ETV Bharat / business

'ಕ್ವಾಡ್​' ಒಕ್ಕೂಟದಿಂದ ಇಂಡೋ - ಪೆಸಿಫಿಕ್​​ ವಲಯದಲ್ಲಿ ವೇಗದ ಕೊರೊನಾ ಲಸಿಕೆ ವಿತರಣೆ: ಕ್ವಾಡ್ ಶೃಂಗ - ಕ್ವಾಡ್​ ಶೃಂಗದಲ್ಲಿ ಜೋ ಬೈಡನ್ ಭಾಗಿ

ಕ್ವಾಡ್​ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದ್ದ ಸೂಗಾ ಅವರು ಇಂದು ಮೊದಲ ಬಾರಿಗೆ ಮಾತುಕತೆ ನಡೆಸುತ್ತಿದ್ದಾರೆ.

Quad meet
Quad meet
author img

By

Published : Mar 12, 2021, 1:47 PM IST

ನವದೆಹಲಿ: ಆಸ್ಟ್ರೇಲಿಯಾ, ಭಾರತ, ಜಪಾನ್ ಹಾಗೂ ಅಮೆರಿಕದ ನಾಯಕರನ್ನು ಒಳಗೊಂಡ ಪ್ರಥಮ ಕ್ವಾಡ್​ (ಕ್ವಾಡ್ರಿಲ್ಯಾಟರಲ್​ ಏಷ್ಯನ್​ ಆರ್ಚ್​ ಆಫ್​ ಡೆಮಾಕ್ರಸಿ) ಶೃಂಗಸಭೆ ನಡೆಯುತ್ತಿದೆ.

ಕ್ವಾಡ್​ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದ್ದ ಸೂಗಾ ಅವರು ಇಂದು ಮೊದಲ ಬಾರಿಗೆ ಮಾತುಕತೆ ನಡೆಸುತ್ತಿದ್ದಾರೆ.

ವರ್ಚುಯಲ್ ಸಭೆಯಲ್ಲಿ ಉಚಿತ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶ, ಕೋವಿಡ್​ -19 ನಿಯಂತ್ರಣ, ಉದಯೋನ್ಮುಖ ಮತ್ತು ನಿರ್ಣಾಯಕ ತಂತ್ರಜ್ಞಾನ, ಕಡಲ ಸುರಕ್ಷತೆ ಮತ್ತು ಹವಾಮಾನ ಬದಲಾವಣೆಯಂತಹ ಸಹಕಾರದ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಟೆಸ್ಲಾ ಬಳಿಕ 'ಟ್ರೈಟಾನ್​​ ಎಲೆಕ್ಟ್ರಿಕಲ್​ ವೆಹಿಕಲ್​' ಭಾರತಕ್ಕೆ ಎಂಟ್ರಿ: 21,000 ಜನರಿಗೆ ಉದ್ಯೋಗ

ಅಮೆರಿಕ ಅಧ್ಯಕ್ಷರಾದ ಬಳಿಕ ಜೋ ಬೈಡನ್ ಅವರು ತಮ್ಮ ಮೊದಲ ಬಹುಪಕ್ಷೀಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಿ 7 ನಾಯಕರ ಸಭೆಗೂ ಮುನ್ನ ನಡೆಯುತ್ತಿರುವ ಅಂತಾರಾಷ್ಟ್ರೀಯ ಮತ್ತೊಂದು ಶೃಂಗವಾಗಿದೆ. ಬೈಡನ್ ಅಧಿಕಾರ ವಹಿಸಿಕೊಂಡ ಎರಡು ತಿಂಗಳೊಳಗೆ ನಡೆಯುತ್ತಿದೆ.

ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಲಸಿಕೆ ರಫ್ತು ಮಾಡಲು ಭಾರತದಲ್ಲಿ ಹೊಸ ಉತ್ಪಾದನಾ ಸಾಮರ್ಥ್ಯ ಸೇರ್ಪಡೆ ಮಾಡಲು ಅನುವು ಮಾಡಿಕೊಡುತ್ತದೆ. ಇದು ನಮ್ಮ ಅಸ್ತಿತ್ವದಲ್ಲಿರುವ ಉತ್ಪಾದನಾ ಸಾಮರ್ಥ್ಯಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಕ್ವಾಡ್​ ಮೂಲಗಳು ತಿಳಿಸಿವೆ.

ಕ್ವಾಡ್ ದೇಶಗಳ ವೈಯಕ್ತಿಕ ಸಾಮರ್ಥ್ಯ ಮತ್ತು ಶಕ್ತಿಯು ಈ ಸಂಗ್ರಹವು ಜಾಗತಿಕ ಲಸಿಕೆ ವಿತರಣೆಯನ್ನು ತ್ವರಿತಗೊಳಿಸುವ ಗುರಿ ಹೊಂದಿದೆ. ಇಂಡೋ - ಪೆಸಿಫಿಕ್ ಪ್ರದೇಶದ ಮೇಲೆ ಕೇಂದ್ರೀಕರಿಸುವ ಬೇಡಿಕೆ - ಪೂರೈಕೆ ಅಂತರ ಪೂರೈಸಲು ನೆರವಾಗುತ್ತದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿರಂತರ ಪ್ರಯತ್ನಗಳಿಗೆ ಇದು ವೇಗವನ್ನು ನೀಡುತ್ತದೆ ಎಂದು ಕ್ವಾಡ್ ಶೃಂಗ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.