಲ್ಲಿ, ಆರ್‌ಬಿಐ 90 ದಿನಗಳ ಅವಧಿಯ ರೆಪೊ ಕಾರ್ಯಾಚರಣೆಯನ್ನು ನಿಗದಿತ ರೆಪೊ ದರದಲ್ಲಿ ನಡೆಸಲಿದೆ.