ನವದೆಹಲಿ: ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗ ಸೇರಿ ಇತರ ಆರು ಹೈಸ್ಪೀಡ್ ರೈಲ್ವೆ ಕಾರಿಡಾರ್, ಸೆಮಿ ಹಾಗೂ 4 ಮೀಸಲು ಸರಕು ಕಾರಿಡಾರ್‌ಗಳನ್ನು ಗುರುತಿಸಲಾಗಿದೆ.
ರೈಲ್ವೆ ಮಂಡಳಿಯ ಮುಖ್ಯಸ್ಥ ವಿ.ಕೆ. ಯಾದವ್ ಮಾತನಾಡಿ, ರೈಲ್ವೆಯು ಆರು ಹೈಸ್ಪೀಡ್ ಮತ್ತು ಸೆಮಿ ಸ್ಪೀಡ್ ರೈಲು ಕಾರಿಡಾರ್‌ಗಳನ್ನು ಗುರುತಿಸಲಾಗಿದೆ. ಎಲ್ಲ ಕಾರಿಡಾರ್‌ಗಳ ಸಮಗ್ರ ಯೋಜನಾ ವರದಿಯು ಒಂದೆರಡು ವರ್ಷಗಳಲ್ಲಿ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.
865 ಕಿ.ಮೀ. ಅಂತರದ ದೆಹಲಿ-ಆಗ್ರ-ಲಖನೌ- ವಾರಣಾಸಿ, 886 ಕಿ.ಮೀ. ಅಂತರದ ದೆಹಲಿ-ಜೈಪುರ್-ಉದಯಪುರ್-ಅಹಮದಾಬಾದ್, 753 ಕಿ.ಮೀ. ಮಾರ್ಗದ ಮುಂಬೈ-ಪುಣೆ-ಹೈದರಾಬಾದ್, 435 ಕಿ.ಮೀ. ಕ್ರಮಿಸುವ ಚೆನ್ನೈ-ಬೆಂಗಳೂರು-ಮೈಸೂರು ಹಾಗೂ 459 ಕಿ.ಮೀ. ಮಾರ್ಗದ ದೆಹಲಿ-ಚಂಡೀಘಡ್-ಲುಧಿಯಾನ-ಜಲಂಧರ್-ಅಮೃತಸರ್ ಅನ್ನು ಹೈಸ್ಪೀಡ್ ಅಥವಾ ಸೆಮಿ ಸ್ಪೀಡ್ಗೆ ಗುರುತಿಸಲಾಗಿದೆ ಎಂದರು.
ಸರಕು ಸಾಗಣೆ ರೈಲುಗಳ ಸರಾಸರಿ ವೇಗವನ್ನು ಡಿಎಫ್‌ಸಿಯಲ್ಲಿ ಅಸ್ತಿತ್ವದಲ್ಲಿರುವ 26 ಕಿ.ಮೀ.ನಿಂದ 70 ಕಿ.ಮೀ.ಗೆ ಹೆಚ್ಚಿಸಲು ಸಹ ಯೋಜಿಸಲಾಗಿದೆ. ರಾಷ್ಟ್ರೀಯ ಸಾರಿಗೆ ನಾಲ್ಕು ಹೊಸ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ಗಳನ್ನು ಹುಡುಕುತ್ತಿದೆ ಎಂದು ಯಾದವ್ ಹೇಳಿದ್ದಾರೆ.
ಖರಗ್‌ಪುರದಿಂದ ವಿಜಯವಾಡದವರೆಗಿನ 1,114 ಕಿ.ಮೀ ಪೂರ್ವ ಕರಾವಳಿ ಕಾರಿಡಾರ್, ಭೂಸಾವಲ್- ವಾರ್ಧಾ-ನಾಗ್ಪುರ- ರಾಜ್‌ಕಾರ್ಸ್ವಾನ್- ಖರಗ್‌ಪುರ- ಉಲ್ಬೇರಿಯಾ- ಡಂಕುನಿ ನಡುವಿನ 1956 ಕಿ.ಮೀ ಪೂರ್ವ ಪಶ್ಚಿಮ ಉಪ ಕಾರಿಡಾರ್ II, ರಾಜ್‌ಖರ್ಸ್ವಾನ್- ಆಂಡಾಲ್ ಮತ್ತು ರಾಜ್‌ಖರ್ಸ್ವಾನ್-ಆಂಡಾಲ್ ಮತ್ತು ವಿಜಯವಾಡದಿಂದ ಇಟಾರ್ಸಿಯವರೆಗಿನ 975 ಕಿ.ಮೀ ಉತ್ತರ ದಕ್ಷಿಣ ಉಪ ಕಾರಿಡಾರ್ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
3,933 ಕಿ.ಮೀ. ಉದ್ದದ ನಾಲ್ಕು ಸರಕು ಕಾರಿಡಾರ್‌ಗಳ ವಿವರವಾದ ಯೋಜನಾ ವರದಿಯನ್ನು ರೈಲ್ವೆ ಮಂಡಳಿಯು ಕೈಗೊಳ್ಳಲಿದೆ. ಮುಂದಿನ ಒಂದು ಅಥವಾ ಎರಡು ವರ್ಷಗಳಲ್ಲಿ ಕಾರಿಡಾರ್ಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಬೆಂಗಳೂರು- ಮೈಸೂರು ಕೇವಲ 40 ನಿಮಿಷ: ಚೆನ್ನೈ- ಬೆಂಗಳೂರು- ಮೈಸೂರು ಕಾರಿಡಾರ್ ಪೂರ್ತಿಯಾದರೆ ಈಗ ಮೂರು ಗಂಟೆ ತೆಗೆದುಕೊಳ್ಳುತ್ತಿರುವ ಬೆಂಗಳೂರಿನಿಂದ ಮೈಸೂರು ನಡುವಿನ ಪ್ರಯಾಣದ ಅವಧಿ 40 ನಿಮಿಷಗಳಿಗೆ ಇಳಿಯಲಿದೆ. ಚೆನ್ನೈಯಿಂದ ಮೈಸೂರಿನ ಪ್ರಯಾಣದ ಅವಧಿ 2 ಗಂಟೆ 25 ನಿಮಿಷಗಳಿಗೆ ಇಳಿಯುತ್ತದೆ.