ನವದೆಹಲಿ: ಜಾಗತಿಕ ಹಸಿವಿನ ಸೂಚ್ಯಂಕ 2020ರ ಶ್ರೇಯಾಂಕದಲ್ಲಿ ಭಾರತ ನೆರೆಯ ರಾಷ್ಟ್ರಗಳಾದ ಬಾಂಗ್ಲಾ, ಪಾಕ್ ಹಾಗೂ ಅಫ್ಘಾನಿಸ್ತಾನಕ್ಕಿಂತ ಕಡಿಮೆ ಅಂಕ ಪಡೆದಿದ್ದು, ಇದೇ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಸಂಸದ ರಾಹುಲ್ ಗಾಂದಿ ವಾಗ್ದಾಳಿ ನಡೆಸಿದ್ದಾರೆ.
ಭಾರತದ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ. ಏಕೆಂದರೆ ಕೇಂದ್ರ ಸರ್ಕಾರವು ತನ್ನ ಕೆಲವು ವಿಶೇಷ ಸ್ನೇಹಿತರ ಜೇಬುಗಳನ್ನು ತುಂಬಿಸುವಲ್ಲಿ ನಿರತವಾಗಿದೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿ ಆರೋಪಿಸಿದ್ದಾರೆ.
-
भारत का ग़रीब भूखा है क्योंकि सरकार सिर्फ़ अपने कुछ ख़ास ‘मित्रों’ की जेबें भरने में लगी है। pic.twitter.com/MMJHDo1ND6
— Rahul Gandhi (@RahulGandhi) October 17, 2020 " class="align-text-top noRightClick twitterSection" data="
">भारत का ग़रीब भूखा है क्योंकि सरकार सिर्फ़ अपने कुछ ख़ास ‘मित्रों’ की जेबें भरने में लगी है। pic.twitter.com/MMJHDo1ND6
— Rahul Gandhi (@RahulGandhi) October 17, 2020भारत का ग़रीब भूखा है क्योंकि सरकार सिर्फ़ अपने कुछ ख़ास ‘मित्रों’ की जेबें भरने में लगी है। pic.twitter.com/MMJHDo1ND6
— Rahul Gandhi (@RahulGandhi) October 17, 2020
ಜಾಗತಿಕ ಹಸಿವು ಸೂಚ್ಯಂಕ 2020ರ ವರದಿಯಲ್ಲಿ 107 ದೇಶಗಳ ಪೈಕಿ ಭಾರತಕ್ಕೆ 94ನೇ ಸ್ಥಾನ ನೀಡಿದೆ. 'ಪಾಕಿಸ್ತಾನ (88), ನೇಪಾಳ (73) ಮತ್ತು ಬಾಂಗ್ಲಾದೇಶ (75) ಸೇರಿದಂತೆ ಭಾರತವು ತನ್ನ ನೆರೆಹೊರೆಯವರಿಗಿಂತ ಕೆಳಮಟ್ಟದಲ್ಲಿದೆ' ಎಂದು ತೋರಿಸುವ ಗ್ರಾಫ್ ಅನ್ನು ಸಹ ಹಂಚಿಕೊಂಡಿದ್ದಾರೆ.
ವರದಿಯ ಪ್ರಕಾರ, ರುವಾಂಡಾ (97), ನೈಜೀರಿಯಾ (98), ಅಫ್ಘಾನಿಸ್ತಾನ (99), ಲಿಬಿಯಾ (102), ಮೊಜಾಂಬಿಕ್ (103), ಚಾಡ್ (107) ಸೇರಿದಂತೆ 13 ದೇಶಗಳು ಮಾತ್ರ ಭಾರತ ಹಿಂದಿವೆ.