ಎರ್ನಾಕುಲಂ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದು ಮೂರು ವಿವಾದಾತ್ಮಕ ಕಾನೂನುಗಳ ವಿರುದ್ಧ ರಾಜಸ್ಥಾನ, ಹರಿಯಾಣ ಹಾಗೂ ಪಂಜಾಬ್ ರಾಜ್ಯಗಳ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಬೆನ್ನಲ್ಲೇ ಮೀನುಗಾರರ ಸಮುದಾಯ ಕೇಂದ್ರ ಬ್ಲೂ ಎಕನಾಮಿ (ನೀಲಿ ಆರ್ಥಿಕತೆ) ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿ (ಇಎಸಿ-ಪಿಎಂ) ಸಿದ್ಧಪಡಿಸಿದ ಬ್ಲೂ ಎಕಾನಮಿ ಸಾಗರ ಸಂಪತ್ತು ನೀತಿ ಕರಡು ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ರಾಜ್ಯದ ಮೀನುಗಾರರು ಹೊಸ ನೀತಿಯು ಬಂಡವಾಳಶಾಹಿಯಂತಹ ಉದ್ಯಮಗಳಿಗೆ ಅನುಕೂಲಕರವಾಗಿದೆ ಎಂದು ಸಾಂಪ್ರದಾಯಿಕ ಮೀನುಗಾರರು ಆರೋಪಿಸಿದ್ದಾರೆ.
ರಾಷ್ಟ್ರೀಯ ಮೀನುಗಾರಿಕಾ ನೀತಿಯ ನಂತರ, ಸಾಂಪ್ರದಾಯಿಕ ಮೀನುಗಾರರ ಪರವಾಗಿರದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ನೀಲಿ ಆರ್ಥಿಕ ನೀತಿಯಲ್ಲಿ 'ಅತ್ಯಂತ ಅಪಾಯಕಾರಿ ಶಿಫಾರಸು'ಗಳಿವೆ ಎಂಬ ರಾಜಕೀಯ ಧ್ವನಿ ಮೀರಿದ ಮೀನುಗಾರರ ಸಂಘಗಳು ಮತ್ತು ಸಂಘಗಳು ಒಂದೇ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಇದನ್ನೂ ಓದಿ: ಒಟಿಟಿ ಹೊಸ ನಿಯಮಗಳನ್ನು ಎಲ್ಲಾ ಪ್ಲಾಟ್ಫಾರ್ಮ್ಗಳು ಒಪ್ಪಿಕೊಂಡಿವೆ: ಜಾವಡೇಕರ್
ಫೆಬ್ರವರಿ 17ರಂದು ಬ್ಲೂ ಎಕಾನಮಿ ನೀತಿಯ ಕರಡು ಬಿಡುಗಡೆ ಮಾಡಲಾಯಿತು. ರಾಜ್ಯಗಳು ಮತ್ತು ಅವುಗಳ ಸಂಬಂಧಿತ ಇಲಾಖೆಗಳು ಫೆಬ್ರವರಿ 27ರೊಳಗೆ ತಮ್ಮ ಅಭಿಪ್ರಾಯಗಳೊಂದಿಗೆ ತಿಳಿಸಬೇಕಿದೆ.
ಈ ನೀತಿಯು ಆಯಾ ರಾಜ್ಯಗಳ ಹಕ್ಕುಗಳನ್ನು ಸ್ವಾಧೀನಪಡಿಸಿಕೊಳ್ಳುವುದರ ಜೊತೆಗೆ ಹಿಂದೂ ಮಹಾಸಾಗರದ ಉದ್ದಕ್ಕೂ ಮೀನುಗಾರರು ಮತ್ತು ಕರಾವಳಿ ನಿವಾಸಿಗಳ ಜೀವನ ಮತ್ತು ಜೀವನೋಪಾಯಕ್ಕೆ ಹಾನಿಕಾರಕವಾಗಿದೆ ಎಂದು ಮೀನುಗಾರರ ಆರೋಪಿಸಿದರು.
ಹೊಸ ನೀತಿಯು ಆಯಾ ರಾಜ್ಯದ ಕರಾವಳಿ ಸಮುದ್ರ ತಳದಿಂದ ಸಾಗರ ಸಂಪತ್ತನ್ನು ಗಣಿಗಾರಿಕೆ ಮಾಡುವ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಸಾಗರ್ ಮಾಲಾ ಯೋಜನೆಯ ಭಾಗವಾಗಿ ಯೋಜಿಸಲಾದ ಬೃಹತ್ ಯೋಜನೆ ಮತ್ತು ವ್ಯಾಪಾರೋದ್ಯಮಗಳು ಕರಾವಳಿ ಭಾಗದ ನಿವಾಸಿಗರ ಜೀವನ ಮತ್ತು ಜೀವನೋಪಾಯಕ್ಕೆ ಗಂಭೀರ ಸವಾಲು ಒಡ್ಡುತ್ತವೆ. ಈ ನೀತಿಯು ಭಾರತದ ಸಮುದ್ರ ವಲಯವನ್ನು ಭಾರತೀಯ ಕಾರ್ಪೊರೇಟ್ ಏಕಸ್ವಾಮ್ಯ ಮತ್ತು ವಿದೇಶಿ ಶಕ್ತಿಗಳಿಗೆ ಮಾರಾಟ ಮಾಡುವ ಮುಕ್ತ ಘೋಷಣೆಯಾಗಿದೆ ಎಂದು ಆರೋಪಿಸಲಾಗಿದೆ.
ಬ್ಲೂ ಎಕಾನಮಿ ಡ್ರಾಫ್ಟ್ ನೀತಿಗೆ ವಿರುದ್ಧವಾಗಿ ಒಂದಾಗಿರುವ ರಾಜ್ಯದ ಮೀನುಗಾರರ ಸಮುದಾಯ, ಕೇಂದ್ರವು ಹೊರತಂದಿರುವ ನೀತಿಯು ಮೀನುಗಾರರ ಜೀವನೋಪಾಯವನ್ನು ಹಾಳು ಮಾಡುತ್ತದೆ. ಸಾಗರ ಸಂಪತ್ತನ್ನು ಏಕಸ್ವಾಮ್ಯಗೊಳಿಸುತ್ತದೆ. ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ವಿದೇಶಿ ಶಕ್ತಿಗಳ ಮುಂದೆ ದೇಶದ ಸಾರ್ವಭೌಮತ್ವ ಶರಣಾಗಲಿದೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರವು 60 ರಿಂದ 90 ದಿನಗಳ ಅವಧಿಯಲ್ಲಿ ಕೇಂದ್ರದ ನೀತಿ ನಿರ್ಧಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳು ತಿಳಿಸುವಂತೆ ಕೇಳಿಕೊಂಡಿದೆ. ಈ ಕರಡು ನೀತಿಯನ್ನು ತ್ವರಿತವಾಗಿ ಪ್ರಸ್ತುತಪಡಿಸಿದ ನಂತರ ಅದನ್ನು ಜಾರಿಗೆ ತರಲು ಕೇಂದ್ರದ ಉತ್ಸಾಹಕ್ಕೆ ಹಿನ್ನಡೆ ಆಗಬಹುದು.