ETV Bharat / business

20 ಲಕ್ಷ ಕೋಟಿ ರೂ. ಪ್ಯಾಕೇಜ್ ಅಸಮರ್ಪಕ: ಕಾರ್ಮಿಕರ ಕೈಗೆ ಹಣ ಕೊಡಿ: ರಘುರಾಮ್ ರಾಜನ್​ - ಹಣಕಾಸು ಪ್ಯಾಕೇಜ್ ಬಗ್ಗೆ ರಘುರಾಮ್ ರಾಜನ್ ಪ್ರತಿಕ್ರಿಯೆ

ಭಾರತದ ವಿಷಯದಲ್ಲಿ ಇದು ವಿಶೇಷವಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಮ್ಮಲ್ಲಿ ಕಳೆದ ಕೆಲವು ವರ್ಷಗಳಿಂದ ಆರ್ಥಿಕತೆ ಇಳಿಮುಖವಾಗುತ್ತಿದೆ. ನಮ್ಮ ಬೆಳವಣಿಗೆ ಕುಂಠಿತಗೊಂಡಿದೆ. ನಮ್ಮಲ್ಲಿ ಹಣಕಾಸಿನ ಕೊರತೆ ಹೆಚ್ಚಾಗಿದೆ. ಆರ್ಥಿಕತೆಯನ್ನು ಮತ್ತೆ ಹಾದಿ ಹಿಡಿಯಲು ನಾವು ಹೆಚ್ಚಿನ ಉತ್ತಮ ಅಂಶಗಳನ್ನು ಸೇರಿಸಿ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಸುದ್ದಿ ಪೋರ್ಟಲ್ 'ದಿ ವೈರ್'ಗೆ ನೀಡಿದ ಸಂದರ್ಶನದಲ್ಲಿ ಆರ್​ಬಿಐನ ಮಾಜಿ ಗರ್ವನರ್​ ರಘುರಾಮ್ ರಾಜನ್ ಹೇಳಿದ್ದಾರೆ.

Raghuram Rajan
ರಘುರಾಮ್ ರಾಜನ್
author img

By

Published : May 21, 2020, 11:29 PM IST

ನವದೆಹಲಿ: ಕೋವಿಡ್​-19ರ ಆರ್ಥಿಕತೆಯ ಚೇತರಿಕೆಗೆ ಕೇಂದ್ರ ಸರ್ಕಾರದ ಘೋಷಿಸಿದ 20.9 ಲಕ್ಷ ಕೋಟಿ ರೂ. ಪ್ರಚೋದನಾ ಪ್ಯಾಕೇಜ್​ ಅಸಮರ್ಪಕವಾಗಿದೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ವ್ಯಾಖ್ಯಾನಿಸಿದ್ದಾರೆ.

ಇದು ಉಚಿತ ಆಹಾರ ಧಾನ್ಯಗಳನ್ನು ನೀಡುತ್ತದೆ. ಆದರೆ, ವಲಸೆ ಕಾರ್ಮಿಕರು ಲಾಕ್​ಡೌನ್​ನಿಂದಾಗಿ ನಿರುದ್ಯೋಗಿಗಳಾಗಿದ್ದಾರೆ. ಹಾಲು, ತರಕಾರಿಗಳು ಖರೀದಿಸಲು ಹಣದ ಅಗತ್ಯವಿದೆ. ಅವರು ಅಡುಗೆ ಎಣ್ಣೆಗೆ ಮತ್ತು ಮನೆ ಬಾಡಿಗೆಗೆ ಹಣ ಪಾವತಿಸಬೇಕಿದೆ ಎಂದು ಸರ್ಕಾರದ ಗಮನಕ್ಕೆ ತಂದರು.

ಪ್ರಪಂಚವು ಅತಿದೊಡ್ಡ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಎಲ್ಲ ಸಂಪನ್ಮೂಲವು ಅಸಮರ್ಪಕವಾಗಿದೆ ಎಂದು ಕೊರೊನಾ ವೈರಸ್​ ತಂದಿಟ್ಟ ಆರ್ಥಿಕ ಗಂಭೀರತೆಯನ್ನು ಮನದಟ್ಟು ಮಾಡಿದರು.

ಭಾರತದ ವಿಷಯದಲ್ಲಿ ಇದು ವಿಶೇಷವಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಮ್ಮಲ್ಲಿ ಕಳೆದ ಕೆಲವು ವರ್ಷಗಳಿಂದ ಆರ್ಥಿಕತೆ ಇಳಿಮುಖವಾಗುತ್ತಿದೆ. ನಮ್ಮ ಬೆಳವಣಿಗೆ ಕುಂಠಿತಗೊಂಡಿದೆ. ನಮ್ಮಲ್ಲಿ ಹಣಕಾಸಿನ ಕೊರತೆ ಹೆಚ್ಚಾಗಿದೆ. ಆರ್ಥಿಕತೆಯನ್ನು ಮತ್ತೆ ಹಾದಿ ಹಿಡಿಯಲು ನಾವು ಹೆಚ್ಚಿನ ಉತ್ತಮ ಅಂಶಗಳನ್ನು ಸೇರಿಸಿ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಸುದ್ದಿ ಪೋರ್ಟಲ್ 'ದಿ ವೈರ್'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೋವಿಡ್​ ಪ್ರೇರಿತ ರಾಷ್ಟ್ರವ್ಯಾಪಿ ಲಾಕ್‌ಡೌನ್ ಪೀಡಿತ ಜನರು ಮತ್ತು ಕಂಪನಿಗಳಿಗೆ ಪರಿಹಾರ ನೀಡಲು ಮಾರ್ಗಗಳನ್ನು ಕಂಡುಹಿಡಿಯಬೇಕಾಗಿದೆ ಎಂದು ಐಒಎಂಎಫ್‌ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಕರೆ ನೀಡಿದ್ದಾರೆ.

ನಾವು ಆರ್ಥಿಕತೆಯ ದುರಸ್ತಿಯ ಅಗತ್ಯವಿರುವ ಸ್ಥಳಗಳನ್ನು ಸರಿಪಡಿಸಬೇಕಾಗಿದೆ. ಇದು ಕೆಲವು ದೊಡ್ಡ ಸಂಸ್ಥೆಗಳನ್ನು ಒಳಗೊಂಡಿದೆ. ಇದರಲ್ಲಿ ಬ್ಯಾಂಕ್​ಗಳು, ಎಂಎಸ್‌ಎಂಇಗಳೂ ಸೇರಿವೆ. ಕೋವಿಡ್​ನಿಂದ ಮುಳುಗಿದ ಆರ್ಥಿಕತೆಯ ಚೇತರಿಕೆಗೆ ಸಂಪನ್ಮೂಲಗಳನ್ನು ಒದಗಿಸುವುದು ಮಾತ್ರವಲ್ಲ, ಆಹಾರದ ಜೊತೆಗೆ ಹಣದ ಅಗತ್ಯವಿರುವ ವಲಸೆ ಕಾರ್ಮಿಕರಂತಹ ವಿಭಾಗಗಳು ಎದುರಿಸುತ್ತಿರುವ ತೊಂದರೆಗಳನ್ನು ಪರಿಹರಿಸುವಲ್ಲಿ ಈ ಪ್ಯಾಕೇಜ್ ವಿಫಲವಾಗಿದೆ ಎಂದು ಆರ್​ಬಿಐನ ಮಾಜಿ ಗರ್ವನರ್​ ವ್ಯಾಖ್ಯಾನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.