ETV Bharat / business

ಕೊರೊನಾ ಬಳಿಕ ಭಾರತ ಆಗಲಿದೆ ಜಾಗತಿಕ ಉತ್ಪಾದನಾ ಕೇಂದ್ರ: ಅನುರಾಗ್ ಠಾಕೂರ್ ಪ್ರತಿಪಾದನೆ - ತಯಾರಿಕಾ ಉದ್ಯಮ

ಇಲ್ಲಿಯವರೆಗೆ ಭಾರತವು ಕೊರೊನಾ ವೈರಸ್​ ಎದುರಿಸುವಲ್ಲಿ ಯಶಸ್ವಿಯಾಗಿದೆ. ವ್ಯಾಪಾರ ಪರ - ನೀತಿ ಮತ್ತು ವೈರಸ್ ಹುಟ್ಟಿದ ದೇಶದ ಬಗೆಗಿನ ಹಗೆತನದಿಂದಾಗಿ ವಿಶ್ವದಾದ್ಯಂತದ ಕಂಪನಿಗಳನ್ನು ಆಕರ್ಷಿಸಲು ದೇಶವು ಸಜ್ಜಾಗಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

Manufacturing Industry
ಭಾರತದ ಕೈಗಾರಿಕೆ
author img

By

Published : Apr 25, 2020, 10:30 PM IST

ಹೈದರಾಬಾದ್: ಕೋವಿಡ್ -19 ಬಿಕ್ಕಟ್ಟು ಮುಗಿದ ಬಳಿಕ ಭಾರತವನ್ನು ಮುಂದಿನ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಸರ್ಕಾರ ಬಯಸಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ದೇಶವನ್ನು ಆದ್ಯತೆಯ ಹೂಡಿಕೆ ತಾಣವನ್ನಾಗಿ ಮಾಡಲು ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಕ್ರೋಢೀಕರಿಸುತ್ತಿದೆ ಎಂದು ಫೆಡರೇಷನ್ ಆಫ್ ತೆಲಂಗಾಣ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಎಫ್‌ಟಿಸಿಸಿಐ) ಸದಸ್ಯರು ಮತ್ತು ರಾಜ್ಯದ ಉದ್ಯಮ ಪ್ರತಿನಿಧಿಗಳ ಜತೆ ನಡೆದ ಸಂವಾದದಲ್ಲಿ ಮಾತನಾಡಿದರು.

ಇಲ್ಲಿಯವರೆಗೆ ಭಾರತವು ಕೊರೊನಾ ವೈರಸ್​ ಎದುರಿಸುವಲ್ಲಿ ಯಶಸ್ವಿಯಾಗಿದೆ. ವ್ಯಾಪಾರ ಪರ-ನೀತಿ ಮತ್ತು ವೈರಸ್ ಹುಟ್ಟಿದ ದೇಶದ ಬಗೆಗಿನ ಹಗೆತನದಿಂದಾಗಿ ವಿಶ್ವದಾದ್ಯಂತದ ಕಂಪನಿಗಳನ್ನು ಆಕರ್ಷಿಸಲು ದೇಶವು ಸಜ್ಜಾಗಿದೆ ಎಂದರು.

ಭಾರತೀಯರ ಸಕ್ರಿಯ ಬದ್ಧತೆಯಿಂದ ಕೋವಿಡ್ -19 ಅನ್ನು ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಆರ್ಥಿಕತೆಯ ಸಕಾರಾತ್ಮಕ ಪುನರುಜ್ಜೀವನ ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಇನ್ನೂ ಹಲವು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು.

ಕೋವಿಡ್ -19ರ ನಂತರ ಈ ರಾಷ್ಟ್ರವನ್ನು ಮುಂದಿನ ಉತ್ಪಾದನಾ ಕೇಂದ್ರವಾಗಿಸಲು ನಾವು ಬದ್ಧರಾಗಿದ್ದೇವೆ. ಕಾರ್ಮಿಕ ಕಾನೂನುಗಳ ಬಲವರ್ಧನೆ, ಹೊಂದಾಣಿಕೆಗಳ ಕಡಿಮೆ ಮಾಡಿ ದೇಶವನ್ನು ಹೂಡಿಕೆಗಳತ್ತ ಹೆಚ್ಚು ಆದ್ಯತೆ ನೀಡುವ ಕೆಲವು ಕ್ರಮಗಳು ತೆಗೆದುಕೊಳ್ಳಬೇಕಿದೆ. ಕೋವಿಡ್ -19 ನಮಗೆ ಸವಾಲು ಮತ್ತು ಅವಕಾಶವನ್ನೂ ಒದಗಿಸಿದೆ ಎಂದು ಠಾಕೂರ್ ಅಭಿಪ್ರಾಯಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.