ETV Bharat / business

ದೇಶದ GDPಯ ಶೇ.10ರಷ್ಟಾದ 20 ಲಕ್ಷ ಕೋಟಿ ರೂ.ಆರ್ಥಿಕ ಪ್ಯಾಕೇಜ್!

ವಿವಿಧ ರಾಷ್ಟ್ರಗಳು ಕೊರೊನಾ ಪ್ರೇರೇಪಿತ ಲಾಕ್​ಡೌನ್​ನಿಂದ ಉಂಟಾದ ನಷ್ಟ ಪರಿಹಾರವಾಗಿ ತಮ್ಮ ಒಟ್ಟಾರೆ ಜಿಡಿಪಿಯಲ್ಲಿ ಎರಡಂಕಿಯ ಆರ್ಥಿಕ ಪ್ಯಾಕೇಜ್ ನೀಡಿವೆ. ಭಾರತ ಶೇ 1ಕ್ಕಿಂತ ಕಡಿಮೆ ಮೊತ್ತದ ಪರಿಹಾರ ನೀಡಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಮಧ್ಯೆಯೇ ದೇಶದ ಒಟ್ಟಾರೆ ಜಿಡಿಪಿಯಲ್ಲಿ ಶೇ 10ರಷ್ಟು ಅಂದರೆ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಅನ್ನು ಪ್ರಧಾನಿ ಅವರು ಇಂದು ಘೋಷಿಸಿದ್ದಾರೆ.

PM Modi
ಪ್ರಧಾನಿ ಮೋದಿ
author img

By

Published : May 12, 2020, 8:51 PM IST

Updated : May 12, 2020, 8:58 PM IST

ನವದೆಹಲಿ: ದೇಶವ್ಯಾಪಿ 3ನೇ ಹಂತದ ಲಾಕ್​ಡೌನ್ ಅಂತ್ಯಕ್ಕೆ ಕೆಲ ದಿನಗಳು ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಒಟ್ಟು ಜಿಡಿಪಿಯಲ್ಲಿ ಶೇ 10ರಷ್ಟು ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.

ಗುಡಿ ಕೈಗಾರಿಕೆ, ಕರಕುಶಲ ಉದ್ಯಮ, ಎಂಎಸ್​ಎಂಇ ಉದ್ಯಮ, ಮಧ್ಯಮ ವರ್ಗದವರಿಗೆ, ಭಾರತೀಯ ಉದ್ಯೋಗ ಜಗತ್ತಿಗೆ, ನ್ಯಾಯುತವಾಗಿ ತೆರಿಗೆ ಕಟ್ಟುವವರಿಗೆ, ದೇಶಕ್ಕಾಗಿ ಹಗಲಿರುಳು ದುಡಿಯುತ್ತಿರುವ ಶ್ರಮಿಕರಿಗೆ, ರೈತರಿಗೆ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್​ ನೀಡಲಾಗುತ್ತಿದೆ ಎಂದು ಹೇಳಿದರು.
ಕೋಟ್ಯಂತರ ಭಾರತೀಯರ ಆತ್ಮಬಲದ ಭೂಮಿ, ಹಣದ ಹರಿವಿಗೆ, ಸಣ್ಣ ಉದ್ದಿಮೆಗಳಿಗೆ ಈ ಪ್ಯಾಕೇಜ್ ನೆರವಾಗಲಿದೆ. ಪ್ರತಿಯೊಬ್ಬ ನಾಗರಿಕ ಸ್ಥಳೀಯವಾಗಿ ತಯಾರಿಸುವ ಉತ್ಪನ್ನಗಳನ್ನೇ ಖರೀದಿ ಮಾಡಬೇಕು ಎಂದರು.

ಭಾರತದಲ್ಲಿ ಸಂಪನ್ಮೂಲಗಳು ಮತ್ತು ಪ್ರತಿಭೆಗಳಿವೆ ಅಗಾಧ ಪ್ರಮಾಣದಲ್ಲಿದೆ. ಅದು ಉತ್ತಮ ಉತ್ಪನ್ನಗಳನ್ನಾಗಿ ಮಾಡಿ ಗುಣಮಟ್ಟ ಮತ್ತು ಪೂರೈಕೆ ಸರಪಳಿಯನ್ನು ಸುಧಾರಿಸುವಂತೆ ಮಾಡಲಿದೆ. ಕೊರೊನಾ ವೈರಸ್ ಬಿಕ್ಕಟ್ಟು ಒಂದು ದೊಡ್ಡ ಅವಕಾಶ. 21ನೇ ಶತಮಾನದ ಭಾರತವನ್ನು ಬಲಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಭಾರತದ ಸ್ವಾವಲಂಬನೆಯಲ್ಲಿ ಇಡೀ ಪ್ರಪಂಚದ ಸಂತೋಷದ ಕಾಳಜಿ ಇದೆ. ಸಾವು ಮತ್ತು ಯುದ್ಧ ನಡುವೆ ಹೋರಾಟ ಮಾಡುತ್ತಿರುವ ಪ್ರಪಂಚಕ್ಕೆ ಭಾರತದಿಂದ ಸರಬರಾಜು ಮಾಡಲ್ಪಟ್ಟ ಔಷಧಿಗಳು ಹೊಸ ಭರವಸೆಗಳನ್ನು ತುಂಬಿವೆ ಎಂದರು.

Last Updated : May 12, 2020, 8:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.