ETV Bharat / business

ಕ್ಯಾಶ್ ಟ್ರಾನ್ಸಾಕ್ಷನ್ ತಗ್ಗಿಸಲು RBIನಿಂದ ಪಾವತಿ ಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪನೆ - Reserve Bank of India

ತಡವಾಗಿ ಇ - ಪಾವತಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಅಪೆಕ್ಸ್ ಬ್ಯಾಂಕ್ ಪ್ರೋತ್ಸಾಹಿಸುತ್ತಿದೆ. ದೇಶದಲ್ಲಿ ಪಾವತಿ ವ್ಯವಸ್ಥೆಯು ಬ್ಯಾಂಕ್ ಖಾತೆ, ಮೊಬೈಲ್ ಫೋನ್, ಕಾರ್ಡ್​ನಂತಹ ವ್ಯಾಪಕ ಶ್ರೇಣಿಯ ಆಯ್ಕೆಗಳೊಂದಿಗೆ ವಿಕಸನಗೊಂಡಿದೆ ಎಂದು ಆರ್‌ಬಿಐ ತಿಳಿಸಿದೆ.

Reserve Bank
ರ್ವ್ ಬ್ಯಾಂಕ್
author img

By

Published : Jun 5, 2020, 4:02 PM IST

ನವದೆಹಲಿ: ಆರಂಭಿಕ 250 ಕೋಟಿ ರೂ. ಮೊತ್ತದ ಪಾವತಿ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಪಿಐಡಿಎಫ್) ರಚಿಸುವುದಾಗಿ ರಿಸರ್ವ್ ಬ್ಯಾಂಕ್ ಶುಕ್ರವಾರ ಪ್ರಕಟಿಸಿದೆ.

ಶ್ರೇಣಿ -3 ರಿಂದ ಶ್ರೇಣಿ - 6 ನಗರಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿ 'ಪಾಯಿಂಟ್ಸ್ ಆಫ್ ಸೇಲ್' ಯಂತ್ರಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲು ಈ ನಿಧಿಯನ್ನು ರಚಿಸಲಾಗಿದೆ.

ಪಿಒಎಸ್ ಯಂತ್ರಗಳು ವ್ಯವಹಾರಗಳಿಗೆ ಇ - ಪಾವತಿ ಸ್ವೀಕರಿಸಲು ಅನುವು ಮಾಡಿಕೊಡುತ್ತವೆ. ಇದರಿಂದಾಗಿ ನಗದು ವ್ಯವಹಾರದ ಅಗತ್ಯವನ್ನ ತಗ್ಗುತ್ತದೆ.

ತಡವಾಗಿ ಇ - ಪಾವತಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಅಪೆಕ್ಸ್ ಬ್ಯಾಂಕ್ ಪ್ರೋತ್ಸಾಹಿಸುತ್ತಿದೆ. ದೇಶದಲ್ಲಿ ಪಾವತಿ ವ್ಯವಸ್ಥೆಯು ಬ್ಯಾಂಕ್ ಖಾತೆ, ಮೊಬೈಲ್ ಫೋನ್, ಕಾರ್ಡ್​ನಂತಹ ವ್ಯಾಪಕ ಶ್ರೇಣಿಯ ಆಯ್ಕೆಗಳೊಂದಿಗೆ ವಿಕಸನಗೊಂಡಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಪಾವತಿ ವ್ಯವಸ್ಥೆಗಳ ಡಿಜಿಟಲೀಕರಣಕ್ಕೆ ಮತ್ತಷ್ಟು ಉತ್ತೇಜನ ನೀಡಲು ದೇಶಾದ್ಯಂತ ಸ್ವೀಕಾರ ಮೂಲಸೌಕರ್ಯಗಳಿಗೆ ಪ್ರಚೋದನೆಯನ್ನು ನೀಡುವುದು ಅವಶ್ಯಕವಾಗಿದೆ. ರಿಸರ್ವ್ ಬ್ಯಾಂಕ್ ಪಿಐಡಿಎಫ್​​ಗೆ ಆರಂಭಿಕ ನಿಧಿಯಾಗಿ 250 ಕೋಟಿ ರೂ.ಗಳಲ್ಲಿ ಅರ್ಧದಷ್ಟು ಹಣವನ್ನು ನೀಡುತ್ತದೆ. ಉಳಿದ ಕೊಡುಗೆ ಕಾರ್ಡ್ ನೀಡುವ ಬ್ಯಾಂಕ್​ಗಳು ಮತ್ತು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಡ್ ನೆಟ್​ವರ್ಕ್​ಗಳಿಂದ ನೀಡಲಾಗುವುದು ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.